SEMINAR ON DISEASES

Held by SANJEEVINI eco club GHS talewad.

SBNN GOVT HIGH SCHOOL, TALEWAD

Our beatifu school with coverd lott of trees and garden.

INTERNATIONAL YOGA DAY

300 above students participated in this celebration.

PATIBHA KARANJI AT MULAWAD

Our students participated and won many events.

PRACTICAL IN ATL LAB

Our students participated in atal thinkaring lab.

Sunday, February 11, 2024

SCIENCE EXHIBITION

Saturday, February 10, 2024

DESHI AATAGALU


Friday, February 9, 2024

ಒಬ್ಬರೊಂದಿಗೆ ಹೋಲಿಸಿಕೊಂಡು ಬದುಕಬೇಡಿ ಎಂದು ಹೇಳುವ ಸೊಗಸಾದ ಕಥೆ*



 ಒಬ್ಬರೊಂದಿಗೆ ಹೋಲಿಸಿಕೊಂಡು ಬದುಕಬೇಡಿ ಎಂದು ಹೇಳುವ ಸೊಗಸಾದ ಕಥೆ*

ತಮಗಿರುವ ಸೌಲಭ್ಯಗಳು, ಅವಕಾಶಗಳಿಗಿಂತ ಇತರರಿಗೆ ಉತ್ತಮವಾದ ಸೌಲಭ್ಯಗಳು ಇವೆ ಎಂದು ಕೆಲವರು ಭಾವಿಸುತ್ತಾರೆ. ಹಣ, ಸೌಂದರ್ಯ, ಓದು, ಆಸ್ತಿ, ಹುದ್ದೆ…ಹೀಗೆ ಪ್ರತಿ ವಿಷಯದಲ್ಲೂ ಇತರರ ಜತೆಗೆ ಹೋಲಿಸಿಕೊಳ್ಳುತ್ತಿರುತ್ತಾರೆ. ಈ ರೀತಿ ಇನ್ನೊಬ್ಬರ ಜತೆಗೆ ನಮ್ಮನ್ನು ಹೋಲಿಸಿಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ. ನಮಗಿರುವ ಸೌಲಭ್ಯಗಳನ್ನು ಬಳಸುತ್ತಾ ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಇನ್ನಷ್ಟು ಉತ್ತಮ ಪ್ರಯತ್ನ ಮಾಡಬೇಕೆ ಹೊರತು ಇತರರ ಜತೆಗೆ ಹೋಲಿಸಿಕೊಂಡು ನರಳಬಾರದು. ಆ ರೀತಿಯ ಸಂದೇಶವನ್ನು ನೀಡುವ ಒಂದು ಒಳ್ಳೆಯ ಕಥೆ ಸದ್ಯಕ್ಕೆ ವೈರಲ್ ಆಗಿದೆ. ಕೆಲವು ಪಕ್ಷಿಗಳ ಮೂಲಕ ನಮ್ಮ ಆಲೋಚನೆ ವಿಷಯವನ್ನು ಸರಳವಾಗಿ ಹೇಳಿದ್ದಾರೆ ಈ ಕಥೆಯಲ್ಲಿ.




ಒಂದು ಕಾಡಿನಲ್ಲಿ ಒಂದು ಕಾಗೆ ವಾಸವಾಗಿತ್ತು. ಅದರ ಜೀವನ ಸೊಗಸಾಗಿ ಸಾಗುತ್ತಿತ್ತು. ಆದರೆ ಪಕ್ಕದಲ್ಲೇ ಇದ್ದ ಕೊಳದಲ್ಲಿನ ಹಂಸವನ್ನು ನೋಡಿ ‘ಅದು ತುಂಬಾ ಬೆಳ್ಳಗೆ, ಸುಂದರವಾಗಿ ಇದೆ. ನಾನು ಕಪ್ಪಗಿದ್ದೇನೆ’ ಎಂದು ನೋವನುಭವಿಸುವುದನ್ನು ಆರಂಭಿಸಿತು. ಒಂದು ದಿನ ಹಂಸದ ಬಳಿ ಹೋಗಿ ‘ನೀನು ತುಂಬಾ ಸುಂದರವಾಗಿ ಇರುತ್ತೀಯ. ಆನಂದವಾಗಿಯೂ ಇರುತ್ತೀಯ ಅಲ್ಲವೇ’ ಎಂದಿತು. ಕಾಗೆ ಮಾತಿಗೆ ಹಂಸ ಉತ್ತರ ಕೊಡುತ್ತಾ, ‘ನಿಜ ನಾನು ಸುಂದರವಾಗಿರುತ್ತೇನೆ. ಆದರೆ ಗಿಳಿರಾಮ ನನಗಿಂತಲೂ ಎರಡು ಬಣ್ಣಗಳಲ್ಲಿ ಸುಂದರವಾಗಿರುತ್ತದೆ. ಅದರ ಜತೆ ಹೋಲಿಸಿದರೆ ನಾನೇನು ಅಲ್ಲ’ ಎಂದು ಬೇಸರಿಸಿಕೊಂಡಿತು. ಇದನ್ನು ಕೇಳಿದ ಕಾಗೆ ಗಿಳಿ ಬಳಿಗೆ ಹೋಗಿ, ‘ಹಂಸಕ್ಕಿಂತಲೂ ಸುಂದರವಾಗಿ ನೀನಿದ್ದೀಯ’ ಎಂದಿತು. ಈ ಮಾತಿಗೆ ಗಿಳಿ, ‘ನನ್ನದೇನಿದೆ ಕೇವಲ ಎರಡು ಬಣ್ಣಗಳು. ನವಿಲು ಬಣ್ಣಬಣ್ಣದ ಗರಿಗಳಿಂದ ತುಂಬಾ ಸುಂದರವಾಗಿರುತ್ತದೆ. ಅದನ್ನು ನೋಡಲು ಜನ ಪೈಪೋಟಿ ಬೀಳುತ್ತಿರುತ್ತಾರೆ. ‘ ಎಂದಿತು. ನವಿಲನ್ನು ನೋಡಲು ಕಾಗೆ ಜೂಗೆ ಹೋಯಿತು. ಅಲ್ಲಿ ಅದನ್ನು ನೋಡಲು ಜನ ಗುಂಪು ಗುಂಪಾಗಿದ್ದಾರೆ. ಅವರೆಲ್ಲಾ ಹೊರಟು ಹೋದ ಮೇಲೆ ನವಿಲಿನೊಂದಿಗೆ ಕಾಗೆ, ‘ನೀನು ಹಂಸ, ಗಿಳಿಗಿಂತಲೂ ತುಂಬಾ ಸುಂದರವಾಗಿದ್ದೀಯ. ನೀನು ಅದೃಷ್ಟವಂತೆ. ನಿನ್ನ ನೋಡಲು ಜನರೆಲ್ಲಾ ಬರುತ್ತಿದಾರೆ.’ ಇದರಿಂದ ನವಿಲು ಭಯದಿಂದ ‘ಹಾಂ ಏನು ಅದೃಷ್ಟ ಬಿಡಮ್ಮ…ಸುಂದರವಾಗಿದ್ದೀನಿ ಎಂದು ಈ ಜೂನಲ್ಲಿ ನನ್ನನ್ನು ತಂದು ಹಾಕಿದ್ದಾರೆ. ಇಲ್ಲಿ ಒಂದೇ ಒಂದು ಕಾಗೆ ಸಹ ಇಲ್ಲ. ಅವೆಲ್ಲಾ ಹಾಯಾಗಿ ಹೊರಗಿನ ಪ್ರಪಂಚದಲ್ಲಿ ಓಡಾಡಿಕೊಂಡಿವೆ. ನಾನು ಕಾಗೆಯಾಗಿ ಯಾಕೆ ಹುಟ್ಟಲಿಲ್ಲ ಎಂದು ಎಷ್ಟೋ ಸಲ ವ್ಯಥೆ ಪಟ್ಟಿದ್ದೇನೆ. ‘ ಎಂದು ನವಿಲು ಹೇಳಿದ ಬಳಿಕ ಕಾಗೆಗೆ ಜ್ಞಾನೋದಯವಾಯಿತು.




ಮನುಷ್ಯರಲ್ಲೂ ಇತರರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವವರಿಗೇನು ಬರವಿಲ್ಲ. ಈ ರೀತಿ ಮಾಡುತ್ತಾ ತಮ್ಮಲ್ಲಿನ ಜ್ಞಾನವನ್ನು, ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಅವರವರ ವಿಶೇಷತೆ ಅವರಿಗೆ ಇದ್ದೇ ಇರುತ್ತದೆ. ಅವರವರ ಸಮಸ್ಯೆಗಳೂ ಅವರವರಿಗೆ ಇರುತ್ತವೆ. ನಮಗೆ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಸದ್ಭಳಕೆ ಮಾಡಿಕೊಂಡರೆ ಸಂತೃಪ್ತಿಯಾಗಿ ಜೀವಿಸಬಹುದು ಎಂಬುದನ್ನು ನಮಗೆ ನೆನಪಿಸುತ್ತದೆ.




ಕೃಪೆ: kannada+.

ಸಂಗ್ರಹ :ವೀರೇಶ್ ಅರಸಿಕೆರೆ. 

ಪರಿಶ್ರಮದ ಮಹತ್ವ. 💐


ಪರಿಶ್ರಮದ ಮಹತ್ವ. 💐

ಇಂದಿನ ದಿನಗಳಲ್ಲಿ ಮಾನವನನ್ನು ಕಾಡುವ ಅನೇಕ ತೊಂದರೆಗಳಲ್ಲಿ ನಿದ್ರೆ ಬರದಿರುವ ಕಾಯಿಲೆಯೂ ಒಂದು. ನಗರಗಳಲ್ಲಿ ಬಹಳ ಮಂದಿಗೆ ನಿದ್ದೆಯ ಗುಳಿಗೆಗಳನ್ನು ನುಂಗಿದ ಬಳಿಕವೇ ನಿದ್ದೆ ಬರುತ್ತದೆ. ನಮ್ಮ ಔಷಧಾಲಯಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ಮದ್ದೆಂದರೆ-ನಿದ್ರಾ ಗುಳಿಗೆಯೆನ್ನುತ್ತಾರೆ. ಆದರೆ ಹೀಗೆ ನಿದ್ರಾ ಗುಳಿಗೆಯನ್ನು ನುಂಗುವುದು ತಪ್ಪು. ಏಕೆಂದರೆ ಅದೊಂದು ಕೆಟ್ಟ ಚಟವಾಗಿ ಬಿಡುವ ಅಪಾಯವಿದೆ-ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ. ಹಾಗಿದ್ದರೆ ಸಹಜವಾಗಿ ನಿದ್ದೆ ಬರುವಂತೆ ಮಾಡುವ ವಿಧಾನವೇನು ? ಎಂಬುದನ್ನು ತಿಳಿಸುವ ಒಂದು ರೋಚಕ ಪ್ರಸಂಗ ಇಲ್ಲಿದೆ. ಮೊಗಲ ವಂಶದ ಅರಸನಾದ ಅಕ್ಬರನಿಗೆ ಅತ್ಯಂತ ಆತ್ಮೀಯ ಒಡನಾಡಿಯಾಗಿದ್ದವನು-ಬೀರ್‌ಬಲ್. ಇಬ್ಬರೂ ಜತೆಯಾಗಿ ಸಂಜೆಯ ವಾಯು-ವಿಹಾರಕ್ಕೆ ಒಂದು ಹಳ್ಳಿಯ ರಸ್ತೆಯಲ್ಲಿ ಹೊರಟಿದ್ದರು. ದಾರಿಯಲ್ಲಿ ಕಲ್ಲು-ಮುಳ್ಳು ತುಂಬಿದ್ದುದರಿಂದ ಕಾಲಿಗೆ ಚುಚ್ಚ ತೊಡಗಿದವು. ಅಕ್ಬರನಿಗೆ ನಡೆಯುವುದೇ ಕಷ್ಟವಾಯಿತು. ಆದರೆ ಅದೇ ರಸ್ತೆಯ ಪಕ್ಕದಲ್ಲಿ ಹರಡಿದ್ದ ಕಲ್ಲುಗಳ ಮೇಲೆ ಚಾಪೆಯೊಂದನ್ನು ಬಿಡಿಸಿ, ಅದರ ಮೇಲೊಬ್ಬ ಕೂಲಿಕಾರ ಮಲಗಿದ್ದ; ಗಾಢನಿದ್ರೆಯಲ್ಲಿದ್ದ. ಅರಸನಿಗೆ ಆಶ್ಚರ್ಯವಾಯಿತು. ಬೀರ್‌ಬಲ್ಲನೊಡನೆ 'ಇದರ ಒಳಗುಟ್ಟೇನು ?' ಎಂದು ಪ್ರಶ್ನಿಸಿದ. ಬೀರ್‌ಬಲ್ 'ಅವನನ್ನು ಅರಮನೆಗೆ ಕರೆದೊಯ್ದು ವಿಚಾರಿಸೋಣ' ಎಂದು ನುಡಿದ, ಅರಮನೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿಸಿದ. ಆದರೆ ಅರಮನೆಗೆ ತಲಪಿದ ಬಳಿಕ, ಒಳ್ಳೆಯ ಊಟ ಮಾಡಿಸಿ, ಒಳ್ಳೆಯ ಹಾಸಿಗೆಯ ಮೇಲೆ ಮಲಗಿಸಿದರೂ ಆ ಕೂಲಿಕಾರನಿಗೆ ನಿದ್ದೆಯೇ ಬರಲಿಲ್ಲ. ಬಹುಶಃ ಚಾಪೆಯಡಿಯಲ್ಲಿ ಕಲ್ಲು ಇದ್ದರೆ ನಿದ್ದೆ ಬರುತ್ತದೆ ಎಂದು ಭಾವಿಸಿ ಹಾಸಿಗೆಯಡಿಯಲ್ಲಿ ಕಲ್ಲುಗಳನ್ನು ಹರಡಿ ಮಲಗಿಸಿದರು. ಊಹೂಂ, ನಿದ್ದೆ ಬರಲೇ ಇಲ್ಲ. ಆಗ ಕೂಲಿಕಾರನನ್ನೇ 'ನಿನಗೇಕೆ ನಿದ್ದೆ ಬರುತ್ತಿಲ್ಲ ?' ಎಂದು ಪ್ರಶ್ನಿಸಿದಾಗ, ಅವನು ಹೀಗೆ ಉತ್ತರಿಸಿದ 'ಮಹಾರಾಜರೆ, ನಾನೊಬ್ಬ ರೈತ. ದಿನವಿಡೀ ಹೊಲದಲ್ಲಿ ದುಡಿದಾಗ, ನನಗೆ ತಾನಾಗಿಯೇ ನಿದ್ದೆ ಬರುತ್ತದೆ. ಈ ಅರಮನೆಗೆ ಬಂದಾಗ ಅಂತಹ ದುಡಿತ, ಪರಿಶ್ರಮವಿಲ್ಲದೆ ನಿದ್ದೆ ಬರುತ್ತಿಲ್ಲ' ಈ ಮಾತನ್ನು ಕೇಳಿದಾಗ ಅಕ್ಬರನು ಸಂತಸದಿಂದ 'ಶಾಭಾಷ್' ಎಂದು ಚಪ್ಪಾಳೆ ತಟ್ಟಿದ. ಬೀರ್‌ಬಲ್‌ನೂ ಆನಂದದಿಂದ ಅರಸನನ್ನು ಅನುಕರಿಸುತ್ತಾ ಚಪ್ಪಾಳೆ ತಟ್ಟಿದ. ಇಲ್ಲಿ ಸಹಜ-ನಿದ್ರೆಯ ರಹಸ್ಯ ಮತ್ತು ಪರಿಶ್ರಮದ ಮಹತ್ವ ಅಡಗಿದೆ. ದುಡಿದು ತಿನ್ನುವ ರೈತರು, ಕೂಲಿಕಾರರು, ಜನಸಾಮಾನ್ಯರು ತಮ್ಮ ಪರಿಶ್ರಮದಿಂದ ಇಮ್ಮಡಿ ಲಾಭವನ್ನು ಪಡೆಯುತ್ತಾರೆ. ಹೊಲದಲ್ಲಿ ದುಡಿಯುವುದರಿಂದ ದೊರೆಯುವ ಆರ್ಥಿಕ ಲಾಭದೊಂದಿಗೇ, ದೈಹಿಕ ಆರೋಗ್ಯ ಲಾಭವನ್ನೂ ಪಡೆಯುತ್ತಾರೆ. ಈ ಆರೋಗ್ಯ ಲಾಭಕ್ಕೆ ಬೆಲೆ ಕಟ್ಟಲು ಸಾಧ್ಯವೇ ? - ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ

ಸಂಗ್ರಹ : ವೀರೇಶ್ ಅರಸಿಕೆರೆ.

ಶ್ರದ್ಧೆ ಮತ್ತು ಅದಮ್ಯ ಉತ್ಸಾಹ

 

💐ಶ್ರದ್ಧೆ💐
  ಚಿಕ್ಕವರಾದರೇನು ದೊಡ್ಡವರಾದರೇನು ಶ್ರದ್ಧೆ ಉಳ್ಳವರು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು, ಶ್ರದ್ಧೆಯಿಲ್ಲದವರು ಎಂಥವರಿದ್ದರೂ ಏನನ್ನೂ ಸಾಧಿಸಲಾರರು. ಸಿದ್ಧಿಯ ಶ್ರೀ ಗಿರಿಯತ್ತ ನಮ್ಮನ್ನು ಕೈಹಿಡಿದು ಮುನ್ನಡೆಸುವುದೇ ಈ ಶ್ರದ್ಧೆ.
 ಒಂದು ಭದ್ರವಾದ ಕೋಟೆಯ ಗೋಡೆ ಇತ್ತು ಅದರಲ್ಲಿ ಆಲದ ಮರದ ಒಂದು ಚಿಕ್ಕಬೀಜ ಬಂದು ಬಿದ್ದಿತು. ಕೋಟೆ ಗೋಡೆಯು ದರ್ಪದಿಂದ ಕೇಳಿತು- "ಇಲ್ಲಿ ಮಣ್ಣಿಲ್ಲ, ನೀರಿಲ್ಲ ನೀನು ಹೇಗೆ ಬೆಳೆಯುತ್ತಿ?" "ನೂಡುತ್ತಿರು ನಾನು ಹೇಗೆ ಬೆಳೆಯುತ್ತೇನೆ!" ಎಂದಿತು ಬೀಜ.ಅಷ್ಟರಲ್ಲಿ ಮಳೆ ಬಿದ್ದಿತು. ಅಷ್ಟು ಹಸಿ ಸಾಕಾಗಿತ್ತು. ಅದು ಬೇರು ಬಿಟ್ಟಿತು. ಬಿಗಿ ಹಿಡಿಯಿತು. ನಿಧಾನವಾಗಿ ಗಾಳಿ ಧೂಳ ಬಳಸಿಕೊಂಡು ಮೊಳಕೆಯೊಡೆಯಿತು. ದಿನಗಳು ಉರುಳಿದವು. ಋತುಗಳು ಸರಿದವು. ಬೇರು ಬಲಿಷ್ಠವಾಯಿತು! ಕೋಟೆಗೋಡೆ ಸಡಿಲಾಯಿತು!! ಚಿಕ್ಕ ಬೀಜದ ಶ್ರದ್ಧೆಗೆ ಭದ್ರವಾದ ಕೋಟೆಗೋಡೆಯು ನಡುಗಿ ಹೋಗಿತ್ತು.!

 💐ಅದಮ್ಯ ಉತ್ಸಾಹ💐
    ತೇನಸಿಂಗನು ಉತ್ಸಾಹಿ ಬಾಲಕ, ದನಗಾಯಿ ಹಿಮದ-ಬೆಟ್ಟಗಳ ಮಧ್ಯಮ ಚಿಕ್ಕ ಗ್ರಾಮದಲ್ಲಿ ವಾಸಿಸುತ್ತಿದ್ದನು. ದಿನ ಬೆಳಗಾದರೆ ಜಗತ್ತಿನ ಅತ್ಯುನ್ನತ ಪರ್ವತ ಎವರೆಸ್ಟ್ ಶಿಖರದ ದರ್ಶನ ಆಗುತ್ತಿತ್ತು! ಒಂದು ದಿನ ಅವನು ತಾಯಿಗೆ ಕೇಳಿದ- "ಈ ಶಿಖರವನ್ನು ಯಾರಾದರೂ ಹತ್ತಿರುವರೇನಮ್ಮ?" ತಾಯಿ ಹೇಳಿದಳು- "ಇಲ್ಲ ಮಗು, ಇದೂವರೆಗೆ ಜಗತ್ತಿನಲ್ಲಿ ಯಾರೂ ಅದನ್ನು ಹತ್ತಿಲ್ಲ;  ಹತ್ತುವ ಪ್ರಯತ್ನವನ್ನೂ ಮಾಡಿಲ್ಲ!" ಅದೇ ದಿನ ತೇನಸಿಂಗನು ಶಿಖರವನ್ನು ಹತ್ತುವ ನಿರ್ಣಯ ಮಾಡಿದ. ಅದೆಂಥ ನಿರ್ಣಯವದು!  ಕುಳಿತರೆ ನಿಂತರೆ ಅದರದೆ ಕನಸು! ಅದೆಷ್ಟು ಬಾರಿ ಆತ ಕನಸಿನಲ್ಲಿ ಆ ಶಿಖರವನ್ನು ಏರಿ ಇಳಿದನೋ; ಇಳಿದು ಏರಿದನೋ? ಸದಾ ಮನಸಿನಲ್ಲಿ ಅದರದೇ ಚಿಂತನೆ. ಅದೇನು ಸಾಮಾನ್ಯ ಶಿಖರವಲ್ಲ.  ಆ ಶಿಖರವನ್ನು ಏರುವಾಗ ಯಾವುದೇ ಕ್ಷಣವೂ ಜೀವನದ ಕೊನೆಯ ಕ್ಷಣವಾಗಬಹುದು. ಆದರೆ ಆತ ಅಷ್ಟೇ ಛಲದಿಂದ, ಉತ್ಸಾಹದಿಂದ, ಪ್ರೇಮದಿಂದ ನಿರಂತರ ಪ್ರಯತ್ನಿಸಿದ. ಅದ್ಭುತ ಸಾಧನೆಯದು. ಶಿಖರವನ್ನೇರುವ ಕನಸು ಆತನ ಮೈ-ಮನವನುಂಡು ಪ್ರಾಣಕ್ಕೆ ಪ್ರಾಣವಾಯಿತು. ಒಂದು ದಿನ ಆತನ ಕನಸು ನನಸಾಯಿತು! ಜಗತ್ತಿನ ಅತ್ಯುನ್ನತ ಶಿಖರವನ್ನು ಏರಿದ ಪ್ರಪ್ರಥಮ ವ್ಯಕ್ತಿಯಾದ! ಆತನದು ಅದಮ್ಯ ಉತ್ಸಾಹ!

ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ.                                    ಸಂಗ್ರಹ: ವೀರೇಶ್ ಅರಸಿಕೆರೆ.

ATL MODELS

 

ATL MODELS

SL.NO

MODELS

01

ATL DIFFERENT MODELS

02

SMART STREET LIGHT

03

SMART PARKING

04

 

05

 

06

 

07

 

08

 

09

 

10

 

11

 

12

 

ನುಡಿ ಮುತ್ತುಗಳು

 ಸತ್ಯದ ದಾರಿಯಲ್ಲಿ ನಡೆಯುವ ಜನರಿಗೆ ಅಡ್ಡಿ ಆತಂಕಗಳು, ಸಮಸ್ಯೆಗಳು, ಅವಶ್ಯವಾಗಿ ಎದುರಾಗುತ್ತವೆ. ಆದರೆ, ನಂಬಿರುವ ದೇವರು ಅವರ ಜೀವನದ ದೋಣಿಯನ್ನು ಎಂದು ಮುಳುಗಳು ಬಿಡುವುದಿಲ್ಲ.

ಪದೇ ಪದೇ ನಿನಗೆ ಕಷ್ಟಗಳು ಬರುತ್ತಿವೆ ಎಂದರೆ, ನಿನ್ನ ಹಣೆಯ ಬರಹ ಸರಿಯಿಲ್ಲ ಅಂತಲ್ಲ. ಮುಂದೆ ನಿನಗೋಸ್ಕರ ತುಂಬಾ ಒಳ್ಳೆಯ ದಿನಗಳು ಕಾಯುತ್ತಿವೆ ಎಂದರ್ಥ.

ನಿಧಾನವಾಗಿ ಬೆಳೆಯುವವರನ್ನು ನೋಡಿ ನಗಬೇಡಿ. ಏಕೆಂದರೆ, ಓಡುವ ಮೊಲಕ್ಕಿಂತ ನಡೆದಾಡುವ ಆಮೆಗೆ ಆಯಸ್ಸು ಜಾಸ್ತಿ.

ನಮ್ಮನ್ನು ಯಾರೂ ಗೌರವಿಸುತ್ತಿಲ್ಲ ಅಂತ ಬೇಜಾರಾಗಬೇಡಿ. ಏಕೆಂದರೆ, ಬಟ್ಟೆಯ ಅಂಗಡಿಯಲ್ಲಿ ಒಬ್ಬರಿಗೆ ಇಷ್ಟವಾಗದೆ ಬಿಟ್ಟು ಹೋದ ಬಟ್ಟೆಗಳು ಮತ್ತೊಬ್ಬರಿಗೆ ತುಂಬಾ ಇಷ್ಟವಾಗುತ್ತವೆ. ಜೀವನ ಕೂಡ ಅಷ್ಟೇ.

ನೀನು ಹತ್ತಿರ ಏನು ಇದ್ಯೋ ಅದನ್ನು ದೇವರು ಕೊಟ್ಟಿದ್ದಾನೆ ಎಂದು ಸಂತೋಷದಿಂದ ಇರು. ನಿನ್ನ ಹತ್ತಿರ ಏನು ಇಲ್ವೋ ಅದನ್ನು ದೇವರು ಕೊಡುತ್ತಾನೆ ಎಂದು ನಂಬಿಕೆಯಿಂದ ಇರು.

ಮನೆಯಿಂದ ಹೊರಗೆ ಹೋಗುವಾಗ “ಬುದ್ದಿ” ಜೊತೆಯಲ್ಲಿರಬೇಕು. ಯಾಕೆಂದರೆ, ಈ ಪ್ರಪಂಚವೇ ಒಂದು ಸಂತೆ. ಆದರೆ, ಮನೆಯ ಒಳಗೆ ಬರುವಾಗ “ಹೃದಯ” ಜೊತೆಯಲ್ಲಿರಬೇಕು. ಯಾಕೆಂದರೆ, ಅಲ್ಲಿರುವುದು ಒಂದು ಸುಂದರವಾದ “ಕುಟುಂಬ”

ಮನುಷ್ಯ ತನ್ನ ಬದುಕಿನ ಜೊತೆ ಏಕಾಂಗಿಯಾಗಿ ಹೋರಾಡುವುದನ್ನು ಕಲಿಯಬೇಕು. ಇಲ್ಲವಾದರೆ, ಅವನ ಮನಸ್ಸೇ ಅವನ ಪತನಕ್ಕೆ ಕಾರಣವಾಗುತ್ತದೆ.

ಬರೀ ಹಣ ಸಂಪಾದನೆ ಮಾಡುವುದಕ್ಕೆ ಮಾತ್ರವೇ ಜೀವಿಸಬೇಡ. ನೀನು ಸತ್ತಾಗ ನಿನ್ನನ್ನು ಕರೆದುಕೊಂಡು ಹೋಗೋ ಯಮ ನೀನು ಕೊಡೋ ಲಂಚವನ್ನು ಸ್ವೀಕರಿಸುವುದಿಲ್ಲ. ನೀನು ಮಾಡಿರುವ ಪಾಪ – ಪುಣ್ಯವನ್ನು ಮಾತ್ರ ನೋಡುತ್ತಾನೆ.

ಯಾರೋ ಏನೋ ಅಂದುಕೊಳ್ಳುತ್ತಾರೆ ಅಂತ ಹೆದರಿ ನೀ ಬದುಕಬೇಡ. ಆಡಿಕೊಳ್ಳುವವರು ಯಾರೇ ಬಂದು ನಮ್ಮ ಜೀವನವನ್ನು ನಡೆಸುವುದಿಲ್ಲ, ನಮ್ಮ ಜೀವನವನ್ನು ನಾವೇ ನಡೆಸಬೇಕು.

ಗಿಡ ಯಾವತ್ತೂ ಉದುರಿ ಹೋದ ಎಲೆ, ಹೂವುಗಳ ಬಗ್ಗೆ ಯೋಚಿಸುವುದಿಲ್ಲ. ಹೊಸ ಹೂವಿನ ಸೃಷ್ಟಿಯೇ ಅದರ ಧ್ಯಾನ. ಕಳೆದು ಹೋದುದಕ್ಕೆ ಚಿಂತೆ ಬೇಡ. ಹೊಸತನ್ನು ಸೃಷ್ಟಿಸುವ ಉತ್ಸಾಹವಿರಲಿ.

ವಚನಗಳು

 

ಬಸವಣ್ಣನವರ ವಚನಗಳು

ಕ್ರ.ಸಂ

ವಚನಗಳು

01

ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು, ನಿಮ್ಮ ನಿಲುವು ಕೂಡಲಸಂಗಮದೇವಾ, ಕನ್ಯೆಯ ಸ್ನೇಹದಂತಿದ್ದಿತ್ತು.

02

ಕಾಳಿಯ ಕಣ್ ಕಾಣದಿಂದ ಮುನ್ನ, ತ್ರಿಪುರ ಸಂಹಾರದಿಂದ ಮುನ್ನ, ಹರಿವಿರಂಚಿಗಳಿಂದ ಮುನ್ನ, ಉಮೆಯ ಕಳ್ಯಾಣದಿಂದ ಮುನ್ನ, ಮುನ್ನ, ಮುನ್ನ, ಮುನ್ನ, - ಅಂದಿಂಗೆಳೆಯ ನೀನು, ಹಳೆಯ ನಾನು ಮಹಾದಾನಿ ಕೂಡಲಸಂಗಮದೇವಾ.

03

ಅಯ್ಯಾ, ನೀನು ನಿರಾಕಾರವಾಗಿರ್ದಲ್ಲಿ ನಾನು ಜ್ನಾನವೆಂಬ ವಾಹನವಾಗಿರ್ದೆ, ಕಾಣಾ ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿರ್ದೆ, ಕಾಣಾ ಅಯ್ಯಾ, ನೀನು ಆಕಾರವಾಗಿರ್ದಲ್ಲಿ ನಾನು ವೃಶ್ಹಭನೆಂಬ ವಾಹನವಾಗಿರ್ದೆ ಕಾಣಾ ಅಯ್ಯಾ; ನೀನೆನ್ನ ಭವದ ಕೊಂದಿಹೆನೆಂದು ಜಂಗಮ ಲಾಂಚ್ಹನನಾಗಿ ಬಂದಲ್ಲಿ ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ ಕೂಡಲಸಂಗಮದೇವಾ

04

ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿಯಾನು ಬದುಕಿದೆನಯ್ಯಾ. ಅದೇನು ಕಾರಣ ತಂದೆಯಿಂದರಿದೆನಯ್ಯಾ. ಅರಿದರಿದು ನಿಮ್ಮ ಶರಣನು ಆಚರಿಸುವಾಚರಣೆಯ ಕಂಡು ಕಣ್ದೆರೆದೆನಯ್ಯಾ ಕೂಡಲಸಂಗಮದೇವಾ.

05

ಸಂಸಾರ ಸಾಗರನ ತೆರೆಕೊಬ್ಬಿ ಮುಖದ ಮೇಲೆ ಅಲೆಯುತ್ತಿದ್ದುದೇ ನೋಡಾ! ಸಂಸಾರಸಾಗರ ಉರದುದ್ದವೇ? ಹೇಳಾ! ಸಂಸಾರ ಸಾಗರ ಕೂರಲುದ್ದವೇ? ಹೇಳಾ? ಸಂಸಾರ ಸಾಗರ ಸಿರದುದ್ದವಾದ ಬಳಿಕ ಏನ ಹೇಳುವೆನಯ್ಯಾ? ಅಯ್ಯಾ, ಅಯ್ಯಾ, ಎನ್ನ ಹುಯ್ಯಲ ಕೇಳಯ್ಯ? ಕೂಡಲಸಂಗಮದೇವಾ ನಾನೇನೆನುವೆನಯ್ಯಾ?

06

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ! ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ! ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ! ಇದಾವ ಪರಿಯಲ್ಲಿ ಕಾಡಿತ್ತು ಮಾಯೆ ಈ ಮಾಯೆಯ ಕಳೆವೊಡೆ ಯೆನ್ನಳವಲ್ಲ, ನೀವೇ ಬಲ್ಲಿರಿ ಕೂಡಲಸಂಗಮದೇವಾ.

07

ನೀನೊಲಿದಡೆ ಕೊರಡು ಕೊನರುವುದಯ್ಯಾ,ನೀನೊಲಿದಡೆ ಬರಡು ಹಯನಹುದಯ್ಯಾ,ನೀನೊಲಿದಡೆ ವಿಷವೆಲ್ಲ ಅಮೈತವಹುದಯ್ಯಾ,ನೀನೊಲಿದಡೆ ಸಕಲ ಪಡಿಪದಾರ್ಥಇದಿರಲ್ಲಿರ್ಪುವು ಕೂಡಲಸಂಗಮದೇವಾ.

08

ಭವಭವದಲ್ಲಿ ಎನ್ನ ಮನವು ಸಿಲುಕದೆಭವಭವದಲ್ಲಿ ಎನ್ನ ಮನವು ಕಟ್ಟದೆಭವಸಾಗರದಲ್ಲಿ ಮುಳುಗದೆಭವರಾಟಳದೊಳು ತುಂಬದೆ ಕೆಡಹದೆಭವವಿರಹಿತ ನೀನು, ಅವಧಾರುಕರುಣಿಸು ಕೂಡಲಸಂಗಮದೇವಾ.

09

ನೋಡಿ ನೋಡಿ ಮಾಡುವ ನೇಮ ಸಲ್ಲವು, ಸಲ್ಲವು.ತನುವುದ್ದೇಶ, ಮನವುದ್ದೇಶವಾಗಿಮಾಡುವ ನೇಮ ಸಲ್ಲವು, ಸಲ್ಲವು.ಗುರುಪಥವ ಮೀರಿ ಮಾಡುವ ನೇಮ ಸಲ್ಲವು, ಸಲ್ಲವು.ಕೂಡಲಸಂಗಮದೇವಯ್ಯಾಇವು ನಿಮ್ಮ ನಿಜದೊಳಗೆ ನಿಲ್ಲವು, ನಿಲ್ಲವು.

10

ಗುರುವಚನವಲ್ಲದೆ ಲಿಂಗವೆಂದೆನಿಸದು,ಗುರುವಚನವಲ್ಲದೆ ಜಂಗಮವೆಂದೆನಿಸದು,ಗುರುವಚನವಲ್ಲದೆ ನಿತ್ಯವೆಂದೆನಿಸದು,ಗುರುವಚನವಲ್ಲದೆ ನೇಮವೆಂದೆನಿಸದು.ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವಭಯ ಭ್ರಷ್ಟರ ಮೆಚ್ಚುವನೆ,ನಮ್ಮ ಕೂಡಲಸಂಗಮದೇವ.

11

ಭವಬಂಧನ ದುರಿತಂಗಳ ಗೆಲುವಡೆಓಂ ನಮಃ ಶಿವಶರಣೆಂದಡೆ ಸಾಲದೆಹರ ಹರ ಶಂಕರ, ಶಿವ ಶಿವ ಶಂಕರ,ಜಯ ಜಯ ಶಂಕರ ಶರಣೆನುತ್ತಿದ್ದೇನೆ.ಎನ್ನ ಪಾತಕ ಪರಿಹರ,ಕೂಡಲಸಂಗಮದೇವಾ ಶರಣೆನುತ್ತಿದ್ದೇನೆ.

12

ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ,ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ,ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,ನಾಳಿನ ದಿನಕಿಂದನ ದಿನ ಲೇಸೆಂದು ಹೇಳಿರಯ್ಯಾ,ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ.

AUTOMETIC STREET LIGHT SYSTEM


 


SMART PARKING

 



ಹಳೆಯ ಪ್ರಶ್ನೆ ಪತ್ರಿಕೆಗಳು

 


ಪ್ರಥಮ ಭಾಷೆ - FIRST LANGUAGE 

 

ಪ್ರಥಮ ಭಾಷೆ ಕನ್ನಡ – FIRST LANGUAGE KANNADA - 01K

ಪ್ರಥಮ ಭಾಷೆ ತೆಲುಗು – FIRST LANGUAGE TELUGU – 04L

ಪ್ರಥಮ ಭಾಷೆ ಹಿಂದಿ – FIRST LANGUAGE HINDI – 06H

ಪ್ರಥಮ ಭಾಷೆ ಮರಾಠಿ – FIRST LANGUAGE MARATHI – 08M

ಪ್ರಥಮ ಭಾಷೆ ತಮಿಳು – FIRST LANGUAGE TAMIL– 10T

ಪ್ರಥಮ ಭಾಷೆ ಉರ್ದು – FIRST LANGUAGE URDU – 12U

ಪ್ರಥಮ ಭಾಷೆ ಇಂಗ್ಲಿಷ್ – FIRST LANGUAGE ENGLISH –14E

ಪ್ರಥಮ ಭಾಷೆ ಇಂಗ್ಲಿಷ್ (NCERT) – FIRST LANGUAGE ENGLISH (NCERT) – 15E

ಪ್ರಥಮ ಭಾಷೆ ಸಂಸ್ಕೃತ– FIRST LANGUAGE SANSKRIT – 16S

 

 

ದ್ವಿತೀಯ ಭಾಷೆ - SECOND LANGUAGE

 

ದ್ವಿತೀಯ ಭಾಷೆ ಇಂಗ್ಲಿಷ್ – SECOND LANGUAGE ENGLISH – 31E

ದ್ವಿತೀಯ ಭಾಷೆ ಕನ್ನಡ – SECOND LANGUAGE KANNADA – 33K

 

 

ತೃತೀಯ ಭಾಷೆ - THIRD LANGUAGE 

 

ತೃತೀಯ ಭಾಷೆ ಹಿಂದಿ (NCERT) – THIRD LANGUAGE HINDI (NCERT) – 60H

ತೃತೀಯ ಭಾಷೆ ಹಿಂದಿ – THIRD LANGUAGE HINDI – 61H

ತೃತೀಯ ಭಾಷೆ ಕನ್ನಡ – THIRD LANGUAGE KANNADA – 62K

ತೃತೀಯ ಭಾಷೆ ಇಂಗ್ಲಿಷ್ – THIRD LANGUAGE ENGLISH – 63E

ತೃತೀಯ ಭಾಷೆ ಅರಬಿಕ್ – THIRD LANGUAGE ARABIC – 64A

ತೃತೀಯ ಭಾಷೆ ಉರ್ದು – THIRD LANGUAGE URDU – 66U

ತೃತೀಯ ಭಾಷೆ ಸಂಸ್ಕೃತ – THIRD LANGUAGE SANSKRIT – 67S

ತೃತೀಯ ಭಾಷೆ ಕೊಂಕಣಿ – THIRD LANGUAGE KONKANI – 68DK

ತೃತೀಯ ಭಾಷೆ ತುಳು – THIRD LANGUAGE TULU– 69DK

  

 

ಕೋರ್ ವಿಷಯಗಳು - CORE SUBJECTS

 

ಗಣಿತ – ಕನ್ನಡ ಮಾಧ್ಯಮ – MATHEMATICS - KANNADA MEDIUM – 81K

ಗಣಿತ - ಆಂಗ್ಲ ಮಾಧ್ಯಮ – MATHEMATICS - ENGLISH MEDIUM – 81E

ವಿಜ್ಞಾನ – ಕನ್ನಡ ಮಾಧ್ಯಮ - SCIENCE - KANNADA MEDIUM –  83K

ವಿಜ್ಞಾನ - ಆಂಗ್ಲ ಮಾಧ್ಯಮ – SCIENCE - ENGLISH MEDIUM –  83E

ಸಮಾಜವಿಜ್ಞಾನ – ಕನ್ನಡ ಮಾಧ್ಯಮ – SOCIAL SCIENCE - KANNADA MEDIUM –  85K

ಸಮಾಜವಿಜ್ಞಾನ - ಆಂಗ್ಲ ಮಾಧ್ಯಮ – SOCIAL SCIENCE - ENGLISH MEDIUM –  85E