SEMINAR ON DISEASES

Held by SANJEEVINI eco club GHS talewad.

SBNN GOVT HIGH SCHOOL, TALEWAD

Our beatifu school with coverd lott of trees and garden.

INTERNATIONAL YOGA DAY

300 above students participated in this celebration.

PATIBHA KARANJI AT MULAWAD

Our students participated and won many events.

PRACTICAL IN ATL LAB

Our students participated in atal thinkaring lab.

Showing posts with label Moral. Show all posts
Showing posts with label Moral. Show all posts

Friday, February 9, 2024

ಒಬ್ಬರೊಂದಿಗೆ ಹೋಲಿಸಿಕೊಂಡು ಬದುಕಬೇಡಿ ಎಂದು ಹೇಳುವ ಸೊಗಸಾದ ಕಥೆ*



 ಒಬ್ಬರೊಂದಿಗೆ ಹೋಲಿಸಿಕೊಂಡು ಬದುಕಬೇಡಿ ಎಂದು ಹೇಳುವ ಸೊಗಸಾದ ಕಥೆ*

ತಮಗಿರುವ ಸೌಲಭ್ಯಗಳು, ಅವಕಾಶಗಳಿಗಿಂತ ಇತರರಿಗೆ ಉತ್ತಮವಾದ ಸೌಲಭ್ಯಗಳು ಇವೆ ಎಂದು ಕೆಲವರು ಭಾವಿಸುತ್ತಾರೆ. ಹಣ, ಸೌಂದರ್ಯ, ಓದು, ಆಸ್ತಿ, ಹುದ್ದೆ…ಹೀಗೆ ಪ್ರತಿ ವಿಷಯದಲ್ಲೂ ಇತರರ ಜತೆಗೆ ಹೋಲಿಸಿಕೊಳ್ಳುತ್ತಿರುತ್ತಾರೆ. ಈ ರೀತಿ ಇನ್ನೊಬ್ಬರ ಜತೆಗೆ ನಮ್ಮನ್ನು ಹೋಲಿಸಿಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ. ನಮಗಿರುವ ಸೌಲಭ್ಯಗಳನ್ನು ಬಳಸುತ್ತಾ ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಇನ್ನಷ್ಟು ಉತ್ತಮ ಪ್ರಯತ್ನ ಮಾಡಬೇಕೆ ಹೊರತು ಇತರರ ಜತೆಗೆ ಹೋಲಿಸಿಕೊಂಡು ನರಳಬಾರದು. ಆ ರೀತಿಯ ಸಂದೇಶವನ್ನು ನೀಡುವ ಒಂದು ಒಳ್ಳೆಯ ಕಥೆ ಸದ್ಯಕ್ಕೆ ವೈರಲ್ ಆಗಿದೆ. ಕೆಲವು ಪಕ್ಷಿಗಳ ಮೂಲಕ ನಮ್ಮ ಆಲೋಚನೆ ವಿಷಯವನ್ನು ಸರಳವಾಗಿ ಹೇಳಿದ್ದಾರೆ ಈ ಕಥೆಯಲ್ಲಿ.




ಒಂದು ಕಾಡಿನಲ್ಲಿ ಒಂದು ಕಾಗೆ ವಾಸವಾಗಿತ್ತು. ಅದರ ಜೀವನ ಸೊಗಸಾಗಿ ಸಾಗುತ್ತಿತ್ತು. ಆದರೆ ಪಕ್ಕದಲ್ಲೇ ಇದ್ದ ಕೊಳದಲ್ಲಿನ ಹಂಸವನ್ನು ನೋಡಿ ‘ಅದು ತುಂಬಾ ಬೆಳ್ಳಗೆ, ಸುಂದರವಾಗಿ ಇದೆ. ನಾನು ಕಪ್ಪಗಿದ್ದೇನೆ’ ಎಂದು ನೋವನುಭವಿಸುವುದನ್ನು ಆರಂಭಿಸಿತು. ಒಂದು ದಿನ ಹಂಸದ ಬಳಿ ಹೋಗಿ ‘ನೀನು ತುಂಬಾ ಸುಂದರವಾಗಿ ಇರುತ್ತೀಯ. ಆನಂದವಾಗಿಯೂ ಇರುತ್ತೀಯ ಅಲ್ಲವೇ’ ಎಂದಿತು. ಕಾಗೆ ಮಾತಿಗೆ ಹಂಸ ಉತ್ತರ ಕೊಡುತ್ತಾ, ‘ನಿಜ ನಾನು ಸುಂದರವಾಗಿರುತ್ತೇನೆ. ಆದರೆ ಗಿಳಿರಾಮ ನನಗಿಂತಲೂ ಎರಡು ಬಣ್ಣಗಳಲ್ಲಿ ಸುಂದರವಾಗಿರುತ್ತದೆ. ಅದರ ಜತೆ ಹೋಲಿಸಿದರೆ ನಾನೇನು ಅಲ್ಲ’ ಎಂದು ಬೇಸರಿಸಿಕೊಂಡಿತು. ಇದನ್ನು ಕೇಳಿದ ಕಾಗೆ ಗಿಳಿ ಬಳಿಗೆ ಹೋಗಿ, ‘ಹಂಸಕ್ಕಿಂತಲೂ ಸುಂದರವಾಗಿ ನೀನಿದ್ದೀಯ’ ಎಂದಿತು. ಈ ಮಾತಿಗೆ ಗಿಳಿ, ‘ನನ್ನದೇನಿದೆ ಕೇವಲ ಎರಡು ಬಣ್ಣಗಳು. ನವಿಲು ಬಣ್ಣಬಣ್ಣದ ಗರಿಗಳಿಂದ ತುಂಬಾ ಸುಂದರವಾಗಿರುತ್ತದೆ. ಅದನ್ನು ನೋಡಲು ಜನ ಪೈಪೋಟಿ ಬೀಳುತ್ತಿರುತ್ತಾರೆ. ‘ ಎಂದಿತು. ನವಿಲನ್ನು ನೋಡಲು ಕಾಗೆ ಜೂಗೆ ಹೋಯಿತು. ಅಲ್ಲಿ ಅದನ್ನು ನೋಡಲು ಜನ ಗುಂಪು ಗುಂಪಾಗಿದ್ದಾರೆ. ಅವರೆಲ್ಲಾ ಹೊರಟು ಹೋದ ಮೇಲೆ ನವಿಲಿನೊಂದಿಗೆ ಕಾಗೆ, ‘ನೀನು ಹಂಸ, ಗಿಳಿಗಿಂತಲೂ ತುಂಬಾ ಸುಂದರವಾಗಿದ್ದೀಯ. ನೀನು ಅದೃಷ್ಟವಂತೆ. ನಿನ್ನ ನೋಡಲು ಜನರೆಲ್ಲಾ ಬರುತ್ತಿದಾರೆ.’ ಇದರಿಂದ ನವಿಲು ಭಯದಿಂದ ‘ಹಾಂ ಏನು ಅದೃಷ್ಟ ಬಿಡಮ್ಮ…ಸುಂದರವಾಗಿದ್ದೀನಿ ಎಂದು ಈ ಜೂನಲ್ಲಿ ನನ್ನನ್ನು ತಂದು ಹಾಕಿದ್ದಾರೆ. ಇಲ್ಲಿ ಒಂದೇ ಒಂದು ಕಾಗೆ ಸಹ ಇಲ್ಲ. ಅವೆಲ್ಲಾ ಹಾಯಾಗಿ ಹೊರಗಿನ ಪ್ರಪಂಚದಲ್ಲಿ ಓಡಾಡಿಕೊಂಡಿವೆ. ನಾನು ಕಾಗೆಯಾಗಿ ಯಾಕೆ ಹುಟ್ಟಲಿಲ್ಲ ಎಂದು ಎಷ್ಟೋ ಸಲ ವ್ಯಥೆ ಪಟ್ಟಿದ್ದೇನೆ. ‘ ಎಂದು ನವಿಲು ಹೇಳಿದ ಬಳಿಕ ಕಾಗೆಗೆ ಜ್ಞಾನೋದಯವಾಯಿತು.




ಮನುಷ್ಯರಲ್ಲೂ ಇತರರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವವರಿಗೇನು ಬರವಿಲ್ಲ. ಈ ರೀತಿ ಮಾಡುತ್ತಾ ತಮ್ಮಲ್ಲಿನ ಜ್ಞಾನವನ್ನು, ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಅವರವರ ವಿಶೇಷತೆ ಅವರಿಗೆ ಇದ್ದೇ ಇರುತ್ತದೆ. ಅವರವರ ಸಮಸ್ಯೆಗಳೂ ಅವರವರಿಗೆ ಇರುತ್ತವೆ. ನಮಗೆ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಸದ್ಭಳಕೆ ಮಾಡಿಕೊಂಡರೆ ಸಂತೃಪ್ತಿಯಾಗಿ ಜೀವಿಸಬಹುದು ಎಂಬುದನ್ನು ನಮಗೆ ನೆನಪಿಸುತ್ತದೆ.




ಕೃಪೆ: kannada+.

ಸಂಗ್ರಹ :ವೀರೇಶ್ ಅರಸಿಕೆರೆ. 

ಪರಿಶ್ರಮದ ಮಹತ್ವ. 💐


ಪರಿಶ್ರಮದ ಮಹತ್ವ. 💐

ಇಂದಿನ ದಿನಗಳಲ್ಲಿ ಮಾನವನನ್ನು ಕಾಡುವ ಅನೇಕ ತೊಂದರೆಗಳಲ್ಲಿ ನಿದ್ರೆ ಬರದಿರುವ ಕಾಯಿಲೆಯೂ ಒಂದು. ನಗರಗಳಲ್ಲಿ ಬಹಳ ಮಂದಿಗೆ ನಿದ್ದೆಯ ಗುಳಿಗೆಗಳನ್ನು ನುಂಗಿದ ಬಳಿಕವೇ ನಿದ್ದೆ ಬರುತ್ತದೆ. ನಮ್ಮ ಔಷಧಾಲಯಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ಮದ್ದೆಂದರೆ-ನಿದ್ರಾ ಗುಳಿಗೆಯೆನ್ನುತ್ತಾರೆ. ಆದರೆ ಹೀಗೆ ನಿದ್ರಾ ಗುಳಿಗೆಯನ್ನು ನುಂಗುವುದು ತಪ್ಪು. ಏಕೆಂದರೆ ಅದೊಂದು ಕೆಟ್ಟ ಚಟವಾಗಿ ಬಿಡುವ ಅಪಾಯವಿದೆ-ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ. ಹಾಗಿದ್ದರೆ ಸಹಜವಾಗಿ ನಿದ್ದೆ ಬರುವಂತೆ ಮಾಡುವ ವಿಧಾನವೇನು ? ಎಂಬುದನ್ನು ತಿಳಿಸುವ ಒಂದು ರೋಚಕ ಪ್ರಸಂಗ ಇಲ್ಲಿದೆ. ಮೊಗಲ ವಂಶದ ಅರಸನಾದ ಅಕ್ಬರನಿಗೆ ಅತ್ಯಂತ ಆತ್ಮೀಯ ಒಡನಾಡಿಯಾಗಿದ್ದವನು-ಬೀರ್‌ಬಲ್. ಇಬ್ಬರೂ ಜತೆಯಾಗಿ ಸಂಜೆಯ ವಾಯು-ವಿಹಾರಕ್ಕೆ ಒಂದು ಹಳ್ಳಿಯ ರಸ್ತೆಯಲ್ಲಿ ಹೊರಟಿದ್ದರು. ದಾರಿಯಲ್ಲಿ ಕಲ್ಲು-ಮುಳ್ಳು ತುಂಬಿದ್ದುದರಿಂದ ಕಾಲಿಗೆ ಚುಚ್ಚ ತೊಡಗಿದವು. ಅಕ್ಬರನಿಗೆ ನಡೆಯುವುದೇ ಕಷ್ಟವಾಯಿತು. ಆದರೆ ಅದೇ ರಸ್ತೆಯ ಪಕ್ಕದಲ್ಲಿ ಹರಡಿದ್ದ ಕಲ್ಲುಗಳ ಮೇಲೆ ಚಾಪೆಯೊಂದನ್ನು ಬಿಡಿಸಿ, ಅದರ ಮೇಲೊಬ್ಬ ಕೂಲಿಕಾರ ಮಲಗಿದ್ದ; ಗಾಢನಿದ್ರೆಯಲ್ಲಿದ್ದ. ಅರಸನಿಗೆ ಆಶ್ಚರ್ಯವಾಯಿತು. ಬೀರ್‌ಬಲ್ಲನೊಡನೆ 'ಇದರ ಒಳಗುಟ್ಟೇನು ?' ಎಂದು ಪ್ರಶ್ನಿಸಿದ. ಬೀರ್‌ಬಲ್ 'ಅವನನ್ನು ಅರಮನೆಗೆ ಕರೆದೊಯ್ದು ವಿಚಾರಿಸೋಣ' ಎಂದು ನುಡಿದ, ಅರಮನೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿಸಿದ. ಆದರೆ ಅರಮನೆಗೆ ತಲಪಿದ ಬಳಿಕ, ಒಳ್ಳೆಯ ಊಟ ಮಾಡಿಸಿ, ಒಳ್ಳೆಯ ಹಾಸಿಗೆಯ ಮೇಲೆ ಮಲಗಿಸಿದರೂ ಆ ಕೂಲಿಕಾರನಿಗೆ ನಿದ್ದೆಯೇ ಬರಲಿಲ್ಲ. ಬಹುಶಃ ಚಾಪೆಯಡಿಯಲ್ಲಿ ಕಲ್ಲು ಇದ್ದರೆ ನಿದ್ದೆ ಬರುತ್ತದೆ ಎಂದು ಭಾವಿಸಿ ಹಾಸಿಗೆಯಡಿಯಲ್ಲಿ ಕಲ್ಲುಗಳನ್ನು ಹರಡಿ ಮಲಗಿಸಿದರು. ಊಹೂಂ, ನಿದ್ದೆ ಬರಲೇ ಇಲ್ಲ. ಆಗ ಕೂಲಿಕಾರನನ್ನೇ 'ನಿನಗೇಕೆ ನಿದ್ದೆ ಬರುತ್ತಿಲ್ಲ ?' ಎಂದು ಪ್ರಶ್ನಿಸಿದಾಗ, ಅವನು ಹೀಗೆ ಉತ್ತರಿಸಿದ 'ಮಹಾರಾಜರೆ, ನಾನೊಬ್ಬ ರೈತ. ದಿನವಿಡೀ ಹೊಲದಲ್ಲಿ ದುಡಿದಾಗ, ನನಗೆ ತಾನಾಗಿಯೇ ನಿದ್ದೆ ಬರುತ್ತದೆ. ಈ ಅರಮನೆಗೆ ಬಂದಾಗ ಅಂತಹ ದುಡಿತ, ಪರಿಶ್ರಮವಿಲ್ಲದೆ ನಿದ್ದೆ ಬರುತ್ತಿಲ್ಲ' ಈ ಮಾತನ್ನು ಕೇಳಿದಾಗ ಅಕ್ಬರನು ಸಂತಸದಿಂದ 'ಶಾಭಾಷ್' ಎಂದು ಚಪ್ಪಾಳೆ ತಟ್ಟಿದ. ಬೀರ್‌ಬಲ್‌ನೂ ಆನಂದದಿಂದ ಅರಸನನ್ನು ಅನುಕರಿಸುತ್ತಾ ಚಪ್ಪಾಳೆ ತಟ್ಟಿದ. ಇಲ್ಲಿ ಸಹಜ-ನಿದ್ರೆಯ ರಹಸ್ಯ ಮತ್ತು ಪರಿಶ್ರಮದ ಮಹತ್ವ ಅಡಗಿದೆ. ದುಡಿದು ತಿನ್ನುವ ರೈತರು, ಕೂಲಿಕಾರರು, ಜನಸಾಮಾನ್ಯರು ತಮ್ಮ ಪರಿಶ್ರಮದಿಂದ ಇಮ್ಮಡಿ ಲಾಭವನ್ನು ಪಡೆಯುತ್ತಾರೆ. ಹೊಲದಲ್ಲಿ ದುಡಿಯುವುದರಿಂದ ದೊರೆಯುವ ಆರ್ಥಿಕ ಲಾಭದೊಂದಿಗೇ, ದೈಹಿಕ ಆರೋಗ್ಯ ಲಾಭವನ್ನೂ ಪಡೆಯುತ್ತಾರೆ. ಈ ಆರೋಗ್ಯ ಲಾಭಕ್ಕೆ ಬೆಲೆ ಕಟ್ಟಲು ಸಾಧ್ಯವೇ ? - ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ

ಸಂಗ್ರಹ : ವೀರೇಶ್ ಅರಸಿಕೆರೆ.

ಶ್ರದ್ಧೆ ಮತ್ತು ಅದಮ್ಯ ಉತ್ಸಾಹ

 

💐ಶ್ರದ್ಧೆ💐
  ಚಿಕ್ಕವರಾದರೇನು ದೊಡ್ಡವರಾದರೇನು ಶ್ರದ್ಧೆ ಉಳ್ಳವರು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು, ಶ್ರದ್ಧೆಯಿಲ್ಲದವರು ಎಂಥವರಿದ್ದರೂ ಏನನ್ನೂ ಸಾಧಿಸಲಾರರು. ಸಿದ್ಧಿಯ ಶ್ರೀ ಗಿರಿಯತ್ತ ನಮ್ಮನ್ನು ಕೈಹಿಡಿದು ಮುನ್ನಡೆಸುವುದೇ ಈ ಶ್ರದ್ಧೆ.
 ಒಂದು ಭದ್ರವಾದ ಕೋಟೆಯ ಗೋಡೆ ಇತ್ತು ಅದರಲ್ಲಿ ಆಲದ ಮರದ ಒಂದು ಚಿಕ್ಕಬೀಜ ಬಂದು ಬಿದ್ದಿತು. ಕೋಟೆ ಗೋಡೆಯು ದರ್ಪದಿಂದ ಕೇಳಿತು- "ಇಲ್ಲಿ ಮಣ್ಣಿಲ್ಲ, ನೀರಿಲ್ಲ ನೀನು ಹೇಗೆ ಬೆಳೆಯುತ್ತಿ?" "ನೂಡುತ್ತಿರು ನಾನು ಹೇಗೆ ಬೆಳೆಯುತ್ತೇನೆ!" ಎಂದಿತು ಬೀಜ.ಅಷ್ಟರಲ್ಲಿ ಮಳೆ ಬಿದ್ದಿತು. ಅಷ್ಟು ಹಸಿ ಸಾಕಾಗಿತ್ತು. ಅದು ಬೇರು ಬಿಟ್ಟಿತು. ಬಿಗಿ ಹಿಡಿಯಿತು. ನಿಧಾನವಾಗಿ ಗಾಳಿ ಧೂಳ ಬಳಸಿಕೊಂಡು ಮೊಳಕೆಯೊಡೆಯಿತು. ದಿನಗಳು ಉರುಳಿದವು. ಋತುಗಳು ಸರಿದವು. ಬೇರು ಬಲಿಷ್ಠವಾಯಿತು! ಕೋಟೆಗೋಡೆ ಸಡಿಲಾಯಿತು!! ಚಿಕ್ಕ ಬೀಜದ ಶ್ರದ್ಧೆಗೆ ಭದ್ರವಾದ ಕೋಟೆಗೋಡೆಯು ನಡುಗಿ ಹೋಗಿತ್ತು.!

 💐ಅದಮ್ಯ ಉತ್ಸಾಹ💐
    ತೇನಸಿಂಗನು ಉತ್ಸಾಹಿ ಬಾಲಕ, ದನಗಾಯಿ ಹಿಮದ-ಬೆಟ್ಟಗಳ ಮಧ್ಯಮ ಚಿಕ್ಕ ಗ್ರಾಮದಲ್ಲಿ ವಾಸಿಸುತ್ತಿದ್ದನು. ದಿನ ಬೆಳಗಾದರೆ ಜಗತ್ತಿನ ಅತ್ಯುನ್ನತ ಪರ್ವತ ಎವರೆಸ್ಟ್ ಶಿಖರದ ದರ್ಶನ ಆಗುತ್ತಿತ್ತು! ಒಂದು ದಿನ ಅವನು ತಾಯಿಗೆ ಕೇಳಿದ- "ಈ ಶಿಖರವನ್ನು ಯಾರಾದರೂ ಹತ್ತಿರುವರೇನಮ್ಮ?" ತಾಯಿ ಹೇಳಿದಳು- "ಇಲ್ಲ ಮಗು, ಇದೂವರೆಗೆ ಜಗತ್ತಿನಲ್ಲಿ ಯಾರೂ ಅದನ್ನು ಹತ್ತಿಲ್ಲ;  ಹತ್ತುವ ಪ್ರಯತ್ನವನ್ನೂ ಮಾಡಿಲ್ಲ!" ಅದೇ ದಿನ ತೇನಸಿಂಗನು ಶಿಖರವನ್ನು ಹತ್ತುವ ನಿರ್ಣಯ ಮಾಡಿದ. ಅದೆಂಥ ನಿರ್ಣಯವದು!  ಕುಳಿತರೆ ನಿಂತರೆ ಅದರದೆ ಕನಸು! ಅದೆಷ್ಟು ಬಾರಿ ಆತ ಕನಸಿನಲ್ಲಿ ಆ ಶಿಖರವನ್ನು ಏರಿ ಇಳಿದನೋ; ಇಳಿದು ಏರಿದನೋ? ಸದಾ ಮನಸಿನಲ್ಲಿ ಅದರದೇ ಚಿಂತನೆ. ಅದೇನು ಸಾಮಾನ್ಯ ಶಿಖರವಲ್ಲ.  ಆ ಶಿಖರವನ್ನು ಏರುವಾಗ ಯಾವುದೇ ಕ್ಷಣವೂ ಜೀವನದ ಕೊನೆಯ ಕ್ಷಣವಾಗಬಹುದು. ಆದರೆ ಆತ ಅಷ್ಟೇ ಛಲದಿಂದ, ಉತ್ಸಾಹದಿಂದ, ಪ್ರೇಮದಿಂದ ನಿರಂತರ ಪ್ರಯತ್ನಿಸಿದ. ಅದ್ಭುತ ಸಾಧನೆಯದು. ಶಿಖರವನ್ನೇರುವ ಕನಸು ಆತನ ಮೈ-ಮನವನುಂಡು ಪ್ರಾಣಕ್ಕೆ ಪ್ರಾಣವಾಯಿತು. ಒಂದು ದಿನ ಆತನ ಕನಸು ನನಸಾಯಿತು! ಜಗತ್ತಿನ ಅತ್ಯುನ್ನತ ಶಿಖರವನ್ನು ಏರಿದ ಪ್ರಪ್ರಥಮ ವ್ಯಕ್ತಿಯಾದ! ಆತನದು ಅದಮ್ಯ ಉತ್ಸಾಹ!

ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ.                                    ಸಂಗ್ರಹ: ವೀರೇಶ್ ಅರಸಿಕೆರೆ.

Thursday, October 5, 2023

ಮಮಕಾರ


 *🌻ದಿನಕ್ಕೊಂದು ಕಥೆ🌻                                                  ಮಮಕಾರ*

ನಗರದ ಪ್ರತಿಷ್ಠಿತ ಚಿನ್ನ ಬೆಳ್ಳಿ ವ್ಯಾಪಾರಿ,ಕೇಶವ ಮೂರ್ತಿ ತನ್ನ ಸಂಬಂಧಿಕರ ಪೈಕಿ

ಮಾಧವಿಯ ಕೈ ಹಿಡಿದು ಒಂದು ದಶಕ ಉರುಳಿದರೂ ಅವರಿಗೆ ಸಂತಾನ ಭಾಗ್ಯ ಪ್ರಾಪ್ತಿ ಆಗಿರಲಿಲ್ಲ.ಹಾಗಂತ ಅವರೇನು ಪರಸ್ಪರರನ್ನು ದೂಷಿಸುತ್ತ ಕಾಲ ಕಳೆಯಲಿಲ್ಲ.ಬದಲಿಗೆ ಈ ವಿಷಯ ಕ್ಕೆ ಸಂಬಂಧಿಸಿದಂತೆ ಪತಿ ಪತ್ನಿ ಯರು ಗಹನವಾಗಿ ಯೋಚಿಸಿದ ನಂತರ, ಮಾಧವಿ ನೀಡಿದ ಸಲಹೆಯಂತೆ ಅವರು ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಬೇಕೆಂಬ ನಿರ್ಧಾರ ಕ್ಕೆ ಬಂದಿದ್ದರು.ಇವರು ಕೈಕೊಂಡ ನಿರ್ಧಾರಕ್ಕೆ ಹತ್ತಿರದ ಬಂಧು ಬಳಗದವರಿಂದ ಅಪಸ್ವರ ಕೇಳಿ ಬಂದಿತ್ತಾದರೂ ಅದಕ್ಕೆ ಸೊಪ್ಪು ಹಾಕದೇ ತಾವು ನಿಶ್ಚಯಿಸಿದಂತೆ ಮಾಧವಿಯ ಕಡೆ ದೂರದ ಸಂಬಂಧಿಗಳ ಪೈಕಿ ಅನಾಥೆ ಯಾದ  ಪರಿಮಳ ಳನ್ನು ಕಾನೂನನ್ವಯ ಎಲ್ಲ ವಿಧಿ ವಿಧಾನಗಳನ್ನು ಕ್ರಮವಾಗಿ ಅನುಸರಿಸಿ , ಒಂದು ಶುಭ ಮುಹೂರ್ತದಲ್ಲಿ ಆಕೆಯನ್ನು ದತ್ತು ಪಡೆದು ಮನೆಗೆ ಕರೆದು ತಂದಿದ್ದರು.ಮೂರು ವರ್ಷದ ಪುಟ್ಟ ಪರಿಮಳ ನೋಡಲು ಎಷ್ಟು ಮುದ್ದಾಗಿದ್ದಳೋ ಅಷ್ಟೇ ಚೂಟಿ ಕೂಡ ಆಗಿದ್ದಳು.

ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದ ಬಾಲೆ, ಅತ್ಯಾಧುನಿಕ ಮಾಧವಿ ಯ ಮನೆಗೆ ಕಾಲಿಟ್ಟಾಗ ಎಲ್ಲವನ್ನು ಬೆರಗು ಕಣ್ಣುಗಳಿಂದ ನೋಡುತ್ತ

ಶುರುವಿನಲ್ಲಿ ಆತಂಕದಲ್ಲಿದ್ದಳು.ಬರಬರುತ್ತ ಮಾಧವಿ ತಾಯಿಯ ಪ್ರೀತಿ,ಮಮಕಾರ ಧಾರೆಎರೆಯಲು ಆರಂಭಿಸಿದ ಬಳಿಕ ಮುಂದಿನ ಆರೇಳು ತಿಂಗಳು ಗಳಲ್ಲಿ ಹೊಸ ಪರಿಸರಕ್ಕೆ ಹೊಂದಿಕೊಂಡು, ಮೂರು ಹೊತ್ತು  ಮಾಧವಿಯ ಹಿಂದೆ "ಅಮ್ಮಾ.. ಅಮ್ಮಾ.."ಎಂದು ಓಡಾಡತೊಡಗಿದಾಗ ಮಾಧವಿ  ಅವ್ಯಕ್ತ ಆನಂದ ಅನುಭವಿಸಲಾರಂಭಿಸಿದಳು.ಹಾಗೆಯೇ ಮಾಧವಿ ಹೇಳಿ ಕೊಟ್ಟಂತೆ ಆಕೆಯ ಪತಿಗೆ"ಅಪ್ಪಾ..ಅಪ್ಪಾ.."ಎಂದು ಕೂಗುವುದನ್ನು ರೂಢಿಸಿಕೊಂಡಳು.

ಪರಿಮಳ ಅವರ ಮನೆಗೆ ಬಂದು ಒಂದು ವರ್ಷ ಕಳೆದಿತ್ತು ಅಷ್ಟೇ.ಆಗ ವಿಚಿತ್ರವೋ

ಪವಾಡವೋ ಅಥವಾ ವಿಧಿಯ ಆಟವೋ ಎಂಬಂತೆ ಮಾಧವಿ ಚೊಚ್ಚಲು ಗರ್ಭಿಣಿ ಯಾಗಿದ್ದಳು.ತಾನು ತಾಯಿ ಆಗುತ್ತಿರುವ ವಿಚಾರ ಅವಳಲ್ಲಿನ ಸಂಭ್ರಮ ಇನ್ನೂ ಹೆಚ್ಚಾಗಿಸಿತ್ತು.ಆಗಾಗ ಆಕೆ ಪರಿಮಳಳಿಗೆ "ಪುಟ್ಟೀ... ನಿನ್ನ ಜೊತೆ ಆಡೋಕೆ ಪುಟ್ಟ ಬರತ್ತೆ"ಎಂದು ಕೇಳಿದಾಗ ಅದು ಖುಷಿ ಆಶ್ಚರ್ಯ ದಿಂದ ನಲಿದಾಡಿ ತನ್ನ ಸಂತೋಷ ವ್ಯಕ್ತಪಡಿಸುತ್ತಿದ್ದಳು.ದಿನಗಳು ಉರುಳಿದ ಬಳಿಕ ಮಾಧವಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಾಗ ಎಲ್ಲರಿಗೂ  ಖುಷಿಯಲ್ಲಿ ಮಿಂದೆದ್ದಿದ್ದರು.ಪರಿಮಳಳಂತೂ ಶಾಲೆಯ ಅವಧಿ ಹೊರತು ಪಡಿಸಿ ಉಳಿದೆಲ್ಲ ವೇಳೆಯನ್ನು  ಪುಟ್ಟ ಪಾಪು ನಿನ್ನೊಂದಿಗೆ ಆಟ ಆಡುತ್ತ ಕಾಲ ಕಳೆಯುತ್ತಿದ್ದಳು.

ಆ ಮಗುವಿಗೆ ಒಂದು ಶುಭ ಮುಹೂರ್ತದಲ್ಲಿ "ನಿಶಾಂತ್"ಎಂದು ನಾಮಕರಣ

ಮಾಡಿ ಮುಗಿಸಿದ್ದರು.

ಮಾಧವಿ ಮತ್ತು ಕೇಶವಮೂರ್ತಿ ಯವರ ಬದುಕಿನ ಹಡಗು ಈ ರೀತಿ ನಿಶ್ಚಿಂತೆಯಿಂದ ಸಾಗುತ್ತಿದ್ದಾಗ ಅನಿರೀಕ್ಷಿತವಾಗಿ ಬಿರುಗಾಳಿಗೆ ಸಿಲುಕಿ, ಒಂದು ದೊಡ್ಡ ಬಂಡೆಗೆ ಅಪ್ಪಳಿಸಿದಂತೆ ಒಂದು ದಿನ ಸಂಜೆ ಕೇಶವ ಮೂರ್ತಿ ಅಂಗಡಿ ಯಿಂದ ಮನೆಗೆ ಬಂದವ ತೀವ್ರ ಎದೆನೋವು ಎಂದು ನರಳಲು ಆರಂಭಿಸಿದ. ತಡಮಾಡದೇ  ಮಾಧವಿ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ನುರಿತ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಆತ ಬದುಕಿ ಉಳಿಯಲಿಲ್ಲ.ಪತಿಯನ್ನು ಕಳೆದುಕೊಂಡ ಮಾಧವಿ ಯ ಜಂಘಾಬಲವೇ ಉಡುಗಿ ಹೋದಂತಾಗಿತ್ತು. ಕಾಲ ಎಲ್ಲವನ್ನೂ ಸರಿಪಡಿಸುತ್ತದೆ ಎನ್ನುವಂತೆ ತನ್ನ ಎರಡೂ ಕಂದಮ್ಮಗಳ ಲಾಲನೆ ಪಾಲನೆಯಲ್ಲಿ ತೊಡಗಿದರೂ ಆಗಾಗ ಪತಿಯ ಅಗಲುವಿಕೆಯ ದು:ಖ  ನೆನಪಿಸಿಕೊಂಡು ಮೌನದಿಂದ ಕಣ್ಣೀರಿಡುತ್ತಿದ್ದಳು.

ಕಾಲ ಸರಿದಂತೆ ಮಾಧವಿಯ ಮಕ್ಕಳಿಬ್ಬರೂ ಶಾಲೆಗೆ ಹೋಗಲಾರಂಭಿಸಿದರು

ಮಾಧವಿ ಐದನೇ ತರಗತಿಯಲ್ಲಿ ದ್ದಾರೆ ನಿಶಾಂತ್ ಒಂದನೇ ತರಗತಿಯಲ್ಲಿ ಓದುತ್ತಿದ್ದ.ಓದಿನ ವಿಚಾರದಲ್ಲಿ ಪರಿಮಳ ಇಡೀ ತರಗತಿಯಲ್ಲಿ ಮೊದಲನೇಯ ಸ್ಥಾನದಲ್ಲಿದ್ದಾರೆ ನಿಶಾಂತ್ ಅಷ್ಟೊಂದು ಚುರುಕಾಗಿರಲಿಲ್ಲ ಇದರಿಂದ ಸಹಜವಾಗಿ ಪರಿಮಳ  ಎಲ್ಲರ ಹೊಗಳಿಕೆಗೆ ಪಾತ್ರಳಾಗಿದ್ದಳು .ಈ ವಿಷಯ ಪುಟ್ಟ ನಿಶಾಂತ್ ನ

ಕಿವಿಗೆ ಬಿದ್ದಾಗಲೆಲ್ಲ ಆತ ಆಂತರ್ಯದಲ್ಲಿ ಅಸಮಾಧಾನ ಪಡತೊಡಗುತ್ತಿದ್ದ.

ಮಾಧವಿ ಗೆ ನಿಶಾಂತ್ ನೂ ಓದಿನಲ್ಲಿ ಮುಂದೆ ಬರಲಿ ಎಂಬ ಇರಾದೆ ಯಿಂದ 

ಆತನಿಗಾಗಿ ಖಾಸಗಿ ಶಿಕ್ಷರನ್ನು ನೇಮಿಸಿ ಕೊಂಡಿದ್ದಳು.ಆದರೆ ಅದೇಕೋ ಆತ ಓದಿನ ಕಡೆ  ನಿರೀಕ್ಷಿತ ಗಮನ ನೀಡದಾದಾಗ ಮಾಧವಿ ಗೆ ಒಂದು ಬಗೆಯ ಚಿಂತೆ ಕಾಡತೊಡಗಿತು.ಈ ಕುರಿತು ಪರಿಮಳಳ ಎದುರು ತೋಡಿಕೊಂಡು "ನೀನಾದರೂ 

ಅವನಿಗೆ ಬುದ್ಧಿ ಹೇಳಮ್ಮಾ"ಎಂದು ಕೇಳಿದಾಗ ಆಕೆ ಅಮ್ಮನ ಮಾತಿಗೆ ಬೆಲೆ ಕೊಟ್ಟು ವಿದ್ಯೆಯ ಮಹತ್ವ ದ ಬಗ್ಗೆ ಆತನಿಗೆ ತಿಳುವಳಿಕೆ ನೀಡಿದರೂ ಅದೇನು ಪ್ರಯೋಜನ ವಾಗಲಿಲ್ಲ.ನಿಶಾಂತ್ ಬೆಳೆಯುತ್ತ ಹೋದಂತೆ ಸಹವಾಸದ ದೋಷದಿಂದಲೋ

ಏನೋ ಮನೆಯವರೊಂದಿಗೆ ಒರಟಾಗಿ ವರ್ತಿಸಲಾರಂಭಿಸಿದ.ಜವಾಬ್ದಾರಿ ಹೆಗಲಿಗೇರಿದಾಗ ಸರಿ ಹೋದಾನು ಎಂದು ಅಂದು ಕೊಂಡ ಮಾಧವಿ  ಆತನಿಗೆ ಹೆಚ್ಚು ಹೇಳುವುದನ್ನು ಕಡಿಮೆ ಮಾಡಿದಳು.ಇದೇ ಅವನಿಗೆ ಒಂದು ರೀತಿಯ ಪ್ಲಸ್ ಪಾಯಿಂಟ್ ಆದಂತಾಯ್ತು.

ಓದಿನಲ್ಲಿ ಮುಂದಿದ್ದ ಪರಿಮಳ  ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು

ಅದೇ ಊರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಲು ಆರಂಭಿಸಿದಳು.ಇತ್ತ ನಿಶಾಂತ್ ಕಾಲೇಜು ಓದನ್ನು ಅರ್ಧಕ್ಕೆ ನಿಲ್ಲಿಸಿ, ಯಾವುದೋ

ವ್ಯಾಪಾರ ಮಾಡುತ್ತೇನೆ ಎಂದು ಮಾಧವಿ ಯಿಂದ ಹಣ ಕೀಳಲಾರಂಭಿಸಿದ.

ಈತನ ಈ ಹವ್ಯಾಸ ಅಪಾಯಕಾರಿ ಮಟ್ಟ ಮುಟ್ಟುವುದೆಂದರಿತ  ಮಾಧವಿ

ತಾಯಿ ಯಾಗಿ  ಆತನ ಒಳ್ಳೆಯದಕ್ಕೆ ಸ್ವಲ್ಪ ಕಟುವಾಗಿ ಮಾತನಾಡಿದ್ದಕ್ಕೆ ಅಂದು

ಆತ ತನ್ನ ತಾಯಿ ಎಂದೂ ನೋಡದೇ ತುಂಬ ತುಚ್ಛವಾಗಿ ಮಾತನಾಡಿದ.ಅಷ್ಟೇ ಅಲ್ಲದೇ ಮಾತು ಮಾತಿಗೆ ಪರಿಮಳಳ ವಿಷಯ ಎಳೆದು ತಂದು ರಾದ್ಧಾಂತ ಮಾಡಿದ. ಈ ನಡುವೆ ಪರಿಮಳಳಿಗೆ ಬೇರೆ ಊರಿಗೆ ವರ್ಗವಾಗಿದ್ದು ಮಾಧವಿ ಗೆ

ಬೇಸರದ ವಿಷಯ ವಾಗಿದ್ದರೆ ಈತನಿಗೆ ಇನ್ನು ತನಗಾರೂ ಅಡ್ಡಿಪಡಿಸಲ್ಲ ಎಂಬ ಧೋರಣೆ ತಲೆ ಹೊಕ್ಕಿತ್ತು.

ಮಾಧವಿ ಬೇರೆ ಊರಿಗೆ ಹೋಗಿ ಎರಡು ವರ್ಷಗಳ ನಂತರ ಆಕೆಗೆ ಕಂಕಣ ಬಲ ಕೂಡಿ ಬಂದಿದ್ದರಿಂದ ಸರ್ಕಾರದ ಇಲಾಖೆಯೊಂದರಲ್ಲಿ ಅಧಿಕಾರಿಯಾಗಿದ್ದ ಶ್ರೀಪತಿ ಯೊಂದಿಗೆ  ಮದುವೆ ಮಾಡಿ ಮಾಧವಿ ಆ ಒಂದು ಜವಾಬ್ದಾರಿ ಯಿಂದ ಮುಕ್ತ ಳಾಗಿದ್ದಳು.ಎರಡು ವರ್ಷದ ನಂತರ ಪರಿಮಳ ತಾನಿದ್ದ ಊರಲ್ಲಿ ಹೊಸ ಮನೆಕಟ್ಟಿಸಿಕೊಂಡಾಗಲಂತೂ ಮಾಧವಿಗೆ ಹಿಡಿಸಲಾರದಷ್ಟು ಸಂತೋಷ ವಾಗಿತ್ತು.

ಇತ್ತ ನಿಶಾಂತ್ ದಿನೇ ದಿನೇ ಚಟದ ದಾಸನಾಗಿ ಕಣ್ಮುಂದೆ ಹಾಳಾಗಿ ಹೋಗುತ್ತಿರುವುದನ್ನು ಕಂಡು ಒಳ ಒಳಗೇ ಗಂಭೀರ ವಾಗಿ ಚಂತಿಸಲಾರಂಭಿಸಿದಳು.ಇದರಿಂದ ಆಕೆಯ ಆರೋಗ್ಯ ಮೊದಲಿಗಿಂತ ಕ್ಷೀಣಿಸಲಾರಂಭಿಸಿತು. ವಿಷಯ ಅರಿತ ನಂತರ ಪರಿಮಳ ತನ್ನ ತಾಯಿಯನ್ನು

ಕರೆದು ಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡೀದಳು.ಒಂದೆರಡು ತಿಂಗಳ ಬಳಿಕ ಮಾಧವಿ ಆರೋಗ್ಯ ಚೇತರಿಸಿದ ನಂತರ ತನ್ನ ಊರಿಗೆ ವಾಪಸ್ ಬಂದಳು.ಅಷ್ಟರೊಳಗೆ ಆಕೆಯ ಅನುಪಸ್ಥಿತಿಯಲ್ಲಿ ನಿಶಾಂತ್ ಹಣ ಹಾಗೂ ಆರೋಗ್ಯ ಕೆಡಿಸಿಕೊಂಡಿದ್ದ. ಯಾವಾಗಲೂ ತಾಯಿಗೆ ಹಣಕ್ಕಾಗಿ ಪೀಡಿಸುವುದೇ ಆಗಿತ್ತು.ಕಂಡಕಂಡವರಲ್ಲಿ ಸಾಲು ಸೋಲ ಮಾಡಿ ಕೊನೆಗೆ ತಾಯಿಗೆ ಹೆದರಿಸಿ ಬೆದರಿಸಿ ಮನೆ ಹರಾಜು ಹಾಕುವ ಮಟ್ಟಕ್ಕೆ ತಂದಿಟ್ಟಿದ್ದ. ನೀನು ಮಾಡುತ್ತಿರುವುದು ತಪ್ಪು ಎಂದು ಹೆಳಿದ್ದಕ್ಕೆ ಆ ದಿನ ನಿನ್ನಿಷ್ಟ ಬೇಕಿದ್ರೆ ಇರು ಇಲ್ಲಾಂದ್ರೆ ಹೊರಟು ಹೋಗು ಎಂದು  ಹುಚ್ಚಾಪಟ್ಟೆ ರೆಗಾಡಿದ್ದ.ಈ ವಿಷಯ ಮಗಳಿಗೆ ಹೇಳಿದರೆ ಮಗ ಇನ್ನೇನು ಮಾಡುತ್ತಾನೋ ಎಂಬ ಅಳುಕಿನಿಂದ ತುಟಿ ಪಿಟಕ್ಕೆನ್ನದೇ ಮೌನ ವಾಗಿ ಉಳಿದು ಗತಿಸಿದ ಪತಿಯ ಫೋಟೋ ಎದುರು ನಿಂತು ದು:ಖಿಸುವುದೇ ಆಗಿತ್ತು ಅವಳ ದಿನಚರಿ.ಮನಸ್ಸಿನಲ್ಲಿ ಮನೆ ಹರಾಜಿನ ವಿಷಯ ತಾಳದಾದಾಗ ಪರೋಕ್ಷವಾಗಿ ಇದನ್ನು ಮಗಳ ಗಮನಕ್ಕೆ ತಂದು ತಂದೆಯ ಮನೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವಂತೆ ಹೇಳಿದ್ದಳು.

ಮನೆಯ ಹರಾಜಿನ ದಿನವಂತೂ ಮಾಧವಿಗೆ ಎನೂ ತೋಚದೇ ಜ್ವರ ಬಂದಂತಾಗಿತ್ತು.ಹರಾಜುದಾರರು ಬಂದು ಕೊನೆಯ ಬಿಡ್ಡು ಕೂಗು ವೇಳೆ ಸರಿಯಾಗಿ ಪತಿಯೊಂದಿಗೆ ಬಂದ ಪರಿಮಳ ತಾನೇ ಕೂಗಿ ಅಂತೂ ಅದನ್ನು ತನ್ನದಾಗಿಸಿಕೊಂಡು, ತಮ್ಮನನ್ನು ಕೂಗಿ ಇನ್ನು ಮುಂದೆ ಯಾವ ಕಾರಣಕ್ಕೂ ಅಮ್ಮ ನಿನ್ನೊಂದಿಗೆ ಇಲ್ಲಿರಲ್ಲ ನನ್ನೊಂದಿಗೆ ಇರುತ್ತಾಳೆ ಎಂದು ಕಠೋರವಾಗಿ ನುಡಿದು, ನೀನು ಸರಿದಾರಿಗೆ ಬಂದ ದಿನವೇ ಈ ಮನೆ  ನಿನಗೆ ಮಾಡಿಕೊಡುವೆ"ಎಂದು ಹೇಳಿ

ತಾಯಿಯ ಕೈ ಹಿಡಿದು ಬಾ.. ಅಮ್ಮಾ ಹೋಗೋಣ ಎಂದು ಕಾರಿನೊಳಗೆ ಕೂರಿಸಿಕೊಂಡು ಹೊರಟಾಗ ಅವಳಲ್ಲಿನ ಮಮಕಾರ ಕಂಡ ಮಾಧವಿಯ ಕಣ್ಣುಗಳು  ತುಂಬಿ ಬಂದಿದ್ದವು.

                                  

ಕೃಪೆ:ಅರವಿಂದ.ಜಿ.ಜೋಷಿ.                      

ಸಂಗ್ರಹ:ವೀರೇಶ್ ಅರಸೀಕೆರೆ. From Facebook