ATL MODELS
|
SL.NO |
MODELS |
|
01 |
|
|
02 |
|
|
03 |
|
|
04 |
|
|
05 |
|
|
06 |
|
|
07 |
|
|
08 |
|
|
09 |
|
|
10 |
|
|
11 |
|
|
12 |
|
transfer to other school.
Held by SANJEEVINI eco club GHS talewad.
Our beatifu school with coverd lott of trees and garden.
300 above students participated in this celebration.
Our students participated and won many events.
Our students participated in atal thinkaring lab.
ಸತ್ಯದ ದಾರಿಯಲ್ಲಿ ನಡೆಯುವ ಜನರಿಗೆ ಅಡ್ಡಿ ಆತಂಕಗಳು, ಸಮಸ್ಯೆಗಳು, ಅವಶ್ಯವಾಗಿ ಎದುರಾಗುತ್ತವೆ. ಆದರೆ, ನಂಬಿರುವ ದೇವರು ಅವರ ಜೀವನದ ದೋಣಿಯನ್ನು ಎಂದು ಮುಳುಗಳು ಬಿಡುವುದಿಲ್ಲ.
ಪದೇ ಪದೇ ನಿನಗೆ ಕಷ್ಟಗಳು ಬರುತ್ತಿವೆ ಎಂದರೆ, ನಿನ್ನ ಹಣೆಯ ಬರಹ ಸರಿಯಿಲ್ಲ ಅಂತಲ್ಲ. ಮುಂದೆ ನಿನಗೋಸ್ಕರ ತುಂಬಾ ಒಳ್ಳೆಯ ದಿನಗಳು ಕಾಯುತ್ತಿವೆ ಎಂದರ್ಥ.
ನಿಧಾನವಾಗಿ ಬೆಳೆಯುವವರನ್ನು ನೋಡಿ ನಗಬೇಡಿ. ಏಕೆಂದರೆ, ಓಡುವ ಮೊಲಕ್ಕಿಂತ ನಡೆದಾಡುವ ಆಮೆಗೆ ಆಯಸ್ಸು ಜಾಸ್ತಿ.
ನಮ್ಮನ್ನು ಯಾರೂ ಗೌರವಿಸುತ್ತಿಲ್ಲ ಅಂತ ಬೇಜಾರಾಗಬೇಡಿ. ಏಕೆಂದರೆ, ಬಟ್ಟೆಯ ಅಂಗಡಿಯಲ್ಲಿ ಒಬ್ಬರಿಗೆ ಇಷ್ಟವಾಗದೆ ಬಿಟ್ಟು ಹೋದ ಬಟ್ಟೆಗಳು ಮತ್ತೊಬ್ಬರಿಗೆ ತುಂಬಾ ಇಷ್ಟವಾಗುತ್ತವೆ. ಜೀವನ ಕೂಡ ಅಷ್ಟೇ.
ನೀನು ಹತ್ತಿರ ಏನು ಇದ್ಯೋ ಅದನ್ನು ದೇವರು ಕೊಟ್ಟಿದ್ದಾನೆ ಎಂದು ಸಂತೋಷದಿಂದ ಇರು. ನಿನ್ನ ಹತ್ತಿರ ಏನು ಇಲ್ವೋ ಅದನ್ನು ದೇವರು ಕೊಡುತ್ತಾನೆ ಎಂದು ನಂಬಿಕೆಯಿಂದ ಇರು.
ಮನೆಯಿಂದ ಹೊರಗೆ ಹೋಗುವಾಗ “ಬುದ್ದಿ” ಜೊತೆಯಲ್ಲಿರಬೇಕು. ಯಾಕೆಂದರೆ, ಈ ಪ್ರಪಂಚವೇ ಒಂದು ಸಂತೆ. ಆದರೆ, ಮನೆಯ ಒಳಗೆ ಬರುವಾಗ “ಹೃದಯ” ಜೊತೆಯಲ್ಲಿರಬೇಕು. ಯಾಕೆಂದರೆ, ಅಲ್ಲಿರುವುದು ಒಂದು ಸುಂದರವಾದ “ಕುಟುಂಬ”
ಮನುಷ್ಯ ತನ್ನ ಬದುಕಿನ ಜೊತೆ ಏಕಾಂಗಿಯಾಗಿ ಹೋರಾಡುವುದನ್ನು ಕಲಿಯಬೇಕು. ಇಲ್ಲವಾದರೆ, ಅವನ ಮನಸ್ಸೇ ಅವನ ಪತನಕ್ಕೆ ಕಾರಣವಾಗುತ್ತದೆ.
ಬರೀ ಹಣ ಸಂಪಾದನೆ ಮಾಡುವುದಕ್ಕೆ ಮಾತ್ರವೇ ಜೀವಿಸಬೇಡ. ನೀನು ಸತ್ತಾಗ ನಿನ್ನನ್ನು ಕರೆದುಕೊಂಡು ಹೋಗೋ ಯಮ ನೀನು ಕೊಡೋ ಲಂಚವನ್ನು ಸ್ವೀಕರಿಸುವುದಿಲ್ಲ. ನೀನು ಮಾಡಿರುವ ಪಾಪ – ಪುಣ್ಯವನ್ನು ಮಾತ್ರ ನೋಡುತ್ತಾನೆ.
ಯಾರೋ ಏನೋ ಅಂದುಕೊಳ್ಳುತ್ತಾರೆ ಅಂತ ಹೆದರಿ ನೀ ಬದುಕಬೇಡ. ಆಡಿಕೊಳ್ಳುವವರು ಯಾರೇ ಬಂದು ನಮ್ಮ ಜೀವನವನ್ನು ನಡೆಸುವುದಿಲ್ಲ, ನಮ್ಮ ಜೀವನವನ್ನು ನಾವೇ ನಡೆಸಬೇಕು.
ಗಿಡ ಯಾವತ್ತೂ ಉದುರಿ ಹೋದ ಎಲೆ, ಹೂವುಗಳ ಬಗ್ಗೆ ಯೋಚಿಸುವುದಿಲ್ಲ. ಹೊಸ ಹೂವಿನ ಸೃಷ್ಟಿಯೇ ಅದರ ಧ್ಯಾನ. ಕಳೆದು ಹೋದುದಕ್ಕೆ ಚಿಂತೆ ಬೇಡ. ಹೊಸತನ್ನು ಸೃಷ್ಟಿಸುವ ಉತ್ಸಾಹವಿರಲಿ.
ಬಸವಣ್ಣನವರ ವಚನಗಳು
|
ಕ್ರ.ಸಂ |
ವಚನಗಳು |
|
01 |
ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು, ನಿಮ್ಮ ನಿಲುವು ಕೂಡಲಸಂಗಮದೇವಾ, ಕನ್ಯೆಯ ಸ್ನೇಹದಂತಿದ್ದಿತ್ತು. |
|
02 |
ಕಾಳಿಯ ಕಣ್ ಕಾಣದಿಂದ ಮುನ್ನ, ತ್ರಿಪುರ ಸಂಹಾರದಿಂದ ಮುನ್ನ, ಹರಿವಿರಂಚಿಗಳಿಂದ ಮುನ್ನ, ಉಮೆಯ ಕಳ್ಯಾಣದಿಂದ ಮುನ್ನ, ಮುನ್ನ, ಮುನ್ನ,
ಮುನ್ನ, - ಅಂದಿಂಗೆಳೆಯ ನೀನು, ಹಳೆಯ ನಾನು ಮಹಾದಾನಿ ಕೂಡಲಸಂಗಮದೇವಾ. |
|
03 |
ಅಯ್ಯಾ, ನೀನು
ನಿರಾಕಾರವಾಗಿರ್ದಲ್ಲಿ ನಾನು ಜ್ನಾನವೆಂಬ ವಾಹನವಾಗಿರ್ದೆ, ಕಾಣಾ ಅಯ್ಯಾ,
ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿರ್ದೆ, ಕಾಣಾ ಅಯ್ಯಾ,
ನೀನು ಆಕಾರವಾಗಿರ್ದಲ್ಲಿ ನಾನು ವೃಶ್ಹಭನೆಂಬ ವಾಹನವಾಗಿರ್ದೆ ಕಾಣಾ
ಅಯ್ಯಾ; ನೀನೆನ್ನ ಭವದ ಕೊಂದಿಹೆನೆಂದು ಜಂಗಮ ಲಾಂಚ್ಹನನಾಗಿ ಬಂದಲ್ಲಿ ನಾನು ಭಕ್ತನೆಂಬ
ವಾಹನವಾಗಿರ್ದೆ ಕಾಣಾ ಕೂಡಲಸಂಗಮದೇವಾ |
|
04 |
ಅಯ್ಯಾ, ನಿಮ್ಮ
ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿಯಾನು ಬದುಕಿದೆನಯ್ಯಾ. ಅದೇನು ಕಾರಣ
ತಂದೆಯಿಂದರಿದೆನಯ್ಯಾ. ಅರಿದರಿದು ನಿಮ್ಮ ಶರಣನು ಆಚರಿಸುವಾಚರಣೆಯ ಕಂಡು ಕಣ್ದೆರೆದೆನಯ್ಯಾ
ಕೂಡಲಸಂಗಮದೇವಾ. |
|
05 |
ಸಂಸಾರ ಸಾಗರನ ತೆರೆಕೊಬ್ಬಿ ಮುಖದ ಮೇಲೆ
ಅಲೆಯುತ್ತಿದ್ದುದೇ ನೋಡಾ! ಸಂಸಾರಸಾಗರ ಉರದುದ್ದವೇ? ಹೇಳಾ! ಸಂಸಾರ ಸಾಗರ ಕೂರಲುದ್ದವೇ? ಹೇಳಾ? ಸಂಸಾರ ಸಾಗರ ಸಿರದುದ್ದವಾದ ಬಳಿಕ ಏನ ಹೇಳುವೆನಯ್ಯಾ? ಅಯ್ಯಾ,
ಅಯ್ಯಾ, ಎನ್ನ ಹುಯ್ಯಲ ಕೇಳಯ್ಯ? ಕೂಡಲಸಂಗಮದೇವಾ ನಾನೇನೆನುವೆನಯ್ಯಾ? |
|
06 |
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ! ಮೋಹಕ್ಕೆ ಮಗಳಾಗಿ
ಹುಟ್ಟಿದಳು ಮಾಯೆ! ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ! ಇದಾವ ಪರಿಯಲ್ಲಿ ಕಾಡಿತ್ತು ಮಾಯೆ
ಈ ಮಾಯೆಯ ಕಳೆವೊಡೆ ಯೆನ್ನಳವಲ್ಲ, ನೀವೇ ಬಲ್ಲಿರಿ ಕೂಡಲಸಂಗಮದೇವಾ. |
|
07 |
ನೀನೊಲಿದಡೆ ಕೊರಡು ಕೊನರುವುದಯ್ಯಾ,ನೀನೊಲಿದಡೆ
ಬರಡು ಹಯನಹುದಯ್ಯಾ,ನೀನೊಲಿದಡೆ ವಿಷವೆಲ್ಲ ಅಮೈತವಹುದಯ್ಯಾ,ನೀನೊಲಿದಡೆ ಸಕಲ
ಪಡಿಪದಾರ್ಥಇದಿರಲ್ಲಿರ್ಪುವು ಕೂಡಲಸಂಗಮದೇವಾ. |
|
08 |
ಭವಭವದಲ್ಲಿ ಎನ್ನ ಮನವು ಸಿಲುಕದೆಭವಭವದಲ್ಲಿ ಎನ್ನ
ಮನವು ಕಟ್ಟದೆಭವಸಾಗರದಲ್ಲಿ ಮುಳುಗದೆಭವರಾಟಳದೊಳು ತುಂಬದೆ ಕೆಡಹದೆಭವವಿರಹಿತ ನೀನು, ಅವಧಾರುಕರುಣಿಸು ಕೂಡಲಸಂಗಮದೇವಾ. |
|
09 |
ನೋಡಿ ನೋಡಿ ಮಾಡುವ ನೇಮ ಸಲ್ಲವು, ಸಲ್ಲವು.ತನುವುದ್ದೇಶ, ಮನವುದ್ದೇಶವಾಗಿಮಾಡುವ ನೇಮ ಸಲ್ಲವು, ಸಲ್ಲವು.ಗುರುಪಥವ ಮೀರಿ ಮಾಡುವ ನೇಮ ಸಲ್ಲವು, ಸಲ್ಲವು.ಕೂಡಲಸಂಗಮದೇವಯ್ಯಾಇವು
ನಿಮ್ಮ ನಿಜದೊಳಗೆ ನಿಲ್ಲವು, ನಿಲ್ಲವು. |
|
10 |
ಗುರುವಚನವಲ್ಲದೆ ಲಿಂಗವೆಂದೆನಿಸದು,ಗುರುವಚನವಲ್ಲದೆ
ಜಂಗಮವೆಂದೆನಿಸದು,ಗುರುವಚನವಲ್ಲದೆ ನಿತ್ಯವೆಂದೆನಿಸದು,ಗುರುವಚನವಲ್ಲದೆ
ನೇಮವೆಂದೆನಿಸದು.ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವಭಯ ಭ್ರಷ್ಟರ ಮೆಚ್ಚುವನೆ,ನಮ್ಮ
ಕೂಡಲಸಂಗಮದೇವ. |
|
11 |
ಭವಬಂಧನ ದುರಿತಂಗಳ ಗೆಲುವಡೆಓಂ ನಮಃ ಶಿವಶರಣೆಂದಡೆ
ಸಾಲದೆಹರ ಹರ ಶಂಕರ,
ಶಿವ ಶಿವ ಶಂಕರ,ಜಯ ಜಯ ಶಂಕರ ಶರಣೆನುತ್ತಿದ್ದೇನೆ.ಎನ್ನ
ಪಾತಕ ಪರಿಹರ,ಕೂಡಲಸಂಗಮದೇವಾ ಶರಣೆನುತ್ತಿದ್ದೇನೆ. |
|
12 |
ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ,ರಾಶಿಕೂಟ
ಋಣಸಂಬಂಧವುಂಟೆಂದು ಹೇಳಿರಯ್ಯಾ,ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,ನಾಳಿನ
ದಿನಕಿಂದನ ದಿನ ಲೇಸೆಂದು ಹೇಳಿರಯ್ಯಾ,ಕೂಡಲಸಂಗಮದೇವನ ಪೂಜಿಸಿದ ಫಲ
ನಿಮ್ಮದಯ್ಯಾ. |
"ಪ್ರತಿ ಮಗುವಿನ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಆಧ್ಯಾತ್ಮಿಕ ಹಗೂ
ವೈಜ್ಞಾನಿಕ ಬೆಳವಣಿಗೆಯನ್ನು ,
ಭಾರತೀಯ ಜ್ಞಾನ ಪರಂಪರೆಯ ಹಿನ್ನಲೆಯಲ್ಲಿ ನಾವಿನ್ಯ ಪೂರ್ಣ, ಕೌಶಲ್ಯಾಧಾರಿತ, ಸೃಜನಶೀಲ, ಸಮಾಜ ನಿರ್ಮಾಣ ಹಾಗೂ
ಜಾಗತೀಕರಣಕ್ಕೆ ಸಿದ್ಧಗೊಳಿಸುವುದು ನಮ್ಮ ಪಣ"
"ಸೃಜನಾತ್ಮಕ ಜೀವನಕ್ಕಾಗಿ ನಾವಿನ್ಯಪೂರ್ಣ ಶಾಲೆ"