SEMINAR ON DISEASES

Held by SANJEEVINI eco club GHS talewad.

SBNN GOVT HIGH SCHOOL, TALEWAD

Our beatifu school with coverd lott of trees and garden.

INTERNATIONAL YOGA DAY

300 above students participated in this celebration.

PATIBHA KARANJI AT MULAWAD

Our students participated and won many events.

PRACTICAL IN ATL LAB

Our students participated in atal thinkaring lab.

Friday, February 9, 2024

ರಸಪ್ರಶ್ನೆ ಕಾರ್ಯಕ್ರಮ

ಮಂಜಮ್ಮ ಜೋಗತಿ ಕಾರ್ಯಕ್ರಮ





 

Thursday, October 5, 2023

ಮಮಕಾರ


 *🌻ದಿನಕ್ಕೊಂದು ಕಥೆ🌻                                                  ಮಮಕಾರ*

ನಗರದ ಪ್ರತಿಷ್ಠಿತ ಚಿನ್ನ ಬೆಳ್ಳಿ ವ್ಯಾಪಾರಿ,ಕೇಶವ ಮೂರ್ತಿ ತನ್ನ ಸಂಬಂಧಿಕರ ಪೈಕಿ

ಮಾಧವಿಯ ಕೈ ಹಿಡಿದು ಒಂದು ದಶಕ ಉರುಳಿದರೂ ಅವರಿಗೆ ಸಂತಾನ ಭಾಗ್ಯ ಪ್ರಾಪ್ತಿ ಆಗಿರಲಿಲ್ಲ.ಹಾಗಂತ ಅವರೇನು ಪರಸ್ಪರರನ್ನು ದೂಷಿಸುತ್ತ ಕಾಲ ಕಳೆಯಲಿಲ್ಲ.ಬದಲಿಗೆ ಈ ವಿಷಯ ಕ್ಕೆ ಸಂಬಂಧಿಸಿದಂತೆ ಪತಿ ಪತ್ನಿ ಯರು ಗಹನವಾಗಿ ಯೋಚಿಸಿದ ನಂತರ, ಮಾಧವಿ ನೀಡಿದ ಸಲಹೆಯಂತೆ ಅವರು ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಬೇಕೆಂಬ ನಿರ್ಧಾರ ಕ್ಕೆ ಬಂದಿದ್ದರು.ಇವರು ಕೈಕೊಂಡ ನಿರ್ಧಾರಕ್ಕೆ ಹತ್ತಿರದ ಬಂಧು ಬಳಗದವರಿಂದ ಅಪಸ್ವರ ಕೇಳಿ ಬಂದಿತ್ತಾದರೂ ಅದಕ್ಕೆ ಸೊಪ್ಪು ಹಾಕದೇ ತಾವು ನಿಶ್ಚಯಿಸಿದಂತೆ ಮಾಧವಿಯ ಕಡೆ ದೂರದ ಸಂಬಂಧಿಗಳ ಪೈಕಿ ಅನಾಥೆ ಯಾದ  ಪರಿಮಳ ಳನ್ನು ಕಾನೂನನ್ವಯ ಎಲ್ಲ ವಿಧಿ ವಿಧಾನಗಳನ್ನು ಕ್ರಮವಾಗಿ ಅನುಸರಿಸಿ , ಒಂದು ಶುಭ ಮುಹೂರ್ತದಲ್ಲಿ ಆಕೆಯನ್ನು ದತ್ತು ಪಡೆದು ಮನೆಗೆ ಕರೆದು ತಂದಿದ್ದರು.ಮೂರು ವರ್ಷದ ಪುಟ್ಟ ಪರಿಮಳ ನೋಡಲು ಎಷ್ಟು ಮುದ್ದಾಗಿದ್ದಳೋ ಅಷ್ಟೇ ಚೂಟಿ ಕೂಡ ಆಗಿದ್ದಳು.

ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದ ಬಾಲೆ, ಅತ್ಯಾಧುನಿಕ ಮಾಧವಿ ಯ ಮನೆಗೆ ಕಾಲಿಟ್ಟಾಗ ಎಲ್ಲವನ್ನು ಬೆರಗು ಕಣ್ಣುಗಳಿಂದ ನೋಡುತ್ತ

ಶುರುವಿನಲ್ಲಿ ಆತಂಕದಲ್ಲಿದ್ದಳು.ಬರಬರುತ್ತ ಮಾಧವಿ ತಾಯಿಯ ಪ್ರೀತಿ,ಮಮಕಾರ ಧಾರೆಎರೆಯಲು ಆರಂಭಿಸಿದ ಬಳಿಕ ಮುಂದಿನ ಆರೇಳು ತಿಂಗಳು ಗಳಲ್ಲಿ ಹೊಸ ಪರಿಸರಕ್ಕೆ ಹೊಂದಿಕೊಂಡು, ಮೂರು ಹೊತ್ತು  ಮಾಧವಿಯ ಹಿಂದೆ "ಅಮ್ಮಾ.. ಅಮ್ಮಾ.."ಎಂದು ಓಡಾಡತೊಡಗಿದಾಗ ಮಾಧವಿ  ಅವ್ಯಕ್ತ ಆನಂದ ಅನುಭವಿಸಲಾರಂಭಿಸಿದಳು.ಹಾಗೆಯೇ ಮಾಧವಿ ಹೇಳಿ ಕೊಟ್ಟಂತೆ ಆಕೆಯ ಪತಿಗೆ"ಅಪ್ಪಾ..ಅಪ್ಪಾ.."ಎಂದು ಕೂಗುವುದನ್ನು ರೂಢಿಸಿಕೊಂಡಳು.

ಪರಿಮಳ ಅವರ ಮನೆಗೆ ಬಂದು ಒಂದು ವರ್ಷ ಕಳೆದಿತ್ತು ಅಷ್ಟೇ.ಆಗ ವಿಚಿತ್ರವೋ

ಪವಾಡವೋ ಅಥವಾ ವಿಧಿಯ ಆಟವೋ ಎಂಬಂತೆ ಮಾಧವಿ ಚೊಚ್ಚಲು ಗರ್ಭಿಣಿ ಯಾಗಿದ್ದಳು.ತಾನು ತಾಯಿ ಆಗುತ್ತಿರುವ ವಿಚಾರ ಅವಳಲ್ಲಿನ ಸಂಭ್ರಮ ಇನ್ನೂ ಹೆಚ್ಚಾಗಿಸಿತ್ತು.ಆಗಾಗ ಆಕೆ ಪರಿಮಳಳಿಗೆ "ಪುಟ್ಟೀ... ನಿನ್ನ ಜೊತೆ ಆಡೋಕೆ ಪುಟ್ಟ ಬರತ್ತೆ"ಎಂದು ಕೇಳಿದಾಗ ಅದು ಖುಷಿ ಆಶ್ಚರ್ಯ ದಿಂದ ನಲಿದಾಡಿ ತನ್ನ ಸಂತೋಷ ವ್ಯಕ್ತಪಡಿಸುತ್ತಿದ್ದಳು.ದಿನಗಳು ಉರುಳಿದ ಬಳಿಕ ಮಾಧವಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಾಗ ಎಲ್ಲರಿಗೂ  ಖುಷಿಯಲ್ಲಿ ಮಿಂದೆದ್ದಿದ್ದರು.ಪರಿಮಳಳಂತೂ ಶಾಲೆಯ ಅವಧಿ ಹೊರತು ಪಡಿಸಿ ಉಳಿದೆಲ್ಲ ವೇಳೆಯನ್ನು  ಪುಟ್ಟ ಪಾಪು ನಿನ್ನೊಂದಿಗೆ ಆಟ ಆಡುತ್ತ ಕಾಲ ಕಳೆಯುತ್ತಿದ್ದಳು.

ಆ ಮಗುವಿಗೆ ಒಂದು ಶುಭ ಮುಹೂರ್ತದಲ್ಲಿ "ನಿಶಾಂತ್"ಎಂದು ನಾಮಕರಣ

ಮಾಡಿ ಮುಗಿಸಿದ್ದರು.

ಮಾಧವಿ ಮತ್ತು ಕೇಶವಮೂರ್ತಿ ಯವರ ಬದುಕಿನ ಹಡಗು ಈ ರೀತಿ ನಿಶ್ಚಿಂತೆಯಿಂದ ಸಾಗುತ್ತಿದ್ದಾಗ ಅನಿರೀಕ್ಷಿತವಾಗಿ ಬಿರುಗಾಳಿಗೆ ಸಿಲುಕಿ, ಒಂದು ದೊಡ್ಡ ಬಂಡೆಗೆ ಅಪ್ಪಳಿಸಿದಂತೆ ಒಂದು ದಿನ ಸಂಜೆ ಕೇಶವ ಮೂರ್ತಿ ಅಂಗಡಿ ಯಿಂದ ಮನೆಗೆ ಬಂದವ ತೀವ್ರ ಎದೆನೋವು ಎಂದು ನರಳಲು ಆರಂಭಿಸಿದ. ತಡಮಾಡದೇ  ಮಾಧವಿ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ನುರಿತ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಆತ ಬದುಕಿ ಉಳಿಯಲಿಲ್ಲ.ಪತಿಯನ್ನು ಕಳೆದುಕೊಂಡ ಮಾಧವಿ ಯ ಜಂಘಾಬಲವೇ ಉಡುಗಿ ಹೋದಂತಾಗಿತ್ತು. ಕಾಲ ಎಲ್ಲವನ್ನೂ ಸರಿಪಡಿಸುತ್ತದೆ ಎನ್ನುವಂತೆ ತನ್ನ ಎರಡೂ ಕಂದಮ್ಮಗಳ ಲಾಲನೆ ಪಾಲನೆಯಲ್ಲಿ ತೊಡಗಿದರೂ ಆಗಾಗ ಪತಿಯ ಅಗಲುವಿಕೆಯ ದು:ಖ  ನೆನಪಿಸಿಕೊಂಡು ಮೌನದಿಂದ ಕಣ್ಣೀರಿಡುತ್ತಿದ್ದಳು.

ಕಾಲ ಸರಿದಂತೆ ಮಾಧವಿಯ ಮಕ್ಕಳಿಬ್ಬರೂ ಶಾಲೆಗೆ ಹೋಗಲಾರಂಭಿಸಿದರು

ಮಾಧವಿ ಐದನೇ ತರಗತಿಯಲ್ಲಿ ದ್ದಾರೆ ನಿಶಾಂತ್ ಒಂದನೇ ತರಗತಿಯಲ್ಲಿ ಓದುತ್ತಿದ್ದ.ಓದಿನ ವಿಚಾರದಲ್ಲಿ ಪರಿಮಳ ಇಡೀ ತರಗತಿಯಲ್ಲಿ ಮೊದಲನೇಯ ಸ್ಥಾನದಲ್ಲಿದ್ದಾರೆ ನಿಶಾಂತ್ ಅಷ್ಟೊಂದು ಚುರುಕಾಗಿರಲಿಲ್ಲ ಇದರಿಂದ ಸಹಜವಾಗಿ ಪರಿಮಳ  ಎಲ್ಲರ ಹೊಗಳಿಕೆಗೆ ಪಾತ್ರಳಾಗಿದ್ದಳು .ಈ ವಿಷಯ ಪುಟ್ಟ ನಿಶಾಂತ್ ನ

ಕಿವಿಗೆ ಬಿದ್ದಾಗಲೆಲ್ಲ ಆತ ಆಂತರ್ಯದಲ್ಲಿ ಅಸಮಾಧಾನ ಪಡತೊಡಗುತ್ತಿದ್ದ.

ಮಾಧವಿ ಗೆ ನಿಶಾಂತ್ ನೂ ಓದಿನಲ್ಲಿ ಮುಂದೆ ಬರಲಿ ಎಂಬ ಇರಾದೆ ಯಿಂದ 

ಆತನಿಗಾಗಿ ಖಾಸಗಿ ಶಿಕ್ಷರನ್ನು ನೇಮಿಸಿ ಕೊಂಡಿದ್ದಳು.ಆದರೆ ಅದೇಕೋ ಆತ ಓದಿನ ಕಡೆ  ನಿರೀಕ್ಷಿತ ಗಮನ ನೀಡದಾದಾಗ ಮಾಧವಿ ಗೆ ಒಂದು ಬಗೆಯ ಚಿಂತೆ ಕಾಡತೊಡಗಿತು.ಈ ಕುರಿತು ಪರಿಮಳಳ ಎದುರು ತೋಡಿಕೊಂಡು "ನೀನಾದರೂ 

ಅವನಿಗೆ ಬುದ್ಧಿ ಹೇಳಮ್ಮಾ"ಎಂದು ಕೇಳಿದಾಗ ಆಕೆ ಅಮ್ಮನ ಮಾತಿಗೆ ಬೆಲೆ ಕೊಟ್ಟು ವಿದ್ಯೆಯ ಮಹತ್ವ ದ ಬಗ್ಗೆ ಆತನಿಗೆ ತಿಳುವಳಿಕೆ ನೀಡಿದರೂ ಅದೇನು ಪ್ರಯೋಜನ ವಾಗಲಿಲ್ಲ.ನಿಶಾಂತ್ ಬೆಳೆಯುತ್ತ ಹೋದಂತೆ ಸಹವಾಸದ ದೋಷದಿಂದಲೋ

ಏನೋ ಮನೆಯವರೊಂದಿಗೆ ಒರಟಾಗಿ ವರ್ತಿಸಲಾರಂಭಿಸಿದ.ಜವಾಬ್ದಾರಿ ಹೆಗಲಿಗೇರಿದಾಗ ಸರಿ ಹೋದಾನು ಎಂದು ಅಂದು ಕೊಂಡ ಮಾಧವಿ  ಆತನಿಗೆ ಹೆಚ್ಚು ಹೇಳುವುದನ್ನು ಕಡಿಮೆ ಮಾಡಿದಳು.ಇದೇ ಅವನಿಗೆ ಒಂದು ರೀತಿಯ ಪ್ಲಸ್ ಪಾಯಿಂಟ್ ಆದಂತಾಯ್ತು.

ಓದಿನಲ್ಲಿ ಮುಂದಿದ್ದ ಪರಿಮಳ  ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು

ಅದೇ ಊರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಲು ಆರಂಭಿಸಿದಳು.ಇತ್ತ ನಿಶಾಂತ್ ಕಾಲೇಜು ಓದನ್ನು ಅರ್ಧಕ್ಕೆ ನಿಲ್ಲಿಸಿ, ಯಾವುದೋ

ವ್ಯಾಪಾರ ಮಾಡುತ್ತೇನೆ ಎಂದು ಮಾಧವಿ ಯಿಂದ ಹಣ ಕೀಳಲಾರಂಭಿಸಿದ.

ಈತನ ಈ ಹವ್ಯಾಸ ಅಪಾಯಕಾರಿ ಮಟ್ಟ ಮುಟ್ಟುವುದೆಂದರಿತ  ಮಾಧವಿ

ತಾಯಿ ಯಾಗಿ  ಆತನ ಒಳ್ಳೆಯದಕ್ಕೆ ಸ್ವಲ್ಪ ಕಟುವಾಗಿ ಮಾತನಾಡಿದ್ದಕ್ಕೆ ಅಂದು

ಆತ ತನ್ನ ತಾಯಿ ಎಂದೂ ನೋಡದೇ ತುಂಬ ತುಚ್ಛವಾಗಿ ಮಾತನಾಡಿದ.ಅಷ್ಟೇ ಅಲ್ಲದೇ ಮಾತು ಮಾತಿಗೆ ಪರಿಮಳಳ ವಿಷಯ ಎಳೆದು ತಂದು ರಾದ್ಧಾಂತ ಮಾಡಿದ. ಈ ನಡುವೆ ಪರಿಮಳಳಿಗೆ ಬೇರೆ ಊರಿಗೆ ವರ್ಗವಾಗಿದ್ದು ಮಾಧವಿ ಗೆ

ಬೇಸರದ ವಿಷಯ ವಾಗಿದ್ದರೆ ಈತನಿಗೆ ಇನ್ನು ತನಗಾರೂ ಅಡ್ಡಿಪಡಿಸಲ್ಲ ಎಂಬ ಧೋರಣೆ ತಲೆ ಹೊಕ್ಕಿತ್ತು.

ಮಾಧವಿ ಬೇರೆ ಊರಿಗೆ ಹೋಗಿ ಎರಡು ವರ್ಷಗಳ ನಂತರ ಆಕೆಗೆ ಕಂಕಣ ಬಲ ಕೂಡಿ ಬಂದಿದ್ದರಿಂದ ಸರ್ಕಾರದ ಇಲಾಖೆಯೊಂದರಲ್ಲಿ ಅಧಿಕಾರಿಯಾಗಿದ್ದ ಶ್ರೀಪತಿ ಯೊಂದಿಗೆ  ಮದುವೆ ಮಾಡಿ ಮಾಧವಿ ಆ ಒಂದು ಜವಾಬ್ದಾರಿ ಯಿಂದ ಮುಕ್ತ ಳಾಗಿದ್ದಳು.ಎರಡು ವರ್ಷದ ನಂತರ ಪರಿಮಳ ತಾನಿದ್ದ ಊರಲ್ಲಿ ಹೊಸ ಮನೆಕಟ್ಟಿಸಿಕೊಂಡಾಗಲಂತೂ ಮಾಧವಿಗೆ ಹಿಡಿಸಲಾರದಷ್ಟು ಸಂತೋಷ ವಾಗಿತ್ತು.

ಇತ್ತ ನಿಶಾಂತ್ ದಿನೇ ದಿನೇ ಚಟದ ದಾಸನಾಗಿ ಕಣ್ಮುಂದೆ ಹಾಳಾಗಿ ಹೋಗುತ್ತಿರುವುದನ್ನು ಕಂಡು ಒಳ ಒಳಗೇ ಗಂಭೀರ ವಾಗಿ ಚಂತಿಸಲಾರಂಭಿಸಿದಳು.ಇದರಿಂದ ಆಕೆಯ ಆರೋಗ್ಯ ಮೊದಲಿಗಿಂತ ಕ್ಷೀಣಿಸಲಾರಂಭಿಸಿತು. ವಿಷಯ ಅರಿತ ನಂತರ ಪರಿಮಳ ತನ್ನ ತಾಯಿಯನ್ನು

ಕರೆದು ಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡೀದಳು.ಒಂದೆರಡು ತಿಂಗಳ ಬಳಿಕ ಮಾಧವಿ ಆರೋಗ್ಯ ಚೇತರಿಸಿದ ನಂತರ ತನ್ನ ಊರಿಗೆ ವಾಪಸ್ ಬಂದಳು.ಅಷ್ಟರೊಳಗೆ ಆಕೆಯ ಅನುಪಸ್ಥಿತಿಯಲ್ಲಿ ನಿಶಾಂತ್ ಹಣ ಹಾಗೂ ಆರೋಗ್ಯ ಕೆಡಿಸಿಕೊಂಡಿದ್ದ. ಯಾವಾಗಲೂ ತಾಯಿಗೆ ಹಣಕ್ಕಾಗಿ ಪೀಡಿಸುವುದೇ ಆಗಿತ್ತು.ಕಂಡಕಂಡವರಲ್ಲಿ ಸಾಲು ಸೋಲ ಮಾಡಿ ಕೊನೆಗೆ ತಾಯಿಗೆ ಹೆದರಿಸಿ ಬೆದರಿಸಿ ಮನೆ ಹರಾಜು ಹಾಕುವ ಮಟ್ಟಕ್ಕೆ ತಂದಿಟ್ಟಿದ್ದ. ನೀನು ಮಾಡುತ್ತಿರುವುದು ತಪ್ಪು ಎಂದು ಹೆಳಿದ್ದಕ್ಕೆ ಆ ದಿನ ನಿನ್ನಿಷ್ಟ ಬೇಕಿದ್ರೆ ಇರು ಇಲ್ಲಾಂದ್ರೆ ಹೊರಟು ಹೋಗು ಎಂದು  ಹುಚ್ಚಾಪಟ್ಟೆ ರೆಗಾಡಿದ್ದ.ಈ ವಿಷಯ ಮಗಳಿಗೆ ಹೇಳಿದರೆ ಮಗ ಇನ್ನೇನು ಮಾಡುತ್ತಾನೋ ಎಂಬ ಅಳುಕಿನಿಂದ ತುಟಿ ಪಿಟಕ್ಕೆನ್ನದೇ ಮೌನ ವಾಗಿ ಉಳಿದು ಗತಿಸಿದ ಪತಿಯ ಫೋಟೋ ಎದುರು ನಿಂತು ದು:ಖಿಸುವುದೇ ಆಗಿತ್ತು ಅವಳ ದಿನಚರಿ.ಮನಸ್ಸಿನಲ್ಲಿ ಮನೆ ಹರಾಜಿನ ವಿಷಯ ತಾಳದಾದಾಗ ಪರೋಕ್ಷವಾಗಿ ಇದನ್ನು ಮಗಳ ಗಮನಕ್ಕೆ ತಂದು ತಂದೆಯ ಮನೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವಂತೆ ಹೇಳಿದ್ದಳು.

ಮನೆಯ ಹರಾಜಿನ ದಿನವಂತೂ ಮಾಧವಿಗೆ ಎನೂ ತೋಚದೇ ಜ್ವರ ಬಂದಂತಾಗಿತ್ತು.ಹರಾಜುದಾರರು ಬಂದು ಕೊನೆಯ ಬಿಡ್ಡು ಕೂಗು ವೇಳೆ ಸರಿಯಾಗಿ ಪತಿಯೊಂದಿಗೆ ಬಂದ ಪರಿಮಳ ತಾನೇ ಕೂಗಿ ಅಂತೂ ಅದನ್ನು ತನ್ನದಾಗಿಸಿಕೊಂಡು, ತಮ್ಮನನ್ನು ಕೂಗಿ ಇನ್ನು ಮುಂದೆ ಯಾವ ಕಾರಣಕ್ಕೂ ಅಮ್ಮ ನಿನ್ನೊಂದಿಗೆ ಇಲ್ಲಿರಲ್ಲ ನನ್ನೊಂದಿಗೆ ಇರುತ್ತಾಳೆ ಎಂದು ಕಠೋರವಾಗಿ ನುಡಿದು, ನೀನು ಸರಿದಾರಿಗೆ ಬಂದ ದಿನವೇ ಈ ಮನೆ  ನಿನಗೆ ಮಾಡಿಕೊಡುವೆ"ಎಂದು ಹೇಳಿ

ತಾಯಿಯ ಕೈ ಹಿಡಿದು ಬಾ.. ಅಮ್ಮಾ ಹೋಗೋಣ ಎಂದು ಕಾರಿನೊಳಗೆ ಕೂರಿಸಿಕೊಂಡು ಹೊರಟಾಗ ಅವಳಲ್ಲಿನ ಮಮಕಾರ ಕಂಡ ಮಾಧವಿಯ ಕಣ್ಣುಗಳು  ತುಂಬಿ ಬಂದಿದ್ದವು.

                                  

ಕೃಪೆ:ಅರವಿಂದ.ಜಿ.ಜೋಷಿ.                      

ಸಂಗ್ರಹ:ವೀರೇಶ್ ಅರಸೀಕೆರೆ. From Facebook

Monday, October 2, 2023

ಗಾಂಧೀಜಿ ಜಯಂತಿ ಪ್ರಯುಕ್ತ ನಮ್ಮ ಹೆಮ್ಮೆಯ ಮುಖ್ಯೋಪಾಧ್ಯಾಯರ ಭಾಷಣ

ಗಾಂಧೀಜಿ ಜಯಂತಿ ಪ್ರಯುಕ್ತ ನಮ್ಮ ಹೆಮೆಯ ಮುಖ್ಯೋಪಾಧ್ಯಾರ ಭಾಷಣ..

ಲಾಲ ಬಾಹದ್ದೂರ ಶಾಸ್ತ್ರಿ ಜಯಂತಿ

 


Thursday, September 28, 2023

ವಿಶ್ವ ‌ಪರಿಸರ ‌ದಿನಾಚರಣೆ

 





ಜಗತ್ತು ಇಂದು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಎಂದರೆ, ಅದು ಪರಿಸರ ಮಾಲಿನ್ಯ. ಪ್ರತೀ ವರ್ಷವೂ ಹೆಚ್ಚುತ್ತಾ ಸಾಗಿರುವ ಪರಿಸರ ಮಾಲಿನ್ಯವು ಭೂಮಿಯ ಪರಿಸರವನ್ನು ಬಂಜರಾಗಿಸುತ್ತಾ ಸಾಗಿದೆ ಮತ್ತು ಭೂಮಿಯ ಮೇಲೆ ಸರಿಪಡಿಸಲಾಗದ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಪರಿಸರಮಾಲಿನ್ಯದಲ್ಲಿ ಮುಖ್ಯವಾಗಿ ಐದು ವಿಧಗಳು, ಅವೆಂದರೆ-

ವಾಯುಮಾಲಿನ್ಯ, ಜಲಮಾಲಿನ್ಯ, ಮಣ್ಣಿನ ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ವಿಕಿರಣ ಸಂಬಂಧಿತ ಮಾಲಿನ್ಯ. ಪ್ರತೀ ವರ್ಷವೂ ಜಗತ್ತಿನಲ್ಲಿ ಸುಮಾರು 2.4 ಮಿಲಿಯನ್‌ ಜನರು, ಕೇವಲ ವಾಯುಮಾಲಿನ್ಯದ ನೇರ ಪರಿಣಾಮಗಳಿಂದಾಗಿಯೇ ಮರಣ ಹೊಂದುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜು ಮಾಡಿದೆ.

ಒಂದು ಪರಿಸರದಲ್ಲಿ ಜೀವಿಸಲು ಅಸಾಧ್ಯವಾಗುವಂತೆ ವಿವಿಧ ಹಾನಿಕಾರಕ ಅಂಶಗಳನ್ನು ಅಥವಾ ಅನಾರೋಗ್ಯಕರ ಅಂಶಗಳನ್ನು ಆ ಪರಿಸರದ ಒಳಕ್ಕೆ ಸೇರಿಸುವುದು- ಇದು ಪರಿಸರಮಾಲಿನ್ಯಕ್ಕೆ ನಾವು ಕೊಡಬಹುದಾದ ಅತ್ಯಂತ ಸೂಕ್ತ ವಿವರಣೆ. ಬಹಳ ಸಾಮಾನ್ಯ ರೀತಿಯ ಮಾಲಿನ್ಯ ಕಾರಕಗಳು ಅಂದರೆ, ರಾಸಾಯನಿಕಗಳು, ತ್ಯಾಜ್ಯಗಳು ಮತ್ತು ಕಲುಷಿತ ನೀರು. ರಾಜಧಾನಿ ಬೀಜಿಂಗ್‌ ಸೇರಿದಂತೆ ಚೀನಾದ ನಗರಗಳು ವಾಯುಮಾಲಿನ್ಯಕ್ಕೆ ಕೊಡಬಹುದಾದ ಅತ್ಯಂತ ಉತ್ತಮ ಉದಾಹರಣೆ. ಅತ್ಯಧಿಕ ಮಟ್ಟದಲ್ಲಿ ಕಲುಷಿತವಾಗಿರುವ ಭಾರತದ ಗಂಗಾನದಿ ಜಲಮಾಲಿನ್ಯಕ್ಕೆ ಕೊಡಬಹುದಾದ ಅತ್ಯಂತ ಉತ್ತಮ ಉದಾಹರಣೆಗಳಲ್ಲಿ ಒಂದು.

ನೈರ್ಮಲ್ಯವು ಸ್ವಾತಂತ್ರÂಕ್ಕಿಂತಲೂ ಹೆಚ್ಚಿನದು ಎಂದು ಮಹಾತ್ಮಾ ಗಾಂಧೀಜಿಯವರು ಹೇಳುತ್ತಾರೆ. ಆದರೆ ದುರದೃಷ್ಟದ ವಿಚಾರ ಅಂದರೆ, ನಾವು ಸ್ವಾತಂತ್ರÂವನ್ನು ಗಳಿಸಿ 67 ವರ್ಷಗಳನ್ನು ಕ್ರಮಿಸಿದ್ದರೂ ಸಹ, ಇಲ್ಲಿ ಶೌಚಾಲಯದ ಸೌಕರ್ಯ ದೊರೆತಿರುವುದು ಗ್ರಾಮೀಣ ನಾಗರಿಕರಲ್ಲಿ ಸುಮಾರು 30% ರ‌ಷ್ಟು ಜನರಿಗೆ ಮಾತ್ರ.

ಮನುಷ್ಯ ತನ್ನ ಜೀವನ ಸೌಕರ್ಯದ ಅತಿಲಾಲಸೆಗಾಗಿ ಪರಿಸರವನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ಧಾವಂತದಲ್ಲಿ, ಸ್ವಾರ್ಥಪರನಾಗಿ ಮಾಲಿನ್ಯದ ಪರಿಣಾಮಗಳನ್ನೇ ಮರೆತುಬಿಟ್ಟಿದಾನೆ. ಕೈಗಾರಿಕಾ ಅಭಿವೃದ್ಧಿಗಳು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತಿವೆ. ಇಡೀ ಜೀವಜಗತ್ತಿನ ಜೀವನಾಧಾರ ವ್ಯವಸ್ಥೆಯನ್ನು ಮನುಷ್ಯ ತನ್ನದೇ ಸ್ವಂತ ಸ್ವತ್ತು ಎಂಬಂತೆ ಬದಲಾಯಿಸಿ ಬಿಟ್ಟಿದ್ದಾನೆ. ಇದರಿಂದಾಗಿ ಪರಿಸರದ ನೈಸರ್ಗಿಕ ಸಮತೋಲನವೇ ಅಸ್ತವ್ಯಸ್ತವಾಗಿದೆ. ಅತಿಬಳಕೆ, ದುರ್ಬಳಕೆ ಮತ್ತು ಸಂಪನ್ಮೂಲಗಳನ್ನು ಸ್ವಾರ್ಥ ಸಾಧನೆಗಾಗಿ ಬಳಸುತ್ತಿರುವ ಕಾರಣದಿಂದಾಗಿ ಭೂಸವಕಳಿ ಮತ್ತು ಬರಗಾಲದಂತಹ ಗಂಭೀರ ಸಮಸ್ಯೆಗಳು ತಲೆ ಎತ್ತಿವೆ. ಇಷ್ಟು ಮಾತ್ರ ಅಲ್ಲ, ಈಗ ಹವಾಮಾನ ಬದಲಾವಣೆ ಎನ್ನುವ ಇನ್ನೊಂಂದು ಅಪಾಯ ಎದ್ದು ನಿಂತಿದೆ. ಮಾಲಿನ್ಯವು ಜಾಗತಿಕ ತಾಪಮಾನದ ರೂಪದಲ್ಲಿ ಎದುರಾಗಿದ್ದು, ಇದು ಜಾಗತಿಕ ಹವಾಮಾನದ ಕಾರ್ಯ ವಿಧಾನಕ್ಕೆ ಅಡಚಣೆ ಉಂಟುಮಾಡುವ ಮೂಲಕ ಅಡ್ಡಿಪಡಿಸುತ್ತದೆ. ಚಳಿಗಾಲದಲ್ಲಿ ಬಿಸಿಯೇರುತ್ತಿದೆ, ಬರಗಾಲ ಮತ್ತು ಆಹಾರದ ಹಾಹಾಕಾರವು ಹೆಚ್ಚುತ್ತಿದೆ, ಮಳೆಯು ಮಳೆಗಾಲದಲ್ಲಿ ಮಾತ್ರ ಬೀಳುತ್ತದೆ ಎಂದು ಹೇಳುವುದು ಅಸಾಧ್ಯ.

ಆದರೆ ಕಾಲ ಇನ್ನೂ ಮಿಂಚಿಲ್ಲ, ನಾವು ಇನ್ನೂ ಕಾರ್ಯೋನ್ಮುಖರಾಗಬಹುದು ಎನ್ನುವುದು ಜಾnನಿಗಳ ಅಭಿಪ್ರಾಯ, ಕಾರ್ಬನ್‌ ಡೈ ಆಕ್ಸೆ„ಡ್‌ ಅನ್ನು ತಡೆಯುವ ಮೂಲಕ, ಶುದ್ಧ ಇಂಧನಗಳನ್ನು ಉಪಯೊಗಿಸುವ ಮೂಲಕ, ಸರಿಯಾದ ತ್ಯಾಜ್ಯ ವಿಲೇವಾರಿ ಮತ್ತು ವ್ಯಾಪಕ ರೀತಿಯಲ್ಲಿ ಮರಗಿಡಗಳನ್ನು ನೆಡುವ ಮೂಲಕ, ಆಗಿರುವ ಮಾಲಿನ್ಯವನ್ನು ಇನ್ನೂ ಸರಿಪಡಿಸಬಹುದು ಎನ್ನುವುದು ವಿಜಾnನಿಗಳ ಅನಿಸಿಕೆ.


ವಾಯು ಮಾಲಿನ್ಯ
ವಾಯುಮಾಲಿನ್ಯ ಅನ್ನುವುದು ಅತ್ಯಂತ ಭಯಾನಕ ರೀತಿಯ ಮಾಲಿನ್ಯ. ವಾಹನಗಳು, ಕಾರ್ಖಾನೆಗಳು, ಉಷ್ಣ ವಿದ್ಯುತ್‌ ಸ್ಥಾವರಗಳು ಉಗುಳುವ ತ್ಯಾಜ್ಯ ಅನಿಲಗಳು, ಸ್ಥಳೀಯ ದಹಿಸುವಿಕೆಗಳು, ಲೋಹದ ಧೂಳು... ಇತ್ಯಾದಿಗಳು ವಾಯುಮಾಲಿನ್ಯದ ಪ್ರಮುಖ ಕಾರಣಗಳು.

ವಾಯು ಮಾಲಿನ್ಯದ ಕಾರಣದಿಂದಾಗಿ, ಜಗತ್ತಿನಾದ್ಯಂತ ಪರಿಸರದ ಗಾಳಿಯ ಸಂತುಲನೆಯಲ್ಲಿ ವ್ಯತ್ಯಾಸವಾಗುತ್ತದೆ. ಹೆಚ್ಚಿನ ದಹನಕಾರಿ ಇಂಧನಗಳು - ಅಂದರೆ ಬರ್ನಿಂಗ್‌ ಫ‌ುÂಯೆಲ್‌ಗ‌ಳಿಂದ ವಾಯುಮಾಲಿನ್ಯ ಕಾರಕಗಳು ಬಿಡುಗಡೆಯಾಗುತ್ತವೆ. ಇದ್ದಿಲನ್ನು ಸುಡುವಾಗ ಇಂಗಾಲದ ಡೈ ಆಕ್ಸೆ„ಡ್‌ ಮತ್ತು ಸಲ#ರ್‌ ಡೈ ಆಕ್ಸೆ„ಡ್‌ ಉತ್ಪತ್ತಿಯಾಗುತ್ತದೆ. ಆಮ್ಲ ಮಳೆಗೆ ಕಾರಣ ಈ ಇಂಗಾಲದ ಡೈಆಕ್ಸೆ„ಡ್‌. ವಿಮಾನ ಮತ್ತು ರಾಕೆಟ್‌ಗಳಲ್ಲಿ ಕ್ಲೋರೋಫ್ಲೋರೋಕಾರ್ಬನ್‌ಗಳನ್ನು ಪ್ರೊಪೆಲ್ಲೇಂಟ್‌ಗಳಾಗಿ ಮತ್ತು ಶೈತ್ಯಕಾರಕಗಳಾಗಿ ಬಳಸುತ್ತಾರೆ, ಇದರಿಂದ ಓಝೊàನ್‌ ಪದರಕ್ಕೆ ಹಾನಿ ಉಂಟಾಗುತ್ತದೆ.

ವಾಯು ಮಾಲಿನ್ಯವು, ಅನೇಕ ರೀತಿಯ ಕಾಯಿಲೆಗಳಿಗೆ ಮತ್ತು ದೃಷ್ಟಿ ಮಾಂದ್ಯತೆಗೆ ಕಾರಣವಾಗುವುದಷ್ಟೇ ಅಲ್ಲ, ಇದು ಇಡಿಯ ಪರಿಸರ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸುತ್ತದೆ. ವಾಯುಮಾಲಿನ್ಯದ ಕಾರಣದಿಂದಾಗಿ ಸುರಿಯುವ ಆಮ್ಲಮಳೆಯು ಮಣ್ಣು, ಸಸ್ಯ ಸಂಕುಲ ಮತ್ತು ಆ ಪ್ರದೇಶದ ಜಲಚರಗಳ ಜೀವನ ವ್ಯವಸ್ಥೆಗೆ ಹಾನಿ ಉಂಟು ಮಾಡುತ್ತದೆ. ಪರಮಾಣು ಸ್ಫೋಟ ಮತ್ತು ಪರಮಾಣು ಪರೀಕ್ಷೆಗಳು ಗಾಳಿಯನ್ನು ಮಲಿನಗೊಳಿಸುತ್ತಿವೆ. 1952ರ ಲಂಡನ್ನಿನ ದಟ್ಟ ಧೂಮವು ಸುಮಾರು 4,000 ಜನರ ಸಾವಿಗೆ ಕಾರಣವಾಗಿತ್ತು. ಇದು ವಾಯುಮಾಲಿನ್ಯದ ಭೀಕರತೆಗೆ ಒಂದು ಉದಾಹರಣೆ. ಆಗ್ರಾದಲ್ಲಿನ ತಾಜ್‌ ಮಹಲ್‌, ಮಥುರಾ ರಿಫೈನರಿಯ ಹೊಗೆಯ ಅಪಾಯದಲ್ಲಿದೆ. ಈ ಇಪ್ಪತ್ತು ವರ್ಷಗಳಲ್ಲಿ ಕೈಗಾರಿಕಾ ಸ್ಥಾವರಗಳಿಂದ ಮತ್ತು ರಿಫೈನರಿಗಳಿಂದ ಹೊರಸೂಸಿದ ತ್ಯಾಜ್ಯಗಳು ಮತ್ತು ಹೊಗೆಯಿಂದ ನಮ್ಮ ಪ್ರಾಚೀನ ಸ್ಮಾರಕಗಳು ಬಹುಮಟ್ಟಿಗೆ ಕಳೆ ಗುಂದುತ್ತಾ ಸಾಗಿವೆ ಎಂದು ವರದಿಗಳು ಹೇಳುತ್ತಿವೆ.

ಜಲಮಾಲಿನ್ಯ

ಇಡೀ ಭೂಮಿಯ ನಾಲ್ಕನೇ ಮೂರರಷ್ಟು ಭಾಗವು ನೀರಿನಿಂದ ಆವೃತವಾಗಿದ್ದರೂ ಸಹ, ನಮ್ಮಲ್ಲಿ ಕುಡಿಯುವ ಶುದ್ಧ ನೀರಿಗೆ ಕೊರತೆ ಇದೆ. ಯಾವುದೇ ಬಾಹ್ಯ ಮೂಲದಿಂದ ನೀರು ಕಲುಷಿತಗೊಳ್ಳುವುದನ್ನು ಮತ್ತು ಅದರಿಂದ ಜೀವನಕ್ಕೆ ಅಪಾಯಕಾರಿಯಾಗುವುದನ್ನು ಜಲಮಾಲಿನ್ಯ ಎಂದು ಕರೆಯುತ್ತೇವೆ. ಕ್ಷಿಪ್ರ ಕೈಗಾರಿಕಾ ಬೆಳವಣಿಗೆಗಳು ಮತ್ತು ಆಧುನಿಕ ಅಭಿವೃದ್ಧಿಗಳ ಕಾರಣದಿಂದಾಗಿ ಜಲಮಾಲಿನ್ಯದ ಸಮಸ್ಯೆ ದಿನೇ ದಿನೇ ಹೆಚ್ಚುತ್ತಾ ಸಾಗಿದೆ. ಜಲಮಾಲಿನ್ಯದ ಪ್ರಮುಖ ಕಾರಣಗಳು ಅಂದರೆ, ದಿನನಿತ್ಯ ಬಳಸುವ ನೀರಿನ ಮೂಲಗಳು, ಕೃಷಿಗಾಗಿ ಬಳಸುವ ನೀರಿನ ಮೂಲಗಳು, ತ್ಯಾಜ್ಯ ಅಂಶಗಳು, ಕಾರ್ಖಾನೆಯ ತ್ಯಾಜ್ಯಗಳು, ವಿಕಿರಣಶೀಲ ತ್ಯಾಜ್ಯಗಳು, ಎಣ್ಣೆಯ ಸೋರುವಿಕೆ, ಸಾವಯವ, ನಿರವಯವ, ಜೈವಿಕ ಅಂಶಗಳ ಇರುವಿಕೆ ಮತ್ತು ಜಲ ಮೂಲಗಳಿಗೆ ಸೇರಿಸುವಿಕೆ.ಭಾರತದಲ್ಲಿ ನದಿಗಳು, ಜಲಾಶಯಗಳು, ಕೊಳಗಳು ಮತ್ತು ಬಾವಿಗಳು ಸೇರಿದಂತೆ ನೀರಿನ ಬಹುತೇಕ ಎಲ್ಲಾ ಮೂಲಗಳು ಕಲುಷಿತಗೊಂಡಿವೆ ಮತ್ತು ಅವು ಕುಡಿಯಲು ಯೋಗ್ಯವಾಗಿಲ್ಲ. ರಾಸಾಯನಿಕ ಗೊಬ್ಬರಗಳ ಅಧಿಕ ಬಳಕೆ, ನದಿಗಳು, ಸಮುದ್ರಗಳು ಮತ್ತು ಸಾಗರಗಳು, ಅಪಾಯಕಾರಿ ಮಲಿನಕಾರಕಗಳಿಂದ ಕಲುಷಿತಗೊಳುತ್ತಾ ಸಾಗಿವೆ. ಒಂದು ಅಂದಾಜಿನ ಪ್ರಕಾರ ವರ್ಷದಲ್ಲಿ 500 ಟನ್‌ಗಿಂತಲೂ ಹೆಚ್ಚಿನ ಪ್ರಮಾಣದ ಪಾದರಸ ಸಾಗರವನ್ನು ಸೇರುತ್ತಿದೆ. ಇಂದು ಭಾರತದ ಗಂಗಾ ನದಿಯೂ ಸೇರಿದಂತೆ ಎಲ್ಲಾ ನದಿಗಳು ವಿಶೇಷವಾಗಿ ಮಲಿನಗೊಂಡಿವೆ. ಇದರಿಂದಾಗಿ ಜಲಜನ್ಯ ಕಾಯಿಲೆಗಳಾದ ಅತಿಸಾರ, ಟ್ರಾಕೋಮಾ, ಕರುಳಿನ ಹುಳಗಳು, ಹೆಪಾಟೈಟಿಸ್‌, ಕಾಮಾಲೆ... ಇತ್ಯಾದಿ ಅನೇಕ ರೀತಿಯ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳು ಹೇಳುವ ಪ್ರಕಾರ, ಭಾರತದಲ್ಲಿರುವ ಎಲ್ಲಾ ಸಾಂಕ್ರಾಮಿಕ ರೋಗಗಳಲ್ಲಿ ಶೇಕಡಾ 20ರಷ್ಟು ಕಾಯಿಲೆಗಳು ನೀರಿನ ಮೂಲದ ಕಾಯಿಲೆಗಳು. ಎಣ್ಣೆಯು ಸಮುದ್ರ ನೀರನ್ನು ವಿಶೇಷವಾಗಿ ಕಲುಷಿತಗೊಳಿಸುತ್ತಿದೆ. ಬೃಹತ್‌ ಗಾತ್ರದ ಟ್ಯಾಂಕರ್‌ಗಳಿಂದ ನಿರಂತರವಾಗಿ ಸಮುದ್ರದ ನೀರಿಗೆ ಎಣ್ಣೆ ಸೋರಿಕೆಯಾಗುತ್ತಿದೆ. ವಿಷ-ಮಾಲಿನ್ಯಗಳನ್ನು ನೀರಿಗೆ ಸೇರಿಸುವ ಈ ಪ್ರಕ್ರಿಯೆಗಳಿಂದಾಗಿ ಜಲಸಸ್ಯಗಳು ಮತ್ತು ಜಲಚರಗಳ ಪ್ರಾಣಕ್ಕೆ ಕುತ್ತು ಉಂಟಾಗಿದೆ.


ಮಣ್ಣಿನ ಮಾಲಿನ್ಯ

ಮನುಷ್ಯನ ಹಸ್ತಕ್ಷೇಪ ಅಥವಾ ದುರ್ಬಳಕೆಯ ಕಾರಣದಿಂದಾಗಿ ನೆಲ ಅಥವಾ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಪರಿಸ್ಥಿತಿ ಮತ್ತು ಸಂರಚನೆಯಲ್ಲಿ ಆಗುವ ಬದಲಾವಣೆಗೆ ಮಣ್ಣು ಅಥವಾ ನೆಲದ ಮಾಲಿನ್ಯ ಎಂದು ಹೇಳಬಹುದು. ಮಣ್ಣಿನ ಮಾಲಿನ್ಯಕ್ಕೆ ಇರುವ ಪ್ರಮುಖ ಕಾರಣ ಅಂದರೆ ಅರಣ್ಯನಾಶ, ನೈಸರ್ಗಿಕ ಪ್ರಕೋಪಗಳಾದ ಅತಿವೃಷ್ಟಿ, ಪ್ರಾದೇಶಿಕ ವೈಪರೀತ್ಯ, ಬಿರುಗಾಳಿಗಳು ಮತ್ತು ಮನುಷ್ಯನ ಅತಿಚಟುವಟಿಕೆಯ ಕಾರಣಗಳಿಂದಾಗಿ ಹೆಚ್ಚಾಗುತ್ತಿರುವ ಮಣ್ಣು ಸವಕಳಿಯ ಪ್ರಮಾಣ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಮಣ್ಣು ಸವಕಳಿಯ ಪ್ರಮಾಣ ಮತ್ತು ತಪ್ಪು ವ್ಯವಸಾಯ ಕ್ರಮಗಳಿಂದಾಗಿ, ಫ‌ಲವತ್ತಾದ ಮೇಲ್ಮಣ್ಣು ಕೊಚ್ಚಿಹೋಗಿ ವ್ಯಾಪಕ ಭೂಪ್ರದೇಶವನ್ನು ಬಂಜರಾಗಿಸಿವೆ.

ಕೃಷಿಯ ಘನ ತ್ಯಾಜ್ಯಗಳು ಮತ್ತು ಹದ-ಘನ ತ್ಯಾಜ್ಯಗಳು ಹಾಗೂ ಅಶೌಚ ಅಭ್ಯಾಸಗಳ ಕಾರಣದಿಂದಾಗಿ ಮಣ್ಣು ಮಲಿನಗೊಳ್ಳುತ್ತದೆ. ಮಾತ್ರವಲ್ಲದೆ ಅಪಾಯಕಾರಿ ಅಂಶಗಳು ಮತ್ತು ಸೂûಾ¾ಣು ಜೀವಿಗಳಿಂದ ಮಣ್ಣು ದಿನೇ ದಿನೇ ಅತಿಯಾಗಿ ಮಲಿನಗೊಳ್ಳುತ್ತಿದೆ, ಮಣ್ಣಿನ ಈ ಮಾಲಿನ್ಯವು ಆಹಾರ ಸರಪಣೆಯನ್ನು ಅಥವಾ ನೀರನ್ನು ಸೇರಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಜೈವಿಕ ವಾಹಕಗಳ ಮೂಲಕ ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯರ ವಿಸರ್ಜನೆಗಳು ಮಣ್ಣಿನ ಮಾಲಿನ್ಯದ ಪ್ರಮುಖ ಅಂಶಗಳು. ಗೊಬ್ಬರಗಳಾಗಿ ಬಳಕೆಯಾಗುವ ತ್ಯಾಜ್ಯಗಳು ಮಾಲಿನ್ಯ ಉಂಟು ಮಾಡುವ ಪ್ರಮುಖ ಅಂಶಗಳು. ಆಮ್ಲಮಳೆಯಿಂದಾಗಿ ಮಣ್ಣಿನ ಆಮ್ಲಿàಯತೆಯು ಹೆಚ್ಚಾಗುತ್ತದೆ, ಇದು ಗಿಡಮರಗಳ ಬೆಳವಣಿಗೆಗೆ ಹಾನಿಕಾರಕ.
ಶಬ್ದ ಮಾಲಿನ್ಯ

ಶಬ್ದವೂ ಸಹ ಒಂದು ರೀತಿಯ ಪ್ರಮುಖ ಮಾಲಿನ್ಯಕಾರಕ. ನಗರ ಪ್ರದೇಶಗಳಲ್ಲಿ ಶಬ್ದಗಳ ಮಟ್ಟವು ಎಚ್ಚರಿಕೆ ನೀಡುವ ರೀತಿಯಲ್ಲಿ ಹೆಚ್ಚುತ್ತಾ ಸಾಗಿದೆ. ಶಬ್ದ ಮಾಲಿನ್ಯ ಅಂದರೆ 80 ಡೆಸಿಬಲ್‌ ಮಿತಿಯನ್ನು ಮೀರಿದ ಅನಾವಶ್ಯಕ ಶಬ್ದ ಎಂದು ಹೇಳಬಹುದು. ಗುಡುಗು ಮತ್ತು ಮಿಂಚುಗಳ ಕರ್ಕಶ ಸದ್ದು, ಯಂತ್ರಗಳು, ವಾಹನಗಳು, ರೈಲ್ವೆ, ಮಾನಗಳು ಮತ್ತು ಹಬ್ಬಗಳ ಸಂದರ್ಭಗಳಲ್ಲಿ ಲೌಡ್‌ ಸ್ಪೀಕರ್‌ಗಳು, ಸಿಡಿಮದ್ದುಗಳು ಹೊರಡಿಸುವ ಕರ್ಕಶ ಸದ್ದು ಮತ್ತು ಕರ್ಕಶ ಸದ್ದನ್ನು ಹೊರಡಿಸುವ ಕೆಲವು ಸಂಗಿತ ವಾದ್ಯಗಳು ಶಬ್ದಮಾಲಿನ್ಯದ ವರ್ಗದಲ್ಲಿ ಬರುತ್ತವೆ.

ಹೆಚ್ಚು ಹೆಚ್ಚು ಶಬ್ದಗಳು ಆಧುನಿಕ ಜಗತ್ತಿನ ನಿರ್ಮಾಣಗಳು ಈಗ ನಗರ ಪ್ರದೇಶಗಳ ಬಹುಮುಖ್ಯ ಪರಿಸರ ಮಾಲಿನ್ಯಕಾರಕ ಎನಿಸಿವೆ. ಶಬ್ದ ಮಾಲಿನ್ಯದ ಬಹಳ ಪ್ರಮುಖ ಪರಿಣಾಮ ಅಂದರೆ ಕಿವುಡುತನ. ಇದರಿಂದಾಗಿ ಭಾಗಶಃ ಅಥವಾ ಸಂಪೂರ್ಣ ಕಿವುಡುತನ ಉಂಟಾಗಬಹುದು. ಈ ಕಾರಣದಿಂದಾಗಿ ಕೆಲಸಗಾರರಲ್ಲಿ ದಕ್ಷತೆಯ ಕೊರತೆ ಕಾಣಿಸಿಕೊಳ್ಳಬಹುದು.

ಶಬ್ದಮಾಲಿನ್ಯದ ಮಟ್ಟವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ, ಇದರಿಂದಾಗಿ ದೈಹಿಕ ಮತ್ತು ಮಾನಸಿಕ ತೊಂದರೆಗಳು ಕಾಣಿಸಿಕೊಳ್ಳಬಹುದು. ಒತ್ತಡ ಮತ್ತು ಆತಂಕವು ಕಾಣಿಸಿಕೊಳ್ಳಲು ಇರುವ ಪ್ರಮುಖ ಕಾರಣ ಶಬ್ದ ಎನ್ನುವುದಕ್ಕೆ ಪುರಾವೆಗಳಿವೆ. ಇದರಿಂದಾಗಿ ತಲೆನೋವು, ಕಿರಿಕಿರಿ ಮಾತ್ರವಲ್ಲ ರಕ್ತದೊತ್ತಡದ ಮೇಲೆಯೂ ಇದು ಪರಿಣಾಮ ಉಂಟು ಮಾಡುತ್ತದೆ.

ಇತರ ಪರಿಣಾಮಗಳು


ಹಸುರು ಮನೆ ಅನಿಲಗಳಾದ ಇಂಗಾಲದ ಡೈ ಆಕ್ಸೆ„ಡ್‌, ನೈಟ್ರೋಜನ್‌ ಆಕ್ಸೆ„ಡ್‌, ಮೀಥೇನ್‌, ಹೈಡ್ರೋಫ್ಲೋರೋಕಾರ್ಬನ್‌ ಅನಿಲಗಳು, ಪರ್‌ಫ್ಲೋರೋ ಕಾರ್ಬನ್‌ಗಳು, ಸಲ#ರ್‌ ಹೆಕ್ಸಾಫ್ಲೋರೈಡ್‌ಗಳು ಲಕ್ಷಣ ಬದಲಾವಣೆಗಳನ್ನು ನಿರ್ಮಿಸಿವೆ. ಹಸುರು ಮನೆ ಅನಿಲಗಳ ಕಾರಣದಿಂದಾಗಿ ಹೆಚ್ಚಾಗುತ್ತಿರುವ ಮಾಲಿನ್ಯದಿಂದಾಗಿ ಜಾಗತಿಕ ತಾಪಮಾನವು ಹೆಚ್ಚಳವಾಗುತ್ತಿದೆ. ಜಾಗತಿಕ ತಾಪಮಾನ ಅಂದರೆ ಸರಾಸರಿ ಭೂಮಿಯ ಉಷ್ಣತೆಯು ಹೆಚ್ಚುವುದು, ಇದು ನೈಸರ್ಗಿಕ ಮತ್ತು ಮನುಷ್ಯರ ಚಟುವಟಿಕೆ ಇವೆರಡರ ಕಾರಣದಿಂದ ಉದ್ಭºವಿಸಿರುವ ಹಸುರು ಮನೆ ಪರಿಣಾಮದ ಫ‌ಲ. ಧ್ರುವ ಪ್ರದೇಶದಲ್ಲಿನ ಮಂಜುಗಡ್ಡೆಗಳು ಬಹಳ ಕ್ಷಿಪ್ರವಾಗಿ ಕರಗುತ್ತಿವೆ. ಇದರಿಂದಾಗಿ ಸಾಗರ ಸಮುದ್ರಗಳ ನೀರಿನ ಮಟ್ಟವು ಏರಿಕೆಯಾಗುತ್ತಿದೆ. ಅಂಟಾರ್ಟಿಕಾದಲ್ಲಿ ಹುಲ್ಲಿನ ಬೆಳವಣಿಗೆ ಮತ್ತು ಮರುಭೂಮಿ ಪ್ರದೇಶಗಳಲ್ಲಿ ಮಂಜು ಬೀಳುವುದು ಜಾಗತಿಕ ತಾಪಮಾನದ ಎಚ್ಚರಿಕೆಯ ಸೂಚನೆಗಳು. ಕಾಡಿನ ನಾಶವು ಮಹತ್ತರ ಬದಲಾವಣೆಗಳನ್ನು ಉಂಟು ಮಾಡುತ್ತಿದೆ. ಮಾತ್ರವಲ್ಲ ಬಹಳ ಅಪರೂಪದ ಅನೇಕ ಜೀವಿಗಳು ನಮ್ಮ ಕಾಡು ಮತ್ತು ನಮ್ಮ ನಡುವಿನಿಂದ ಕಣ್ಮರೆಯಾಗುತ್ತಿವೆ.


ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನವು ಮನುಷ್ಯ ಸಮುದಾಯಕ್ಕೆ ಬಹಳ ಪ್ರಮುಖ ಸವಾಲು ಎಂದು ಅನೇಕ ಜಾnನಿಗಳ ಅಭಿಪ್ರಾಯವಾಗಿದೆ. ಜಾಗತಿಕ ತಾಪಮಾನದ ಪರಿಣಾಮವು ಆರೊಗ್ಯದ ಮೇಲೆ ಉಂಟು ಮಾಡುವ ಪರಿಣಾಮವನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಂಡಿಯನ್‌ ಅಸೋಸಿಯೇಷನ್‌ ಆಫ್ ಪ್ರಿವೆಂಟಿವ್‌ ಆ್ಯಂಡ್‌ ಸೋಶಿಯಲ್‌ ಮೆಡಿಸಿನ್‌ ಮತ್ತು ಇಂಡಿಯನ್‌ ಪಬ್ಲಿಕ್‌ ಹೆಲ್ತ್‌ ಅಸೋಸಿಯೇಷನ್‌ಗಳು ಭಾರತ ಸರಕಾರವನ್ನು ಒತ್ತಾಯಿಸಿವೆ.


ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಇರುವಂತಹ ಪ್ರಮುಖ ಅಂಶಗಳು ಅಂದರೆ, ಹವಾಮಾನ ಬದಲಾವಣೆ ಮತ್ತು ಮನುಷ್ಯರ ಆರೋಗ್ಯಗಳ ನಡುವಿನ ಸಂಬಂಧಗಳ ಬಗೆಗೆ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುವುದು. ನಮ್ಮ ಗ್ರಹವನ್ನು ಅವನತಿಯಿಂದ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಾಮಾನ್ಯ ಜಾಗೃತಿ ಅತ್ಯಂತ ಆವಶ್ಯಕ. ಪರಿಸರವನ್ನು ಕಾಪಾಡಿಕೊಳ್ಳುವ ನೆಲೆಯಲ್ಲಿ ಜಗತ್ತಿನ ಎಲ್ಲಾ ದೇಶಗಳು ಒಗ್ಗೂಡಿ ಕೆಲಸ ಮಾಡಬೇಕಾಗಿದೆ.


ತಡೆಗಟ್ಟುವಿಕೆ ಮತ್ತು
ಮಾಲಿನ್ಯ ನಿಯಂತ್ರಣ


ಮಾಲಿನ್ಯ ನಿಯಂತ್ರಣ ಅನ್ನುವುದು, ಮಾಲಿನ್ಯಕಾರಕಗಳನ್ನು ಪರಿಸರದಿಂದ ಹೋಗಲಾಡಿಸಲು ಇರುವಂತಹ ಒಂದು ಉಪಾಯ. ಪರಿಸರಕ್ಕೆ ಸಂಬಂಧಿಸಿದ ವಿವಿಧ ಮಂಡಳಿ, ಇಲಾಖೆಗಳು-ಗಾಳಿ, ನೀರು ಮತ್ತು ಮಣ್ಣಿಗೆ ಸಂಬಂಧಿಸಿದಂತೆ ವಿವಿಧ ಕಟ್ಟಳೆಗಳನ್ನು ವಿಧಿಸುವ ಮೂಲಕ ಇದನ್ನು ಸಾಧಿಸಬಹುದು. ಗಾಳಿ ಮತ್ತು ನೀರಿನ ಮಾಲಿನ್ಯ, ಘನತ್ಯಾಜ್ಯಗಳ ನಿಯಂತ್ರಣಕ್ಕಾಗಿ ವೈವಿಧ್ಯಮಯ ಸಾಧನಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬಹುದು. ಕೆಳಗೆ ತಿಳಿಸಿದ ಕಾರ್ಯವಿಧಾನಗಳ ಮೂಲಕ ಮಾಲಿನ್ಯವನ್ನು ತಡೆಗಟ್ಟಬಹುದು.


1.ರಿಸೈಕ್ಲಿಂಗ್‌
2.ಮರು ಬಳಕೆ
3.ತಗ್ಗಿಸುವುದು
4.ಸಹನೀಯಗೊಳಿಸುವುದು
ವಾಯು ಮಾಲಿನ್ಯವನ್ನು ತಡೆಯುವುದು ಹೇಗೆ?

1.ಕೈಗಾರಿಕಾ ವಲಯ ಮತ್ತು ಜನವಸತಿ ಪ್ರದೇಶಗಳ ನಡುವೆ ಆರೋಗ್ಯಕರ ಅಂತರವನ್ನು ಕಾಪಾಡಿಕೊಳ್ಳುವುದು.


2.ಹೊಗೆಯು ವಾತಾವರಣದಿಂದ ಅತ್ಯಂತ ಎತ್ತರದಲ್ಲಿ ಬಿಡುಗಡೆ ಹೊಂದುವಂತೆ ಎತ್ತರವಾದ ಹೊಗೆ ಕೊಳವೆಗಳನ್ನು ಕಟ್ಟುವುದು.


3.ರೈಲ್ವೇ ಟ್ರ್ಯಾಕ್‌ಗಳನ್ನು ವಿದ್ಯುತ್‌ ಚಾಲಿತಗೊಳಿಸುವುದು.


4.ಗಣಿಗಾರಿಕೆಯ ವಲಯಗಳಲ್ಲಿ ಮರಗಿಡಗಳನ್ನು ಬೆಳೆಸುವುದು.


5.ಕಲ್ಲಿದ್ದಲಿನ ಇಂಧನಕ್ಕೆ ಬದಲಾಗಿ ಗ್ಯಾಸ್‌ ಇಂಧನವನ್ನು ಬಳಸುವುದು.


6.ಹೊಗೆ ನಿಯಂತ್ರಣಾ ವ್ಯವಸ್ಥೆ ಇರುವಂತೆ ವಾಹನಗಳನ್ನು ವಿನ್ಯಾಸಗೊಳಿಸುವುದು.


7.ಕಾರ್ಖಾನೆಗಳು, ಸ್ಥಾವರಗಳು ಮತ್ತು ರಿಫೈನರಿಗಳ ತ್ಯಾಜ್ಯಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಅಥವಾ ಮರುಬಳಕೆ ಮಾಡುವುದು.


8.ವಾಹನಗಳನ್ನು ಕಾಲಕಾಲಕ್ಕೆ ಸರಿಯಾಗಿ ಸರ್ವಿಸಿಂಗ್‌ ಮಾಡಿಸಿಕೊಳ್ಳುವುದರಿಂದ ಅವುಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳ ಬಹುದು ಮಾತ್ರವಲ್ಲ, ಇಂಧನದ ಬಳಕೆಯನ್ನೂ ತಗ್ಗಿಸಿಕೊಳ್ಳಬಹುದು.


9.ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವುದು.


10.ಬದಲಿ ಇಂಧನ ಮೂಲಗಳಾದ ಸೌರ ಶಕ್ತಿ, ಜಲವಿದ್ಯುತ್‌ ಶಕ್ತಿ ಮತ್ತು ಪವನಶಕ್ತಿಯನ್ನು ಉಪಯೋಗಿಸುವುದು.


ಜಲಮಾಲಿನ್ಯವನ್ನು ನಿಯಂತ್ರಿಸುವುದು ಹೇಗೆ?


1.ವಿಷಕಾರಕವಲ್ಲದ ಸಾಬೂನುಗಳು, ಡಿಟರ್ಜಂಟ್‌ಗಳು ಮತ್ತು ಶುದ್ಧೀಕಾರಕಗಳನ್ನು ಬಳಸುವ ಮೂಲಕ ಜಲಮಾಲಿನ್ಯವನ್ನು ತಡೆಯಬಹುದು.


2. ಹೂದೋಟ ಮತ್ತು ಹುಲ್ಲುಹಾಸುಗಳ ಮೇಲೆ ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಉಪಯೋಗಿಸದಿರುವುದು.


3.ಪೈಂಟ್ಸ್‌, ಮೋಟಾರ್‌ ಆಯಿಲ್‌, ಗ್ಯಾಸೋಲಿನ್‌, ಹಾನಿಕಾರಕ ರಾಸಾಯನಿಕಗಳನ್ನು ಸ್ಥಳೀಯ ಕಾನೂನುಗಳು ಮತ್ತು ಸುರಕ್ಷತಾ ಕ್ರಮಗಳಿಗೆ ಅನುಸಾರವಾಗಿ ವಿಲೇವಾರಿ ಮಾಡುವುದು.


4.ಅಂತರ್ಜಲವನ್ನು ರಕ್ಷಿಸಿ, ಅದು ನಮ್ಮ ನಿತ್ಯ ಉಪಯೋಗಕ್ಕೆ, ನೀರಾವರಿ ವಿಧಾನಕ್ಕೆ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಗೆ ಬೇಕೆ ಬೇಕು.


5. ಪರಿಸರಕ್ಕೆ ಹಾನಿಕಾರಕವಾದ ರಾಸಾಯನಿಕಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ ಮತ್ತು ಬಳಸಿ.


6.ಪರಿಸರಸ್ನೇಹಿ ವಾಶಿಂಗ್‌ ಪೌಡರ್‌, ಶುದ್ಧೀಕಾರಕಗಳನ್ನು ಬಳಸಿ, ರಾಸಾಯನಿಕಗಳನ್ನು ಸಂಗ್ರಹಿಸುವಾಗ ಅಂತರ್ಜಲ ಕಲುಷಿತಗೊಳ್ಳದಂತೆ ಎಚ್ಚರಿಕೆ ವಹಿಸುವುದು.


7.ಹುಲ್ಲುಹಾಸುಗಳು ಮತ್ತು ಅಧಿಕ ವೆಚ್ಚದಾಯಕ ಗಿಡಗಳನ್ನು ಬೆಳೆಸುವುದಕ್ಕೆ ಬದಲಾಗಿ ಸ್ಥಳೀಯ ಜಾತಿಯ ಗಿಡಗಳನ್ನು ನೆಟ್ಟು ಬೆಳೆಸುವುದು.


8. ಸಾಕು ಪ್ರಾಣಿಗಳ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು.


9.ಮನೆಯ ಸ್ವತ್ಛತೆಯನ್ನು ಸುಸೂತ್ರ ರೀತಿಯಲ್ಲಿ ನಿರ್ವಹಿಸುವುದು.


ಮಣ್ಣಿನ ಮಾಲಿನ್ಯವನ್ನು ಹೇಗೆ ತಡೆಯಬಹುದು?


ರಸಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯನ್ನು ಮಿತಗೊಳಿಸುವುದು.


ಜೈವಿಕ ನಿಯಂತ್ರಣ ವಿಧಾನಗಳು ಮತ್ತು ಅದರ ಬಳಕೆಯ ಬಗ್ಗೆ ಅರಿವನ್ನು ಹೊಂದಿರುವುದು.


ಪಶುಗಳು ಅತಿಯಾಗಿ ಮೇಯುವುದನ್ನು ನಿಯಂತ್ರಿ ಸುವುದು ಮತ್ತು ಸರಿಯಾದ ರೀತಿಯಲ್ಲಿ ಕಾಡುಗಳ ನಿರ್ವಹಣೆ.


ಕಾಡು ಬೆಳೆಸುವಿಕೆ ಮತ್ತು ಕಾಡುಗಳ ಮರುಅಭಿವೃದ್ಧಿಯನ್ನು ಉತ್ತೇಜಿಸುವುದು.


ಮರುಬಳಕೆಯ ಚೀಲಗಳನ್ನು ಹೆಚ್ಚು ಬಳಸುವುದು ಮತ್ತು ಪ್ಲಾಸ್ಟಿಕ್‌ ಚೀಲಗಳ ಬಳಕೆಯನ್ನು ತಗ್ಗಿಸುವುದು.


ಮಣ್ಣನ್ನು ಆವರಿಸುವ ಹುಲ್ಲನ್ನು ಬೆಳೆಸುವುದು ಮತ್ತು ನದೀ ಪಾತ್ರದ ಉದ್ದಕ್ಕೂ ದೊಡª ದೊಡ್ಡ ಮರಗಳನ್ನು ಬೆಳೆಸುವುದು.


ಕಾರ್ಖಾನೆಯ ತ್ಯಾಜ್ಯಗಳನ್ನು ತಗ್ಗು ಪ್ರದೇಶಗಳಿಗೆ ಬಹಳ ಜಾಗರೂಕತೆಯಿಂದ ವಿಲೇವಾರಿ ಮಾಡುವುದು.


ಕಳೆಗಳು ಗದ್ದೆಗಳಲ್ಲಿ ತಳವೂರದ ರೀತಿಯಲ್ಲಿ ವ್ಯವಸಾಯದಲ್ಲಿ ಸೂಕ್ತ ತಂತ್ರಜಾnನವನ್ನು ಬಳಸುವುದು.


ಗಣಿಗಾರಿಕೆ ಮತ್ತು ಅದರ ಸಾಗಾಟದಲ್ಲಿ ಸೂಕ್ತ ಮತ್ತು ಸುಧಾರಿತ ಕ್ರಮಗಳನ್ನು ಕೈಗೊಳ್ಳುವುದು.


ಭೂಪ್ರದೇಶವನ್ನು ಬಂಜರಾಗಲು ಅಥವಾ ಒಣಗಲು ಬಿಡದಿರುವುದು.


ಶಬ್ದಮಾಲಿನ್ಯವನ್ನು ತಡೆಗಟ್ಟುವುದು ಹೇಗೆ?


ಶಬ್ದವನ್ನು ಉತ್ಪತ್ತಿ ಮಾಡುವ ಯಂತ್ರಗಳನ್ನು ಪ್ರತ್ಯೇಕವಾಗಿ ಇರಿಸುವ ಮೂಲಕ ಮತ್ತು ಕಿವಿಯ ಬಿರಡೆ, ಇಯರ್‌ ಪ್ಲಗ್‌ ಅಥವಾ ಮಫ್ಲರ್‌ನಂತಹ ಶಬ್ದನಿರೋಧಕಗಳನ್ನು ಉಪಯೋಗಿಸುವ ಮೂಲಕ.


ಕಟ್ಟಡಗಳ ವಲಯ ಅಥವಾ ಅವನ್ನು ಆವರಿಸಿರುವ ಗೋಡೆಗಳ ಮೂಲಕ ಶಬ್ದವು ಹಾದು ಹೋಗದಂತೆ ನಿಯಂತ್ರಣ ಸಾಧಿಸುವ ಮೂಲಕ.


ಲೌಡ್‌ ಸ್ಪೀಕರ್‌ ಇತ್ಯಾದಿಗಳನ್ನು ಬಳಸುವ ಬಗ್ಗೆ ಕಾನೂನಿನಲ್ಲಿ ನಿರ್ಬಂಧಗಳನ್ನು ಹೇರುವುದು.


ಶಬ್ದ ಮಾಲಿನ್ಯದ ಅಪಾಯಗಳ ಕುರಿತು ಸಿನೆಮಾಗಳು ಮತ್ತು ಪತ್ರಿಕೆಗಳ ಮೂಲಕ ಪ್ರಚಾರ ಮಾಡುವುದು.


ಶಬ್ದ ಪ್ರತಿಬಂಧಕಗಳನ್ನು ಬಳಸುವುದು.


ವಾಹನಗಳ ವೇಗವನ್ನು ಮಿತಗೊಳಿಸುವುದು.


ಮಾರ್ಗಗಳ ಮೇಲ್ಮೆ„ ರಚನೆಯನ್ನು ಉತ್ತಮಪಡಿಸುವುದು.


ಘನ ವಾಹನ ಸಂಚಾರವನ್ನು ಮಿತಗೊಳಿಸುವುದು.


ಬ್ರೇಕಿಂಗ್‌ಗಳು, ಆಕ್ಸಲರೇಷನ್‌ ಮತ್ತು ಚಕ್ರದ ವಿನ್ಯಾಸವನ್ನು ವ್ಯತ್ಯಾಸಗೊಳಿಸುವ ವಿರುದ್ಧ ಸಾರಿಗೆ ನಿಯಂತ್ರಣ ಕಾನೂನುಗಳನ್ನು ಬಳಸುವುದು.


ನಿಶ್ಯಬ್ದ ಜೆಟ್‌ ಇಂಜಿನ್‌ಗಳನ್ನು ವಿನ್ಯಾಸಗೊಳಿಸುವ ಮೂಲಕ ವೈಮಾನಿಕ ಶಬ್ದಗಳನ್ನು ತಗ್ಗಿಸಬಹುದು


ಹಗಲು ಹೊತ್ತಿನಲ್ಲಿ ಹಾರುವ ವಿಮಾನದ ಸಮಯ ಮತ್ತು ರನ್‌ ವೇಗಳ ಬಳಕೆಯಲ್ಲಿ ಮಾರ್ಪಾಡು ಮಾಡುವಂತಹ ಕಾರ್ಯಗಳಲ್ಲಿ ಬದಲಾವಣೆಗಳನ್ನು ತರುವ ಮೂಲಕ ವಿಮಾನ ನಿಲ್ದಾಣದ ಹತ್ತಿರ ವಸತಿ ಇರುವ ಜನಸಮುದಾಯಕ್ಕೆ ಸಹಾಯ ಮಾಡಬಹುದು.


ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಜನರು ಹೇಗೆ ಸಹಾಯ ಮಾಡಬಹುದುನಿಮ್ಮ ನಿತ್ಯ ಜೀವನದಲ್ಲಿ ಈ ಅಭ್ಯಾಸಗಳನ್ನು ಅನುಸರಿಸಿ:


ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಲ್ಲಿ ಕಸಕಡ್ಡಿಗಳನ್ನು ಹಾಕಬೇಡಿ. ತ್ಯಾಜ್ಯ-ನಿರೋಧಕ ಶಿಬಿರಗಳನ್ನು ಆಯೋಜಿಸಿ, ಈ ಮೂಲಕ ಜನರಲ್ಲಿ ಜಾಗೃತಿಯನ್ನು ಉಂಟು ಮಾಡಬಹುದು.


ಧೂಮಪಾನವನ್ನು ನಿಲ್ಲಿಸಿ, ನೋ ಸ್ಮೋಕಿಂಗ್‌ ಸೂಚನೆಯನ್ನು ಅನುಸರಿಸಿ.


ಮರುಬಳಕೆ ಮಾಡುವ ಕೈಚೀಲಗಳನ್ನು ಉಪಯೋಗಿಸಿ.


ಉತ್ಪನ್ನಗಳಿಗೆ ಅನಗತ್ಯವಾಗಿ ಅಥವಾ ವ್ಯರ್ಥವಾಗಿ ಪ್ಯಾಕೆಜ್‌ ಮಾಡಬೇಡಿ.


ಘನತ್ಯಾಜ್ಯಗಳ ನಿರ್ವಹಣೆಯಲ್ಲಿ 3ಆರ್‌ ಸೂತ್ರವನ್ನು ಅನುಸರಿಸಿ: ಅಂದರೆ ರೆಡ್ನೂಸ್‌, ರಿಯೂಸ್‌ ಮತ್ತು ರಿಸೈಕಲ್‌.


ವಾಹನಗಳನ್ನು ರಭಸವಾಗಿ ಸ್ಟಾರ್ಟ್‌ ಮಾಡುವುದು ಮತ್ತು ಒಮ್ಮೆಲೆ ನಿಲ್ಲಿಸುವ ಕ್ರಮವನ್ನು ಬಿಟ್ಟುಬಿಡಿ.


ತ್ಯಾಜ್ಯಗಳನ್ನು ಸುಡಬೇಡಿ, ಅದರಲ್ಲು ವಿಶೇಷವಾಗಿ ಪ್ಲಾಸ್ಟಿಕ್‌ ಅನ್ನು ಸುಡುವಾಗ ಹೆಚ್ಚು ಹಾನಿಕಾರಕ ಅನಿಲಗಳು ಪರಿಸರಕ್ಕೆ ಬಿಡುಗಡೆ ಆಗುತ್ತವೆ.


ಸೀಸರಹಿತ ಪೆಟ್ರೋಲ್‌ ಮತ್ತು ಶಕ್ತಿಯ ಬದಲೀ ಮೂಲಗಳನ್ನು ಉಪಯೋಗಿಸಿ ಮತ್ತು ಎಂಜಿನ್‌ಗಳನ್ನು ಸಕಾಲದಲ್ಲಿ ಸರ್ವಿಸಿಂಗ್‌ ಮಾಡಿಸಿ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಿ. ಟೈರ್‌ಗಳಲ್ಲಿ ಗಾಳಿಯ ಒತ್ತಡ ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಹೀಗಿದ್ದರೆ ವಾಹನಗಳು ಸಮರ್ಥವಾಗಿ ಓಡುತ್ತವೆ.


ನಿಮ್ಮ ನಿತ್ಯ ಪ್ರಯಾಣಕ್ಕಾಗಿ ಹೆಚ್ಚು ಹೆಚ್ಚು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಳ್ಳಿ ಅಥವಾ ಕಾರ್‌ಪೂಲ್‌ ವಿಧಾನವನ್ನು ಅನುಸರಿಸಿ.


ಸುರಕ್ಷಿತವಾಗಿ ಬಳಸಬಹುದಾದಲ್ಲಿ ಸೈಕಲ್‌ ಅನ್ನು ಉಪಯೋಗಿಸಿ - ನಡಿಗೆ ಎನ್ನುವುದು ಉಚಿತ ಸಾಧನ. ಸೈಕ್ಲಿಂಗ್‌ ನಿಮ್ಮ ದೇಹಕ್ಕೆ ಒಳ್ಳೆಯ ವ್ಯಾಯಾಮವನ್ನು ನೀಡುತ್ತದೆ.


ಅನಗತ್ಯ ಶಬ್ದವಾಗುವಿಕೆಯನ್ನು ತಪ್ಪಿಸಿಕೊಂಡು ಶಬ್ದಮಾಲಿನ್ಯವನ್ನು ತಗ್ಗಿಸಿಕೊಳ್ಳಿ.


ಉಳಿಕೆ ರಾಸಾಯನಿಕಗಳನ್ನು, ಬಳಸಿದ ಎಣ್ಣೆ ಇತ್ಯಾದಿಯನ್ನು ಯಾವತ್ತೂ ಚರಂಡಿಯಲ್ಲಿ, ಶೌಚಾಲಯದಲ್ಲಿ ಅಥವಾ ನೆಲದಲ್ಲಿ ಅಥವಾ ನೀರಿನಲ್ಲಿ ಚೆಲ್ಲಿ ಬಿಡಬಾರದು ಅಥವಾ ತೋಟದಲ್ಲಿ ಸುಟ್ಟು ಹಾಕಬಾರದು, ಹೀಗೆ ಮಾಡುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ.


ಬಳಸಿ ಉಳಿದ ಎಣ್ಣೆ, ಹಳೆಯ ಬ್ಯಾಟರಿಗಳು ಮತ್ತು ಬಳಸಿದ ಟೈಯರ್‌ಗಳನ್ನು ಮರುಬಳಕೆಗಾಗಿ ಅಥವಾ ಸುರಕ್ಷಿತ ವಿಲೇವಾರಿಗಾಗಿ ಗ್ಯಾರೆಜ್‌ಗೆ ಕಳುಹಿಸಿ; ಇವೆಲ್ಲವೂ ಗಂಭೀರ ಮಾಲಿನ್ಯವನ್ನು ಉಂಟು ಮಾಡುತ್ತವೆ.


ಸ್ಥಳೀಯ ಆಹಾರಗಳು ಮತ್ತು ಸಾಮಗ್ರಿಗಳಿಗೆ ಪ್ರೋತ್ಸಾಹ ನೀಡಿ. ಹೀಗೆ ಮಾಡುವುದರಿಂದಾಗಿ ಆಹಾರಗಳನ್ನು ಬಹಳ ಕಾಲ ಕೆಡದಂತೆ ಇರಿಸಲು ಬಳಸುವ ಸಂರಕ್ಷಕಗಳ ಬಳಕೆ ಮತ್ತು ಆಹಾರ ಮತ್ತು ಸರಕುಗಳ ಸಾರಿಗೆ ವೆಚ್ಚ ಕಡಿಮೆಯಾಗಬಹುದು.


ನಿಸರ್ಗದ ಜತೆಗೆ ಮರುಸಂಪರ್ಕ ಬೆಳೆಸಿಕೊಳ್ಳಿ. ಗಾಳಿ ಮತ್ತು ಸೂರ್ಯನಿಂದ ಹೇರಳವಾಗಿ ದೊರಕುವ ಹಸಿರು ಶಕ್ತಿಯನ್ನು ಬಳಸಿಕೊಳ್ಳಿ ಮತ್ತು ಹಸುರಿನ ಜತೆಗಿನ ಜೀವನವನ್ನು ಜೀವಿಸಿ. ನಿಮ್ಮ ಬಟ್ಟೆಬರೆಗಳನ್ನು ಡ್ರೆ„ಯರ್‌ನಲ್ಲಿ ಒಣಗಿಸುವುದಕ್ಕೆ ಬದಲಾಗಿ ಬಿಸಿಲಿಗೆ ಒಣಗಲು ಹಾಕಿ. ಏರ್‌ಕಂಡಿಷನ್‌ ವ್ಯವಸ್ಥೆಗೆ ಒಡ್ಡಿಕೊಳ್ಳುವುದಕ್ಕೆ ಬದಲಾಗಿ ತೆರೆದ ಕಿಟಿಕಿಗಳಿಂದ ಬೀಸುವ ತಾಜಾ ಗಾಳಿಯನ್ನು ಆನಂದಿಸಿ.


ನಿಮ್ಮದೇ ಆದ ಹಸುರು ವಾತಾವರಣವನ್ನು ನಿರ್ಮಿಸಿಕೊಳ್ಳಿ. ನಿಮ್ಮ ಕೈತೋಟ-ಹೂದೋಟಗಳನ್ನು ಗೌರವಿಸಿ, ಹೆಚ್ಚು ಹೆಚ್ಚು ಗಿಡಗಳನ್ನು ನೆಡಿ ಮತ್ತು ನಿಮ್ಮ ಮನೆಯ ಒಳಾಂಗಣದಲ್ಲಿ ಹೆಚ್ಚು ಗಿಡಗಳನ್ನು ಹಾಕಿ. ಅವು ಗಾಳಿಯನ್ನು ಶುದ್ಧಗೊಳಿಸುತ್ತವೆ, ಆಮ್ಲಜನಕವನ್ನು ಒದಗಿಸುತ್ತವೆ ಮತ್ತು ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಆಹ್ಲಾದಗೊಳಿಸುತ್ತವೆ.
ತ್ಯಾಜ್ಯಗಳು ನದಿ ಮತ್ತು ಇತರ ಜಲ ಮೂಲಗಳನ್ನು ಮಲಿನಗೊಳಿಸದ ರೀತಿಯಲ್ಲಿ ಅವನ್ನು ಸರಿಯಾಗಿ ವಿಲೇವಾರಿ ಮಾಡಿ.

ನಿಮ್ಮ ಸಾಕುಪ್ರಾಣಿಗಳನ್ನು ಚೆನ್ನಾಗಿ ಆರೈಕೆ ಮಾಡಿ ಮತ್ತು ಅವುಗಳ ತ್ಯಾಜ್ಯಗಳನ್ನು ಸರಿಯಾಗಿ ಲೇವಾರಿ ಮಾಡಿ.

ಮಳೆ ನೀರನ್ನು ಸಂಗ್ರಹಿಸಿ.
ಪರ್ಯಾಯ ವ್ಯವಸಾಯ ಪದ್ಧತಿಯನ್ನು ಅನುಸರಿಸಿ.
ಕೀಟನಾಶಕಗಳ ಮಿತ ಬಳಕೆ, ಸರಿಯಾದ ಬೇಸಾಯ ಕ್ರಮ, ಸರಿಯಾದ ಒಳಚರಂಡಿ ಮತ್ತು ನೀರಾವರಿ ಕ್ರಮಗಳನ್ನು ಅಳವಡಿಸಿಕೊಳ್ಳಿ.
ಸಾವಯವ ಘನ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸಿ
ವಿವಿಧ ಕಾರಣಗಳಿಗಾಗಿ ಮರಗಳನ್ನು ಕಡಿದಿರುವಲ್ಲೆಲ್ಲ ಗಿಡಗಳನ್ನು ನೆಡುವುದರಿಂದ ಪರಿಸರದಲ್ಲಿನ ಹೆಚ್ಚುವರಿ ಇಂಗಾಲದ ಡೈ ಆಕ್ಸಿಡ್‌ ಅನ್ನು ಹೀರಿಕೊಳ್ಳಲು ಸಹಾಯ ಆಗುತ್ತದೆ.
ತ್ಯಾಜ್ಯಗಳನ್ನು ಜೈವಿಕ ತ್ಯಾಜ್ಯ ಮತ್ತು ಅಜೈವಿಕ ತ್ಯಾಜ್ಯಗಳೆಂದು ವಿಂಗಡಿಸಿದ ಅನಂತರ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.
ಕಾಂಪೋಸ್ಟ್‌ ಬಿನ್‌ ಅನ್ನು ಉಪಯೋಗಿಸಿ. ಇದನ್ನು ಉಳಿಕೆ ಆಹಾರ ಮತ್ತು ಇತರ ಜೈವಿಕ ಅಂಶಗಳನ್ನು ರಿ-ಸೈಕಲ್‌ ಮಾಡಲು ಉಪಯೋಗಿಸಬಹುದು.
ಏಳು ಶತಕೋಟಿ ಕನಸುಗಳು, ಒಂದೇ ಪರಿಸರ, ಎಚ್ಚರಿಕೆಯಿಂದ ಖರ್ಚು ಮಾಡೋಣ ಇದು ಈ ಬಾರಿಯ ವಿಶ್ವ ಪರಿಸರ ದಿನದ ಘೋಷವಾಕ್ಯ. ಇದು ನೈಸರ್ಗಿಕ ಸಂಪನ್ಮೂಲಗಳ ಅವನತಿ, ಅದನ್ನು ತಡೆಗಟ್ಟುವುದು ಮತ್ತು ಭವಿಷ್ಯ ಕ್ಕಾಗಿ ಕಾಪಾಡಿಕೊಳ್ಳಲು ನಾವು ಏನು ಮಾಡಬಹುದು ಎಂಬ ಬಗ್ಗೆ ಹೇಳುತ್ತದೆ. ಮನುಷ್ಯಕುಲದ ಮತ್ತು ವಾತಾವರಣದ ಹಿತ, ಮತ್ತು ಆರ್ಥಿಕ ಸುಸ್ಥಿತಿಗಳು ಖಂಡಿತವಾಗಿಯೂ ಪೃಥ್ವಿಯ ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತ ನಿರ್ವಹಣೆಯನ್ನು ಅವಲಂಬಿಸಿವೆ.


ಕೃಪೆ: ‌ಉದಯವಾಣಿ

1972ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ದಿನಾಚರಣೆ ಆಚರಿಸಬೇಕು ಎಂದು ನಿರ್ಧರಿಸಲಾಯಿತು. 1973ರಿಂದ ಪರಿಸರ ದಿನದ ಆಚರಣೆ ಪ್ರಾರಂಭವಾಯಿತು. ಅಂತೆಯೇ ಜೂನ್ 5 ವಿಶ್ವ ಪರಿಸರ ದಿನಾಚರಣೆ. ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮ. ಪ್ರತಿ ವರ್ಷ ನಿರ್ಧಿಷ್ಟ ವಸ್ತು ವಿಷಯವನ್ನಾಧರಿಸಿ ಆಚರಿಸಲಾಗುತ್ತದೆ. ಅಂತಯೇ ’ಯೋಚಿಸು, ಉಣ್ಣು, ಉಳಿಸು’ ಎಂಬ ಸಿದ್ಧಾಂತದ ಮೇಲೆ ಈ ಬಾರಿ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ.

ಪ್ರತಿ ವರ್ಷ ಪರಿಸರ ದಿನಾಚರಣೆ ಬರುತ್ತದೆ. ಆ ಸಂದರ್ಭದಲ್ಲಿ ಎಲ್ಲರ ಬಾಯಲ್ಲಿ ಪರಿಸರ ಕಾಳಜಿ ಬಗೆಗಿನ ಉದ್ದುದ್ದ ವಾಖ್ಯಗಳು, ಗಿಡ ನೆಡುವ ಸಡಗರ.. ಪರಿಸರ ಸಂರಕ್ಷಣೆಯ ಅಣಿಮುತ್ತುಗಳು..ಎಲ್ಲಡೆ ಹಸಿರಿನಿಂದ ಕಂಗೊಳಿಸುವ ಬಣ್ಣ... ಮುಂದಿನ ವರ್ಷದ ಪರಿಸರ ದಿನಾಚರಣೆ ಬರುವ ಹೊತ್ತಿಗೆ ನಗರದಲ್ಲಿ ಹಸಿರ ಕಾನನ ಮಾಡಿಬಿಡುತ್ತೇವೆ ಎಂಬ ಧಾವಂತ... ಹಾಗೆ ದಿನಗಳೆದಂತೆ ಆಡಿದ ಮಾತನ್ನು, ಪರಿಸರದ ಬಗೆಗಿನ ಕಾಳಜಿಯನ್ನೇ ಮರೆತು ಸಾಗುವ ಪರಿ.. ಇದು ನಾವು ಆಚರಿಸುತ್ತಿರುವ ಪರಿಸರ ದಿನಾಚರಣೆ....

ಪರಿಸರ, ಪಕೃತಿ ನಮಗೆ ಯಾವುದನ್ನು ನೀಡಲ್ಲ.. ಎಲ್ಲವನ್ನೂ ನೀಡುತ್ತದೆ. ಅಗಣಿತವಾದ ಅಮೂಲ್ಯ ಕೊಡುಗೆಗಳನ್ನು ನೀಡುತ್ತದೆ. ಪ್ರತಿಯೊಂದು ಜೀವ ಸಂಕುಲಕ್ಕೆ ಅಗತ್ಯ, ಅನಿವಾರ್ಯ.. ಆದರೆ ನಾವಿಂದು ಪರಿಸರಕ್ಕಾಗಿ, ಏನನ್ನು ಕೊಟ್ಟಿದ್ದೇವೆ.. ಕೊಡುತ್ತಿದೇವೆ ಎಂಬುದನ್ನು ಪ್ರತಿಯೊಬ್ಬ ಮಾನವನು ತನಗೆ ತಾನೇ ಹಾಕಿಕೊಳ್ಳಬೇಕಾದ ಪ್ರಶ್ನೆ. ಉತ್ತರ ಮಾತ್ರ ನಗಣ್ಯ. ಕೊನೆ ಪಕ್ಷ ಇರುವ ಪರಿಸರವನ್ನು ರಕ್ಷಿಸಿಕೊಳ್ಳುವ ಬಗ್ಗೆ ಕಿಂಚಿತ್ತೂ ಯೋಚಿಸಲೂ ಆಗದಷ್ಟು ನಿಷ್ಕಾಳಜಿ.

ಹಸಿರನ್ನು ಉಳಿಸಲು ಇದೆಯೆ ನಮಗೆ ಇಚ್ಚಾ ಶಕ್ತಿ ?..

ಬೆಂಗಳೂರು ನಗರದಲ್ಲಂತೂ ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚುತ್ತಿದೆ. ಕಣ್ಣೆತ್ತಿ ನೋಡಿದರೆ ಪರ್ವತದಂತೆ ಎದ್ದು ನಿಂತ, ನಿಲ್ಲುತ್ತಿರುವ ಕಟ್ಟಡಗಳ ಸಮುಚ್ಛಯ, ರಸ್ತೆಯಲ್ಲಿ ತುಂಬಿದ ತ್ಯಾಜ್ಯ, ಗಾಳಿಯಲ್ಲಿ ಮಾಲಿನ್ಯದ ದಟ್ಟ ಹೊಗೆ, ಚರಂಡಿಗಳ ಅವ್ಯವಸ್ಥೆಯಿಂದ ಕೊಳಚೆ ನೀರಿನ ಪ್ರವಾಹ, ವಾಹನಗಳ ಭರಾಟೆ, ಕಿವಿಗಡಚಿಕ್ಕುವ ಶಬ್ದ. ಇವುಗಳಿಂದ ಕಲ್ಮಷವಾದ ದೂಳಿನ ಕಣಗಳ ನಿರಂತರ ಸೇವನೆಯಿಂದ ಒಂದಿಲ್ಲೊಂದು ಕಾಯಿಲೆಗೆ ತುತ್ತಾಗುತ್ತಿರುವ ಮನುಷ್ಯ... ಕಲುಷಿತಗೊಂಡ ನೀರು, ಗಾಳಿ, ಆಹಾರದ ಸೇವನೆಗೆ ನಮ್ಮನ್ನೇ ನಾವು ಒಗ್ಗೂಡಿಸಿಕೊಂಡು ನಡೆಯುತ್ತಿರುವ ಸ್ಥಿತಿ.

ಪ್ರತಿದಿನ ಬೆಂಗಳೂರನ್ನು ಸೇರುತ್ತಿರುವ ಜನ, ಏರುತ್ತಿರುವ ತ್ಯಾಜ್ಯ, ಇದ್ದಬದ್ದ ಮರಗಳನ್ನು ಕಡಿದು ಕಟ್ಟುತ್ತಿರುವ ವಾಣಿಜ್ಯ ಕಟ್ಟಡಗಳು... ದಿನಂಪ್ರತಿ 1200ದಷ್ಟು ಸೇರಿಕೊಳ್ಳುವ ವಾಹನಗಳು... ಇದು ಹೀಗೆ ಮುಂದುವರಿದರೆ ಮುಂದೊಂದುದಿನ ಮುಂದಿನ ಪೀಳಿಗೆಗಳಿಗೆ ’ಪರಿಸರ’, ’ಹಸಿರು’ ಎಂದರೇನು ಎಂಬುದೇ ಗೊತ್ತಾಗದ ಸ್ಥಿತಿ ತಲುಪುವ ಕಾಲ ದೂರವಿಲ್ಲ. ಅಷ್ಟೊತ್ತಿಗೆ ಉಸಿರಾಟಕ್ಕೂ ನಿರ್ಮಲವಾದ ಗಾಳಿ ಇಲ್ಲದೇ ಮನುಷ್ಯ ಪರದಾಡುವ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ.
ಕಾಂಕ್ರೀಟ್ ಕಾಡಲ್ಲಿ ಹಸಿರಿಗೆಲ್ಲಿ ಉಳಿವು ?...

ಪ್ರತಿಯೊಬ್ಬ ವ್ಯಕ್ತಿ ಪರಿಸರದ ಅಗತ್ಯತೆ, ಕಾಳಜಿ, ಅರಿವನ್ನು ಹೊಂದಿರುವುದರ ಜೊತೆಗೆ. ಪರಿಸರಕ್ಕೆ ತಾನು ನೀಡುತ್ತಿರುವ ಕೊಡುಗೆಯಾದರೂ ಏನು ಎಂಬುದನ್ನು ಮನವರಿಕೆ ಮಾಡಿಕೊಂಡು ಅದರ ಉಳಿವಿಗಾಗಿ ಜಾಗೃತನಾಗಬೇಕು. ನಮಗಿರುವ ಒಂದೇ ಒಂದು ಭೂಮಿಯನ್ನು, ಭೂಗ್ರಹವನ್ನು ಉಳಿಸಿಕೊಳ್ಳಲು ಹಿಂದೆಂದೂ ಇಲ್ಲದ ಕಾಳಜಿ ಈಗ ಬಾಯಲ್ಲಿ ಮಾತ್ರ ಪಠಣ ಮಾಡಿದರೆ ಸಾಲದು.

ಇನ್ನಾದರೂ ಮನುಷ್ಯ ಜಾಗೃತನಾಗಿ ಪರಿಸರ ಸಂರಕ್ಷಣೆಗಾಗಿ ಕ್ರಮಗಳನ್ನು ಕೈಗೊಂಡು ಹಸಿರು ಕ್ರಾಂತಿ ಮಾಡಬೇಕಿದೆ. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಅದು ನಿತ್ಯ ನಿರಂತರವಾಗಿರಬೇಕು. ಅಂದಾಗ ಮಾತ್ರ ಪರಿಸರ ದಿನಾಚರಣೆಗೊಂದು ಅರ್ಥ ಸಿಗುತ್ತದೆ.. ಪರಿಸರವನ್ನು ಉಳಿಸುವ ಮೂಲಕ ನಾವು ಬದುಕಿ ಬಾಳಿದಂತಾಗುತ್ತದೆ.

ಕೃಪೆ: ಅಂತರಜಾಲ

ಮಹಾತ್ಮ ಗಾಂಧಿ ಜನ್ಮ ದಿನಾಚರಣೆ

 



ಪ್ರತಿವರ್ಷ ಅಕ್ಟೋಬರ್ ೦೨ ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನೂ ಇದೇ ದಿನ ಆಚರಿಸಲಾಗುತ್ತದೆ.

ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರಿಯ ಹಬ್ಬ ಕಾರಣ ಅಂದು ಗಾಂಧಿ ಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾದನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಅದರ ಜೊತೆಗೆ ಅಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ ಶ್ರಮದಾನ ಮಾಡುತ್ತಾರೆ. ಶಾಲಾ ಮಕ್ಕಳು ಸಹ ಬೆಳಿಗ್ಗೆ ಬೇಗನೆ ಎದ್ದು ಜಳಕ ಮಾಡಿ, ರಾಷ್ಟ್ರ ಪಿತನಿಗೆ ನಮಿಸಿ, ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ. ಇಂತಾ ಮಹಾನ ವ್ಯಕ್ತಿಯ ಜನ್ಮ ದಿನವಾದ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇದಿಸಿರುವುದು ಹೆಮ್ಮೆಯ ಸಂಗತಿಯು ಹೌದು. ನಿಮಗೆ ತಿಳಿದ ಹಾಗೆ ಗಾಂಧೀಜಿ ಯವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು ಇವರ ಪೂರ್ಣ ಹೆಸರು ಮೋಹನದಾಸ್ ಕರಮ‍ಚಂದ್ ಗಾಂಧಿ ಅಕ್ಟೋಬರ್ 2, 1869 ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ ,ತಾಯಿ ಪುತಲೀಬಾಯಿ. 13 ನೆಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿಬಾ ಅವರನ್ನು ವಿವಾಹವಾದರು. ನಂತರ ಇವರಿಗೆ ನಾಲ್ಕು ಮಕ್ಕಳು ಜನಿಸಿದರು : ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ . 19 ನೆಯ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನಗರದ ಯೂನಿವರ್ಸಿಟಿ ಕಾಲೇಜಿನಲ್ಲಿ ವಕೀಲಿ ವೃತ್ತಿಗಾಗಿ ತರಬೇತಿ ಪಡೆಯಲು ತೆರಳಿ ತರಬೇತಿ ಯನ್ನು ಮುಗಿಸಿ ಬಂದು. ಮುಂಬೈ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಬಹಳ ಪ್ರಯತ್ನಿಸಿದರು. ಆದರೆ ಹೆಚ್ಚು ಯಶಸ್ಸು ಕಾಣದಿದ್ದರಿಂದ ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾ ಕ್ಕೆ ಕೆಲಸದ ಮೇಲೆ ತೆರಳಿದರು.ಅಲ್ಲಿ ಭಾರತೀಯ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡ ಗಾಂಧೀಜಿ ಅಲ್ಲಿನ ವರ್ಣಭೇದ ನೀತಿಯನ್ನು ಅಳಿಸಲು ಚಳುವಳಿಯನ್ನು ಆರಂಭಿಸಿದರು. ಅಲ್ಲಿನ ಪೀಟರ್ ಮ್ಯಾರಿಟ್ಸ್ ಬರ್ಗ್ ಎಂಬ ನಗರದಲ್ಲಿ ರೈಲಿನಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದುಕೊಂಡಿದ್ದರೂ ಅಲ್ಲಿ ಕೂರಲು ಬಿಡದೆ ರೈಲಿನಿಂದ ಹೊರಹಾಕಿದಾಗ ಅವರ ವರ್ಣಭೇದ ನೀತಿಯ ವಿರುದ್ಧ ಹೋರಾಡುವ ನಿಶ್ವಯ ಸ್ಥಿರವಾಯಿತು. ನವಂಬರ್ 6, 1913 ರಲ್ಲಿ ಭಾರತೀಯ ಗಣಿಗಾರರ ಒಂದು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಗಾಂಧೀಜಿ ಬಂಧಿತರಾದರು. ಗಾಂಧೀಜಿವರ ತತ್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಗೀತೆ, ಮತ್ತು ರಷ್ಯದ ಪ್ರಸಿದ್ಧ ಸಾಹಿತಿ ಲಿಯೋ ಟಾಲ್‍ಸ್ಟಾಯ್ ಅವರ ಬರಹಗಳು. ಗಾಂಧೀಜಿಯವರು ಅಮೆರಿಕನ್ಸಾಹಿತಿ ಹೆನ್ರಿ ಡೇವಿಡ್ ಥೋರ್ಯೂ ನ ಪ್ರಬಂಧಗಳಿಂದಲೂ ಪ್ರಭಾವಿತರಾಗಿದ್ದರು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಗಾಂಧೀಜಿಯವರು ಭಾರತಕ್ಕೆ ಮರಳಿ ಭಾರತೀಯರು ಬ್ರಿಟಿಷರ ಪರವಾಗಿ ಯುದ್ಧದಲ್ಲಿ ಭಾಗವಹಿಸುವಂತೆ ಕೇಳಿಕೊಂಡು ಇದಕ್ಕಾಗಿ ಪ್ರಚಾರ ಮಾಡಿದರು.ಯುದ್ಧದ ನಂತರ ಗಾಂಧೀಜಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಜೊತೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು. ಗಾಂಧೀಜಿಯವರ ಯಶಸ್ವಿ ಸತ್ಯಾಗ್ರಹಗಳಲ್ಲಿ ಇನ್ನೊಂದೆಂದರೆ ಸ್ವದೇಶಿ ಚಳುವಳಿ – ಪರದೇಶಗಳಲ್ಲಿ ಉತ್ಪಾದಿತವಾದ ವಸ್ತುಗಳನ್ನು, ಅದರಲ್ಲಿ ಮುಖ್ಯವಾಗಿ ಬ್ರಿಟಿಷ್ ವಸ್ತುಗಳನ್ನು, ವರ್ಜಿಸಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳನ್ನು ಮಾತ್ರ ಬಳಸುವಂತೆ ಕೇಳಿಕೊಂಡರು. ಈ ತತ್ವವೇ ಖಾದಿ ಉತ್ಪಾದಿಸಿ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯುವಂತೆ ಕೇಳಿ ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು. 1920 ರಂದು ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು. ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ಒಂದು ದಂಡಿ ಯಾತ್ರೆ. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ 12, 1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ಮೇ 8, 1933 ರಂದು ಆರಂಭಗೊಂಡು 21 ದಿನಗಳ ಕಾಲಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಮಾರ್ಚ್ 3, 1939 ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.”ಭಾರತ ಬಿಟ್ಟು ತೊಲಗಿರಿ” ಚಳುವಳಿ 1942 ರಲ್ಲಿ ಆರಂಭವಾಯಿತು. ಆಗಸ್ಟ್ 9, 1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ ಎರಡು ವರ್ಷಗಳ ಕಾಲ ಬಂಧನದಲ್ಲಿರಿಸಿದರು. ತತ್ವಗಳು: ಅವರ ಮುಖ್ಯ ತತ್ವಗಳು ಸತ್ಯ ಮತ್ತು ಅಹಿಂಸೆ. ಅಹಿಂಸೆಯ ತತ್ವ ಭಾರತೀಯ ಧಾರ್ಮಿಕ ವಿಚಾರದಲ್ಲಿ ಅನೇಕ ಶತಮಾನಗಳಿಂದ ಅಸ್ತಿತ್ವದಲ್ಲಿರುವ ತತ್ವ. ಗಾಂಧೀಜಿಯವರು ಕಟ್ಟಾ ಸಸ್ಯಾಹಾರಿಗಳು. ಲಂಡನ್ ನಲ್ಲಿ ಓದುತ್ತಿದ್ದಾಗ ಅವರು ಸಸ್ಯಾಹಾರದ ಬಗೆಗೆ ಪುಸ್ತಕಗಳನ್ನೂ ಬರೆದಿದ್ದರು. ಹಿಂದೂ ಮತ್ತು ಜೈನ ಸಮಾಜಗಳಲ್ಲಿ ಸಸ್ಯಾಹಾರದ ತತ್ವ ಶತಮಾನಗಳಿಂದಲೂ ಆಳವಾಗಿ ಬೇರೂರಿರುವುದು. ವಿವಿಧ ರೀತಿಯ ಆಹಾರ ಕ್ರಮಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡ ಗಾಂಧೀಜಿಯವರ ನಂಬಿಕೆ ನಮ್ಮ ಆಹಾರ ಕ್ರಮ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೇ ಹೊರತು ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿಲ್ಲವೆಂಬುದು. ಕಾಲಕಾಲಕ್ಕೆ ಉಪವಾಸ ವ್ರತವನ್ನೂ ಕೈಗೊಳ್ಳುತ್ತಿದ್ದ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಚಳುವಳಿಯಲ್ಲೂ ಉಪಯೋಗಿಸಿದವರು. 36 ನೆಯ ವಯಸ್ಸಿನಲ್ಲಿ ಗಾಂಧೀಜಿಯವರು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು. ಹಾಗೆಯೇ ವಾರದಲ್ಲಿ ಒಂದು ದಿನ ಮೌನವ್ರತವನ್ನು ಆಚರಿಸುತ್ತಿದ್ದರು. ಇದರಿಂದ ಆತ್ಮಶಾಂತಿ ಸಿಕ್ಕುತ್ತದೆಂಬುದು ಗಾಂಧೀಜಿಯವರ ನಂಬಿಕೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಶ್ರೀಮಂತ ಉಡುಪುಗಳನ್ನು ಗಾಂಧೀಜಿ ಎಂದಿಗೂ ಧರಿಸಲಿಲ್ಲ. ಭಾರತದ ಅತ್ಯಂತ ಬಡ ಮನುಷ್ಯ ಒಪ್ಪಿಕೊಳ್ಳಬಹುದಾದ ಉಡುಪುಗಳನ್ನು ಮಾತ್ರ ಅವರು ಧರಿಸುತ್ತಿದ್ದರು. ಮನೆಯಲ್ಲಿಯೇ ನೇಯ್ದ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಗಾಂಧೀಜಿ ಪ್ರೋತ್ಸಾಹಿಸುತ್ತಿದ್ದರು. ಗಾಂಧೀಜಿಯವರ ಚರಕ ನಂತರ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಬಾವುಟದಲ್ಲಿಯೂ ಸೇರಿತು. ಸತ್ಯದೊಂದಿಗೆ ನನ್ನ ಪ್ರಯೋಗಗಳು ಮಹಾತ್ಮ ಗಾಂಧಿಯವರ ಆತ್ಮ ಚರಿತ್ರೆ. ಜನಪ್ರಿಯವಾಗಿ ಮಹಾತ್ಮ ಗಾಂಧಿ, ಆಧುನಿಕ ಭಾರತ ದೇಶದ ಪಿತಾಮಹರಲ್ಲಿ ಒಬ್ಬರು, ಮತ್ತು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಪ್ರಭಾವಶಾಲಿ ನಾಯಕರು ಮತ್ತು ಸತ್ಯಾಗ್ರಹಿಗಳು. ಬ್ರಿಟಿಷ್ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ತಂದರು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮೊದಲಾದ ಅಹಿಂಸಾವಾದಿ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹದ ತತ್ವದಿಂದ ಆಳವಾಗಿ ಪ್ರಭಾವಿತರಾದವರು. ಗಾಂಧೀಜಿಯವರ ಹೇಳಿಕೆಯಂತೆ, ಅವರ ಮೌಲ್ಯಗಳು ಸರಳ ಧಾರ್ಮಿಕ ನಂಬಿಕೆಗಳಿಂದ ಬಂದಂಥವು: ಸತ್ಯ ಮತ್ತು ಅಹಿಂಸೆ. ಬನ್ನಿ ಅವರ ಹಾದಿಯಲ್ಲಿ ನಾವೂ ಸಹ ಸಾಗಲು ಪ್ರಯತ್ನಿಸೋಣ.

ಲಾಲ ಬಹಾದ್ದೂರ ಶಾಸ್ತ್ರಿ ಜನ್ಮ ದಿನಾಚರಣೆ

 ಉತ್ತರ ಪ್ರದೇಶದ ವಾರಾಣಸಿಯಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿ ಮುಗಲ್ಸರಾಯಿಯಲ್ಲಿ ಅಕ್ಟೋಬರ್ 2, 1901ರಂದು ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಜನಿಸಿದರು. ಲಾಲ್ ಬಹಾದ್ದೂರ್ ಶಾಸ್ತ್ರಿಯವರ ತಂದೆ ಒಬ್ಬ ಶಾಲಾ ಶಿಕ್ಷಕರಾಗಿದ್ದರು ಮತ್ತು ಶಾಸ್ತ್ರಿಯವರು ಒಂದೂವರೆ ವರ್ಷದವರಾಗಿರುವಾಗಲೇ ಅವರು ತೀರಿಕೊಂಡರು. ಆಗ ಇಪ್ಪತ್ತು ವಯಸ್ಸಿನ ಅವರ ತಾಯಿ ತಮ್ಮ ಹದಿಮೂರು ಮಕ್ಕಳ ಜತೆ ತವರು ಮನೆ ಸೇರಿ ಅಲ್ಲೇ ಉಳಿದರು.

ಲಾಲ್ ಬಹಾದ್ದೂರ್ ಅವರ ಪುಟ್ಟ ಹಳ್ಳಿಯ ಶಿಕ್ಷಣ ಯಾವ ರೀತಿಯಲ್ಲೂ ಗಮನಾರ್ಹವಾಗಿಲಿಲ್ಲ. ಕಿತ್ತು ತಿನ್ನುವ ಬಡತನವೊಂದÀನ್ನು ಬಿಟ್ಟರೆ ಅವರ ಬಾಲ್ಯ ಸಂತಸಮಯವಾಗಿತ್ತು.
ಪ್ರೌಢ ಶಾಲೆಗೆ ದಾಖಲಿಸಲುಲಾಲ್ ಬಹಾದ್ದೂರ್ ಅವರನ್ನು ಅವರ ಮಾವನೊಡನೆ ವಾರಾಣಸಿಗೆ ಕಳುಹಿಸಲಾಯಿತು. ಅವರನ್ನು ಮನೆಯಲ್ಲಿ ನನ್ಹೆ ( ಪುಟ್ಟ) ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಉರಿ ಬಿಸಿಲಲ್ಲಿ ಕಾದ ರಸ್ತೆ ಮೇಲೆ ಚಪ್ಪಲಿಗಳಿಲ್ಲದೆ ಮೈಲುಗಟ್ಟಲೆ ನಡೆದು ಲಾಲ್ ಬಹಾದ್ದೂರ್ ಶಾಲೆ ಸೇರಬೇಕಾಗಿತ್ತು.
ಬೆಳೆಯುತ್ತಿದ್ದಂತೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ವಿದೇಶಿಯರ ಹಿಡಿತದಲ್ಲಿರುವ ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಆಸಕ್ತಿ ಹೆಚ್ಚತೊಡಗಿತು. ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಬೆಂಬಲಿಸಿದ ದೇಶದ ರಾಜರುಗಳ ವಿರುದ್ಧ ಮಹಾತ್ಮಾ ಗಾಂಧಿ ಅವರ ಖಂಡನೆಯಿಂದ ಲಾಲ್ ಬಹಾದ್ದೂರ್ ಅತ್ಯಂತ ಪ್ರಭಾವಿತರಾದರು. ಈ ವೇಳೆ ಲಾಲ್ ಬಹಾದ್ದೂರ್ ಕೇವಲ ಹನ್ನೊಂದು ವರುಷ ವಯಸ್ಸಿನವರಾಗಿದ್ದರು.
ಗಾಂಧೀಜಿ ತನ್ನ ದೇಶದ ನಾಗರಿಕರನ್ನು ಅಸಹಕಾರ ಚಳುವಳಿಗೆ ಸೇರಲು ಕರೆ ನೀಡಿದ ಸಂದರ್ಭದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ಕೇವಲ ಹದಿನಾರು ವರುಷ ವಯಸ್ಸು. ಮಹಾತ್ಮಾ ಅವರ ಕರೆಗೆ ಪ್ರತಿಕ್ರಿಯೆಯಾಗಿ ತನ್ನ ಓದನ್ನು ಬಿಟ್ಟು ಚಳುವಳಿಗೆ ಸೇರಲು ಶಾಸ್ತ್ರಿ ಅವರು ಒಂದೇ ಬಾರಿಗೆ ನಿರ್ಧರಿಸಿದರು. ಅವರ ನಿರ್ಧಾರ ತಾಯಿಯ ನಿರೀಕ್ಷೆಗಳನ್ನು ನುಚ್ಚುನೂರಾಗಿಸಿತು. ಲಾಲ್ ಬಹಾದ್ದೂರ್ ತನ್ನ ನಿರ್ಣಯವನ್ನು ತೆಗೆದುಕೊಂಡಿದ್ದರು. ಶಾಸ್ತ್ರಿ ಅವರಿಗೆ ಆತ್ಮೀಯರಾದವರಿಗೆಲ್ಲ ಅವರು ಒಮ್ಮೆ ನಿರ್ಣಯ ತೆಗೆದುಕೊಂಡ ಬಳಿಕ ಅವರ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ, ಅವರ ಮೃದು ಬಾಹ್ಯದ ಒಳಗಿರುವುದು ಕಲ್ಲಿನಂತಹ ದೃಢ ಮನಸ್ಸು ಎಂಬುದರ ಅರಿವಿತ್ತು.
ಬ್ರಿಟಷ್ ಆಡಳಿತಕ್ಕೆ ವಿರೋಧವಾಗಿ ಸ್ಥಾಪಿಸಲಾದ ಹಲವಾರು ರಾಷ್ಟ್ರೀಯ ಸಂಸ್ಥೆಗಳಲ್ಲೊಂದಾದ ವಾರಣಾಸಿಯ ಕಾಶಿ ವಿದ್ಯಾ ಪೀಠವನ್ನು ಲಾಲ್ ಬಹಾದ್ದೂರ ಶಾಸ್ತ್ರಿ ಸೇರಿದರು. ಅಲ್ಲಿ ಅವರು ದೇಶದ ಶ್ರೇಷ್ಠ ಬುದ್ಧೀವಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾದರು. ‘ಶಾಸ್ತ್ರಿ’ ಎಂಬುದು ವಿದ್ಯಾಪೀಠದಿಂದ ಲಾಲ್ ಬಹದ್ದೂರರಿಗೆ ನೀಡಿದ ಪದವಿ. ಆದರೆ, ಅದು ಅವರ ಹೆಸರಿನ ಭಾಗವಾಗಿ ಜನಮನದಲ್ಲಿ ಉಳಿದುಕೊಂಡಿದೆ.
1927ರಲ್ಲಿ ಅವರು ವಿವಾಹವಾದರು. ಅವರ ಪತ್ನಿ ಅವರ ಹಳ್ಳಿಯ ಪಕ್ಕದ ಮಿರ್ಜಾಪುರದ ಲಲಿತಾ ದೇವಿ. ಒಂದು ವಿಚಾರವನ್ನು ಹೊರತುಪಡಿಸಿ ಉಳಿದೆಲ್ಲಾ ವಿಚಾರಗಳಲ್ಲಿ ವಿವಾಹ ಸಾಂಪ್ರದಾಯಿಕವಾಗಿತ್ತು. ಅದೇನೆಂದರೆ ವರದಕ್ಷಿಣೆಯಾಗಿ ಕೈಮಗ್ಗದ ಕೆಲವು ಬಟ್ಟೆ ಮತ್ತು ಚರಕವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ವರ ಇದಕ್ಕಿಂತ ಹೆಚ್ಚಿನದೇನನ್ನು ಸ್ವೀಕರಿಸಲಿಲ್ಲ
1930ರಲ್ಲಿ ಮಹಾತ್ಮಾ ಗಾಂಧಿ ದಂಡಿ ಸಮುದ್ರ ತೀರದಲ್ಲಿ ನಡೆದು sಉಪ್ಪಿನ ಸಾರ್ವಭೌಮ ಕಾನೂನನ್ನು ಮುರಿದರು. ಈ ಸಾಂಕೇತಿಕ ಕಾರ್ಯ ಇಡೀ ದೇಶವನ್ನೇ ಬೆರಗುಗೊಳಿಸಿತು. ಲಾಲ್ ಬಹಾದ್ದೂರ್ ಶಾಸ್ತ್ರಿ ತಮ್ಮ ಅಗಾಧ ಶಕ್ತಿಯೊಂದಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಅವರು ಹಲವಾರು ಬ್ರಿಟಿಷ್ ವಿರೋಧಿ ಆಂದೋಲನಗಳ ನಾಯಕತ್ವ ವಹಿಸಿ ಒಟ್ಟು ಏಳು ವರುಷಗಳನ್ನು ಬ್ರಿಟಷ್ ಕಾರಾಗೃಹಗಳಲ್ಲಿ ಕಳೆದರು. ಹೋರಾಟದ ಉರಿಯಲ್ಲಿ ಬೆಂದು ಇನ್ನಷ್ಟು ಪ್ರೌಢರಾದರು.
ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ, ಸೌಮ್ಯ ಮತ್ತು ನಿರ್ಗವಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ವಾತಂತ್ರ್ಯ ಹೋರಾಟದ ನಾಯಕರುಗಳಿಂದ ಅದಾಗಲೇ ಗುರುತಿಸಿಕೊಳ್ಳಲು ಶುರುವಾದರು. 1946ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಈ ‘ಡೈನಮೊ ವ್ಯಕ್ತಿ’ಯನ್ನು ಆಡಳಿತದಲ್ಲಿ ರಚನಾತ್ಮಕ ಪಾತ್ರ ನಿರ್ವಹಿಸಲು ಕರೆಸಲಾಯಿತು. ಶಾಸ್ತ್ರಿ ಅವರನ್ನು ಅವರ ಸ್ಥಳಿಯ ರಾಜ್ಯ ಉತ್ತರ ಪ್ರದೇಶದ ಸಂಸದೀಯ ಕಾಯದರ್ಶಿಯಾಗಿ ನೇಮಿಸಲಾಯಿತು. ಶೀಘ್ರದಲ್ಲೇ ಅವರು ಗೃಹ ಸಚಿವ ಸ್ಥಾನಕ್ಕೇರಿದರು. ಅವರ ಸಾಮಥ್ರ್ಯ ಮತ್ತು ಕಠಿಣ ಪರಿಶ್ರಮ ಉತ್ತರ ಪ್ರದೇಶದಲ್ಲಿ ಮನೆಮಾತಾಯಿತು. 1951ರಲ್ಲಿ ಅವರು ನವದೆಹಲಿಗೆ ತೆರಳಿದರು. ಕೇಂದ್ರ ಮಂತ್ರಿಮಂಡಲದ ವಿವಿಧ ಖಾತೆಗಳಲ್ಲಿ ಅಧಿಕಾರ ವಹಿಸಿಕೊಂಡರು- ರೈಲ್ವೆ ಸಚಿವ, ಸಾರಿಗೆ ಮತ್ತು ಸಂಪರ್ಕ ಸಚಿವ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ, ಗೃಹ ಸಚಿವ-ನೆಹರು ಅವರ ಅನಾರೋಗ್ಯದ ಸಂದರ್ಭದಲ್ಲಿ ಖಾತೆಯಿಲ್ಲದೆ ಸಚಿವರಾಗಿದ್ದರು. ಶಾಸ್ತ್ರಿ ಅವರು ನಿರಂತರವಾಗಿ ಜನಪ್ರಿಯರಾಗುತ್ತಿದ್ದರು. ಹಲವಾರು ಜನರನ್ನು ಬಲಿ ತೆಗೆದುಕೊಂಡ ರೈಲ್ವೆ ಅಪಘಾತವೊಂದ್ಕಕೆ ತಾನು ಜವಾಬ್ಧಾರಿಯೆಂದು ಅನಿಸಿದ್ದರಿಂದ ಅವರು ತಮ್ಮ ರೈಲೆ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ಅವರ ಈ ನಿರ್ಧಾರ ಸಂಸತ್ತು ಮತ್ತು ಇಡೀ ರಾಷ್ಟ್ರದಲ್ಲೇ ಪ್ರಶಂಸೆಗೆ ಪಾತ್ರವಾಯಿತು. ಆಗಿನ ಪ್ರಧಾನಮಂತ್ರಿ ಶ್ರೀ ಜವಾಹರ್ ಲಾಲ್ ನೆಹರು ಘಟನೆಯ ಕುರಿತು ಸಂಸತ್ತಿನಲ್ಲಿ ಮಾತನಾಡುತ್ತಾ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಉನ್ನತ ಆದರ್ಶಗಳು ಮತ್ತು ದೃಢನಿಷ್ಠೆಯನ್ನು ಪ್ರಶಂಸಿಸಿದರು. ರಾಜಿನಾಮೆಯನ್ನು ಸ್ವೀಕರಿಸಿದ ನೆಹರು ಅವರು ತಾನು ಈ ರಾಜೀನಾಮೆಯನ್ನು ಸ್ವೀಕರಿಸುತ್ತಿರುವುದು ಏಕೆಂದರೆ ಈ ರಾಜೀನಾಮೆ ಸಾಂವಿಧಾನಿಕ ಔಚಿತ್ಯಕ್ಕೆ ಉದಾಹರಣೆಯಾಗಲಿದೆ ಎಂದು ವಿನಹಃ ಶಾಸ್ತ್ರಿ ಅವರು ಈ ಅವಘಢಕ್ಕೆ ಜವಾಬ್ಧಾರರೆಂದಲ್ಲ ಎಂದು ಆ ಸಂದರ್ಭದಲ್ಲಿ ಹೇಳಿದರು. ರೈಲು ದುರಂತದ ಕುರಿತು ನಡದ ದೀರ್ಘ ಚರ್ಚೆಗೆ ಪ್ರತಿಕ್ರಿಯಿಸಿದ ಶಾಸ್ತ್ರಿ ಅವರು ” ನಾನು ಗಾತ್ರದಲ್ಲಿ ಸಣ್ಣ ಮತ್ತು ಮೃದು ನಾಲಿಗೆ ಉಳ್ಳವನಾದುದರಿಂದ ಜನರು ನನಗೆ ಸ್ಥಿರವಾಗಿರಲು ಸಾಧ್ಯವಾಗುತ್ತಿಲ್ಲ ಎಂದು ನಂಬಿದ್ದಾರೆ. ದೈಹಿಕವಾಗಿ ನಾನು ಸದೃಢನಲ್ಲದಿದ್ದರೂ, ಆಂತರಿಕವಾಗಿ ಅಷ್ಟೊಂದು ನಿಶಕ್ತನಲ್ಲ ಅಂದೊಕೊಂಡಿದ್ದೇನೆ’. ಎಂದರು.
ಮೂವತ್ತು ವರುಷಗಳ ಸಮರ್ಪಣಾ ಸೇವೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹಿಂದಿತ್ತು. ಈ ಅವಧಿಯಲ್ಲಿ ಅವರೊಬ್ಬ ಪ್ರಮಾಣಿಕ ಮತ್ತು ಅತ್ಯಂತ ಸಾಮಥ್ರ್ಯವಿರುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಶಾಸ್ತ್ರಿ ಅವರು ವಿನಮ್ರತೆ, ಸಹಿಷ್ಣುತೆ, ಮಹಾನ್ ಆಂತರಿಕ ಶಕ್ತಿಯುಳ್ಳ ಮತ್ತು ದೃಢನಿಶ್ಚಯವುಳ್ಳ, ಜನರ ಭಾಷೆಯನ್ನು ಅರ್ಥೈಸಿಕೊಂಡ ಜನರ ವ್ಯಕ್ತಿಯಾದರು. ಪ್ರಗತಿಯೆಡೆಗೆ ರಾಷ್ಟ್ರವನ್ನು ಮುನ್ನಡೆಸಿದ ದೂರದೃಷ್ಠಿಯುಳ್ಳ ವ್ಯಕ್ತಿ ಅವರಾಗಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಮಹಾತ್ಮಾ ಗಾಂಧಿ ಅವರ ರಾಜಕೀಯ ಚಿಂತನೆಗಳಿಂದ ಅತ್ಯಂತ ಪ್ರಭಾವಿತರಾಗಿದ್ದರು. ‘ ಕಠಿಣ ಪರಿಶ್ರಮ ಪ್ರಾರ್ಥನೆಗೆ ಸಮನಾದುದು’ ಎಂದು ಒಮ್ಮೆ ಅವರು ತಮ್ಮ ಗುರುವನ್ನು ಸ್ಮರಿಸುತ್ತಾ ಹೇಳಿದರು. ಮಹಾತ್ಮಾ ಗಾಂಧಿ ಅವರ ನೇರ ಸಂಪ್ರದಾಯದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಭಾರತೀಯ ಸಂಸ್ಕøತಿಯನ್ನು ಪ್ರಾತಿನಿಧಿಸಿದರು.